Top

ರಾಜಕೀಯ ನಾಯಕರ ಟಾಪ್ ಫೇವರೇಟ್ ಕ್ರೀಮಿನಲ್ ಲಾಯರ್ ಇನ್ನಿಲ್ಲ

ರಾಜಕೀಯ ನಾಯಕರ ಟಾಪ್ ಫೇವರೇಟ್ ಕ್ರೀಮಿನಲ್ ಲಾಯರ್ ಇನ್ನಿಲ್ಲ
X

ನವದೆಹಲಿ: ಮಾಜಿ ಕಾನೂನು ಸಚಿವ, ಹಿರಿಯ ವಕೀಲ ರಾಮ್‌ ಜೇಠ್ಮಲಾನಿ ಅವರು ಇಂದು ಬೆಳಿಗ್ಗೆ 7.45 ಗಂಟೆಗೆ ದೆಹಲಿಯ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ.

95 ವಯಸ್ಸಿನ ಹಿರಿಯ ವಕೀಲರಾದ ರಾಂ ಜೇಠ್ಮಲಾನಿ ಅವರಿಗೆ ಕಳೆದ ಕೆಲವು ತಿಂಗಳಿಂದ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಅವರು ಭಾನುವಾರ ಮುಂಜಾನೆ ತಮ್ಮ ಕೊನೆಯುಸಿರು ಎಳೆದಿದ್ದಾರೆ. ಎಂದು ತಮ್ಮ ಮಗ ಮಹೇಶ ಜೇಠ್ಮಲಾನಿ ಅವರು ಪಿ.ಟಿ.ಐ ಸುದ್ದಿ ಸಂಸ್ಥೆಗೆ ಮಾಹಿತಿ ತಿಳಿಸಿದ್ದಾರೆ.

https://platform.twitter.com/widgets.js

ಶ್ರೀ ರಾಮ್ ಜೇಠ್ಮಾಲಾನಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಅವರು ನಮ್ಮ ಒಟ್ಟಿಗೆ ಇಲ್ಲ. ಆದರೆ ಅವರು ಮಾಡಿದ ಕೆಲಸ ನಮ್ಮೊಟ್ಟಿಗೆ ಇದೆ. ಅವರ ಜೊತೆಗೆ ಸಂವಾದ ನಡೆಸಿದ್ದು, ಈ ಒಂದು ಅವಕಾಶ ಸಿಕ್ಕಿದ್ದು ಬಹಳ ಖುಷಿ ಕೊಟ್ಟಿದೆ. ಅವರು ಸ್ನೇಹ ಜೀವಿ ಆಗಿದ್ದರು. ಈ ಒಂದು ಸಂದರ್ಭದಲ್ಲಿ ಅವರಿಗೆ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ದುಃಖ ಬರಿಸುವ ಶಕ್ತಿ ನೀಡಲಿ ಎಂದು ಪ್ರಧಾನಿ ಅವರು ತಮ್ಮ ಟ್ವೀಟ್​ರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.

ಸೆಪ್ಟಂಬರ್ 14, 1923 ರಂದು ರಾಂ ಜೇಠ್ಮಾಲಾನಿ ಅವರು ಜನಿಸಿದರು. ಇವರು ಅಧಿನೇಳನೆ ವಯಸ್ಸಿಗೆ ವಕೀಲ ಶಿಕ್ಷಣ ಮುಗಿಸಿ, ತಮ್ಮ ವಕೀಲ ವೃತ್ತಿಯನ್ನು ಪ್ರಥಮ ಬಾರಿಗೆ ಕರಾಚಿಯಲ್ಲಿ ವೃತ್ತಿ ಆರಂಭ ಮಾಡಿದರು. ನಂತರ ದಿನಗಳಲ್ಲಿ ಕರಾಚಿ ಬಿಟ್ಟು ಬಾಂಬೆಗೆ ಬಂದು ನೆಲೆಸಿದರು ಎಂದು ಅವರ ಅಧಿಕೃತ ವೆಬ್​ಸೈಟ್​ ತಿಳಿಸಿದೆ.

ಇವರು ವಕೀಲ ವೃತ್ತಿಯಲ್ಲಿ ಆರ್.ಜೆಡಿ ಪಕ್ಷದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್, ದೆಹಲಿ ಸಿಎಂ ಅರವಿಂದ್ ಕ್ರೇಜಿವಾಲ್ ಅವರ ಹಗರಣ, ಭ್ರಷ್ಟಾಚಾರದ ವಿರುದ್ಧ ಕೇಸ್​ಗಳನ್ನು ಗೆಲ್ಲಿಸಿಕೊಟ್ಟಿದಲ್ಲದೇ, ಹಲವು ಪ್ರಮುಖ ಕೇಸ್​ಗಳನ್ನು ನಿರ್ವಹಿಸಿ ಗೆಲ್ಲಿಸಿ ಕೊಟ್ಟ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.

https://platform.twitter.com/widgets.js

ಇದಲ್ಲದೇ ರಾಜಕೀಯ ವಲಯದಲ್ಲೂ ಗುರುತಿಸಿಕೊಂಡಿದ್ದ ರಾಮ್ ಜೇಠ್ಮಾಲನಿ. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ, ಕಾನೂನು ಸಚಿವರಾಗಿಯೂ ಕೆಲಸ ನಿರ್ವಹಿಸಿದ್ದರು, ಎನ್.ಡಿ ಎ ಸರ್ಕಾರದಲ್ಲಿ ಆರು ಬಾರಿ ರಾಜ್ಯ ಸಭಾ ಸದಸ್ಯರಾಗಿದ್ದರು. 1998 ರಿಂದ ಅಕ್ಟೋಬರ್ 1999 ರವರೆಗೂ ಮಂತ್ರಿ ಆಗಿದ್ದರು. ಒಂದು ಬಾರಿ ಬಿಜೆಪಿ ಸರ್ಕಾರದಲ್ಲಿ ಯುನಿಯನ್ ಮಿನಿಸ್ಟರ್ ಆಗಿದ್ದರು. ಬಾರ್ ಕೌನ್ಸಿಲ್ ಆಫ್ ಇಂಡಿಯಾ ಚೆರ್ಮನ್ ಆಗಿ ಕಾರ್ಯನಿರ್ವಹಿಸದಲ್ಲದೇ, ಹಲವು ಹುದ್ದೆಗಳನ್ನು ಇವರು ಕಾರ್ಯನಿರ್ವಹಿಸಿದ್ದರು.

https://platform.twitter.com/widgets.js

ಇಂದು ಬೆಳಿಗ್ಗೆ ರಾಂ ಜೇಠ್ಮಲಾನಿ ನಿವಾಸಕ್ಕೆ ತೆರಳಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದ್ದಾರೆ. ಅಲ್ಲದೇ ರಾಂ ಜೇಠ್ಮಲಾನಿ ನಿಧನಕ್ಕೆ ಹಲವು ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.

Next Story

RELATED STORIES