ಕೇವಲ 5 ದಿನದಲ್ಲಿ ಟ್ರಾಫಿಕ್ ಪೊಲೀಸರು ದಂಡ ವಸೂಲಿ ಮಾಡಿದ ಹಣವೆಷ್ಟು ಗೊತ್ತಾ..?

ಬೆಂಗಳೂರು: ಟ್ರಾಫಿಕ್ ಫೈನ್ ಹೆಚ್ಚಳ ಹಿನ್ನೆಲೆ ಕೇವಲ ಐದು ದಿನಗಳಲ್ಲಿ 72 ಲಕ್ಷದ 49 ಸಾವಿರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ನಗರದಲ್ಲಿ ಹಿಂಬದಿ ಸವಾರರು ಹೆಲ್ಮೆಟ್​ ಧರಿಸದ ಪ್ರಕರಣಗಳೇ ಹೆಚ್ಚಾಗಿ ಕಂಡು ಬಂದಿದ್ದು, 2,645 ಪ್ರಕರಣಗಳಲ್ಲಿ 26 ಲಕ್ಷದ 45 ಸಾವಿರ ರೂಪಾಯಿ ದಂಡ ವಸೂಲಿ ಸಂಗ್ರಹ ಮಾಡಲಾಗಿದೆ. ಇನ್ನು ಹೆಲ್ಮೆಟ್ ಧರಿಸದ ಪ್ರಕರಣಗಳಲ್ಲಿ 19 ಲಕ್ಷದ 68 ಸಾವಿರ ರೂಪಾಯಿ ವಸೂಲಿ ಸಂಗ್ರಹ ಮಾಡಲಾಗಿದೆ.

ಇನ್ನು ಚಾಲನೆ ವೇಳೆ ಮೊಬೈಲ್ ಉಪಯೋಗಿಸಿದ ಪ್ರಕರಣಗಳಲ್ಲಿ 695 ಪ್ರಕರಣ 13 ಲಕ್ಷ 9 ಸಾವಿರ ದಂಡ ವಸೂಲಿ ಸಂಗ್ರಹಿಸಲಾಗಿದ್ದು, ಒಟ್ಟಾರೆಯಾಗಿ ಐದು ದಿನಗಳಲ್ಲೇ ಭಾರಿ ಮೊತ್ತದ ದಂಡ ವಸೂಲಿ ಆಗಿರುವುದನ್ನು ಕಾಣಬಹುದು.

ಅಲ್ಲದೇ ಟ್ರಾಫಿಕ್ ಅಪರಾಧಗಳ ಗಣನೀಯ ಕುಸಿತ ಕಂಡಿದ್ದು ಮೊದಲ ದಿನವೊಂದಕ್ಕೆ 30 ಲಕ್ಷ ಕಲೆಕ್ಟ್ ಆಗಿತ್ತು. 2,918 ಪ್ರಕರಣ ದಾಖಲಾಗಿತ್ತು. ಆದರೆ, 5 ದಿನಗಳಲ್ಲಿ 1,968 ಪ್ರಕರಣ ವಸೂಲಾದ ದಂಡ 72 ಲಕ್ಷ 49 ಸಾವಿರ 900 ರೂಪಾಯಿಗಳಾಗಿವೆ.

ಅಂತೆಯೇ ಕುಡಿದು ವಾಹನ ಚಾಲನೆ ಮಾಡಿದ ಪ್ರಕರಣದಲ್ಲೂ ಗಣನೀಯ ಇಳಿಕೆ ಕಂಡಿದ್ದು, 5 ದಿನಗಳಲ್ಲಿ ಕೇವಲ 72 ಪ್ರಕರಣ ಮಾತ್ರ ದಾಖಲಾಗಿವೆ.

Recommended For You

About the Author: TV5 Kannada

Leave a Reply

Your email address will not be published. Required fields are marked *