ಪಬ್ ಜಿ ಹುಚ್ಚು ಎಂಥಹ ಅನಾಹುತಕ್ಕೆ ಕಾರಣವಾಗುತ್ತೇ ನೋಡಿ..!

ಬೆಳಗಾವಿ: ರಾತ್ರಿ ಮೊಬೈಲ್ ಬಳಸದಂತೆ ಬುದ್ದಿ ಮಾತು ಹೇಳಿದಕ್ಕೆ ಹೆತ್ತ ತಂದೆಯನ್ನೆ ಮಗನು ಇಳಿಗೆಯಿಂದ ಕೊಚ್ಚಿ ಕೊಲೆಗೈದ ಘಟನೆಯೊಂದು ಜಿಲ್ಲೆಯ ಕಾಕತಿ ಪಟ್ಟಣದ ಸಿದ್ದೇಶ್ವರ ನಗರದಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿಯು ನಿವೃತ್ತ ಎಎಸ್ಐ ಶಂಕ್ರಪ್ಪ ಕುಂಬಾರ (60) ಎಂಬುವವರಾಗಿದ್ದು, ಜನ್ಮ ಕೊಟ್ಟ ತಂದೆಯನ್ನು ರಘುವೀರ ಕುಂಬಾರ (25) ಇಳಿಗೆಯಿಂದ ಕೊಚ್ಚಿ ಕೊಲೆಗೈದಿದ್ದಾನೆ.

ಸದಾ ಮೊಬೈಲ್ ಬಳಸುತ್ತಿರುವುದಕ್ಕೆ ನಿನ್ನೆ ಬೆಳಿಗ್ಗೆ ತಂದೆಯು ರಘುವೀರನಿಗೆ ಬುದ್ದಿ ಹೇಳಿದ್ದಾನೆ. ಇದರಿಂದ ಕುಪಿತಗೊಂಡ ಪಾಪಿ ರಘುವೀರ ಅಕ್ಕಪಕ್ಕದ ಮನೆಯವರ ಮನೆ ಕಿಟಕಿ ಗಾಜು ಒಡೆದು ರಂಪಾಟ ಮಾಡಿದ್ದಾನೆ. ಕೊಲೆಯಾಗುವುದಕ್ಕೂ ಮೊದಲು ಒಂದು ಬಾರಿ ರಘುವೀರನನ್ನು ಪೊಲೀಸರು ಠಾಣೆಗೆ ಕರೆದೊಯ್ದುದು ತಂದೆಯ ಸಮ್ಮುಖದಲ್ಲಿ ಮಗನಿಗೆ ಬುದ್ಧಿ ಮಾತು ಹೇಳಿ ಕೇಳಿಸಿದ್ದಾರೆ.

ಆದರೆ, ನಿನ್ನೆ ರಾತ್ರಿ ಆತನು ಮತ್ತೆ ಮೊಬೈಲ್​ನಲ್ಲಿ ಮಗ್ನನಾಗಿದ್ದನ್ನು ನೋಡಿದ ತಂದೆ ಶಂಕರೆಪ್ಪ, ಮಗನಿಗೆ ಬೈದಿದ್ದಾರೆ.  ಇದರಿಂದ ಕೆರಳಿದ ಮಗ, ತಾಯಿಯನ್ನು ಕೋಣೆಯಲ್ಲಿ ಕೂಡಿ ಹಾಕಿ, ಮಲಗಿದ್ದ ತಂದೆ ಕತ್ತನ್ನು ಇಳಿಗೆಯಿಂದ ಕೊಯ್ದು,  ಕತ್ತು ಮತ್ತು ಕೈ-ಕಾಲುಗಳನ್ನು ಬೇರ್ಪಡಿಸಿದ್ದಾನೆ.

ಸದ್ಯ ಮೇಲ್ನೋಟಕ್ಕೆ ಆರೋಪಿಯನ್ನು ಪಬ್​ಜೀ ಆಡಲು ಹೆತ್ತ ತಂದೆಯನ್ನೇ ಕೊಂದಿದ್ದಾನೆಂದು ಅಲ್ಲಿನ ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಆರೋಪಿ ರಘುವೀರ್​ ವಿರುದ್ಧ ಕಾಕತಿ ಪೋಲಿಸರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *