ದೇಶದಲ್ಲಿಯೇ ಅತ್ಯಧಿಕ ದಂಡ ಕಟ್ಟಿದ ಚಾಲಕ..!

ಓಡಿಶಾ: ಸಂಚಾರ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಲಾರಿ ಚಾಲಕನಿಗೆ ಅಲ್ಲಿನ ಸಾರಿಗೆ ಅಧಿಕಾರಿಗಳು 86,500 ರೂಪಾಯಿ ದಂಡ ವಿಧಿಸಿರುವ ಘಟನೆ ಸಂಬಾಲಪುರ ಜಿಲ್ಲೆಯಲ್ಲಿ ನಡೆದಿದೆ.

ಲಾರಿ ಚಾಲಕ ಅಶೋಕ್ ಜಾಧವ್​ ಎಂದು ತಿಳಿದು ಬಂದಿದೆ. ಲಾರಿ ಹಿಡಿದ ಅಧಿಕಾರಿಗಳು ಹಲವು ನಿಯಮಗಳ ಉಲ್ಲಂಘನೆ ಮಾಡಿದ್ದಾನೆ ಎಂದು ಅಧಿಕಾರಿಗಳು ಈ ಲಾರಿ ಹಿಡಿದಿದ್ದಾರೆ.

ನೂತನ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ ನಂತರ ಅತ್ಯಧಿಕ ದಂಡ ಪಾವತಿಸಿದ ದೇಶದ ವಾಹನ ಚಾಲಕ ಈತನದ್ದೆ ಎಂದು ಅಲ್ಲಿನ ಸುದ್ದಿವಾಹಿನಿಗಳು ವರದಿ ಮಾಡಿವೆ.

ಅಧಿಕ ಸರಕು ತುಂಬಿದ ಲಾರಿ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ ಲಾರಿಯನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ಸಂಚಾರ ನಿಯಮ ಉಲ್ಲಂಘಿಸಿದ್ದು ತಿಳಿದು ಬಂದಿದೆ. ಈ ಘಟನೆಯು ಆಗಸ್ಟ್ ಕೊನೆಯ ವಾರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸಂಬಾಲಪುರದ ಪ್ರಾದೇಶಿಕ ಸಾರಿಗೆ ಅಧಿಕಾರಿ ಲಲಿತ್ ಮೋಹನ್ ಬೆಹರಾ ಈ ಲಾರಿ ಚಾಲಕನ ನಿಯಮ ಉಲ್ಲಂಘನೆಯ ಬಗ್ಗೆ ಹಾಗೂ ದಂಡದ ಬಗ್ಗೆ ಮಾಧ್ಯಮಗಳಿಗೆ ವಿವರ ನೀಡಿ, ಅಶೋಕ್ ಜಾಧವ್ ತನ್ನ ಲಾರಿಯನ್ನು ತಾನು ಚಾಲನೆ ಮಾಡದೆ ಅನಧಿಕೃತ ವ್ಯಕ್ತಿಗೆ ನೀಡಿರುವುದಕ್ಕೆ 5,000 ಸಾವಿರ, ಲೈಸನ್ಸ್ ಇಲ್ಲದೇ ವಾಹನ ಚಾಲನೆ ಮಾಡಿದ್ದಕ್ಕೆ 5,000 ಸಾವಿರ, ಉಳಿದ 76,500 ರೂಪಾಯಿ ನಿಯಮ ಮೀರಿ ಸರಕು ಸಾಗಣೆಗೆ, ಎಲ್ಲಾ ಸೇರಿ 86,500 ದಂಡ ವಿಧಿಸಿರುವುದಾಗಿ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀಶೈಲ ಪೂಜಾರಿ

Recommended For You

About the Author: TV5 Kannada

Leave a Reply

Your email address will not be published. Required fields are marked *