ಇಂದು ಹೊಸ ಪೊಲೀಸ್ ಆಯುಕ್ತರಾಗಲಿರುವ ಮಕ್ಕಳು..!

ಬೆಂಗಳೂರು: ಒಂದು ದಿನದ ಮಟ್ಟಿಗೆ 7 ಜನ ಮಕ್ಕಳು ನಗರ ಪೊಲೀಸ್ ಆಯುಕ್ತರಾಗಲಿದ್ದಾರೆ. ಈ ಮಕ್ಕಳೆಲ್ಲರೂ ಸಹ ಗಂಭೀರ ಖಾಯಿಲೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಅವರ ಆಸೆ ನೆರವೇರಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

ಪೊಲೀಸ್ ಅಧಿಕಾರಿಳಾಗಬೇಕೆಂಬ ಕನಸು ಕಂಡಿದ್ದ ಅನಾರೋಗ್ಯ ಪೀಡಿತ ಏಳು ಮಕ್ಕಳು ಈ ವಿಷಯ ಕುರಿತ ಪೊಲೀಸ್ ಆಯ್ತುಕರಾದ ಭಾಸ್ಕರ್​ ರಾವ್ ಅವರು ಮಹತ್ವದ ನಿರ್ಧಾರವನನ್ನು ತೆಗೆದುಕೊಂಡಿದ್ದಾರೆ.

“ಮೇಕ್ ಎ ವಿಷ್ ಫೌಂಡೇಶನ್” ಜೊತೆಗೆ ನಗರ ಪೊಲೀಸರು ಸಾಥ್​ ಕೊಡುತ್ತಿದ್ದು, ಬೆಳಿಗ್ಗೆ 11ಕ್ಕೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಮೊದಲು ಪೊಲೀಸ್ ಸಿಬಂದಿಗಳು ಏಳು ಜನ ಮಕ್ಕಳಿಗೆ ಪೊಲೀಸ್ ಗೌರವ ವಂದನೆ ಸಲ್ಲಿಸಿದ್ದಾರೆ.

ಬಳಿಕ ಮಕ್ಕಳನ್ನು ಆಯುಕ್ತರ ಅಧಿಕೃತ ಸ್ಥಾನದಲ್ಲಿ ಕೂರಿಸಿ ಕರ್ತವ್ಯ ನಿರ್ವಹಿಸಲು ಸಲಹೆ ನೀಡಲಾಗುವುದು. ಏಳು ಮಕ್ಕಳಿಗೆ ಪೊಲೀಸ್ ಆಯುಕ್ತರಾಗಿ ಇಂತಿಷ್ಟು ಸಮಯಾವಕಾಶ ನಿಗಧಿ ಮಾಡಿ ಕಾರ್ಯ ಎಲ್ಲ ಮಕ್ಕಳ ಆಸೆಯನ್ನು ಪೂರೈಸುವುದು ನಗರ ಪೊಲೀಸ್ ಆಯ್ತುಕರ ನಿರ್ಧಾರವಾಗಿದೆ.

ಕ್ಯಾನ್ಸರ್ ಗೆ ಒಳಗಾದ ಮಕ್ಕಳು
1. ಮೊಹಮ್ನದ್ ಶಕಿಬ್.
2. ರುತನ್ ಕುಮಾರ್.
3. ಅಪ್ರದ್ ಪಾಷಾ.
4. ಶ್ರಾವಣಿ ಬಟಲಾ.
5. ಸೈಯದ್ ಇಮಾನ್.

Recommended For You

About the Author: TV5 Kannada

Leave a Reply

Your email address will not be published. Required fields are marked *