ನೆಗೆಟಿವ್ ರಿವ್ಯೂ​ಗಳ ನಡುವೆ ಪಾಸಿಟಿವ್ ಕಲೆಕ್ಷನ್: ಸಾಹೋ ಬಾಚಿಕೊಂಡಿದ್ದೆಷ್ಟು..?

ರಿವ್ಯೂ ರಿಪೋರ್ಟ್​ಗಳು ಏನೇ ಬರ್ಲಿ, ಪ್ರೇಕ್ಷಕರಿಗೆ ನೋಡಬೇಕು ಎಂದೆನಿಸಿದ್ರೆ ಖಂಡಿತವಾಗಿಯೂ ಥಿಯೇಟರ್​​ ಕಡೆಗೆ ಹೆಜ್ಜೆ ಇಟ್ಟೇ ಇಡ್ತಾರೆ. ಕಳೆದ ಶುಕ್ರವಾರ ವಿಶ್ವಾದ್ಯಂತ 6 ಸಾವಿರಕ್ಕೂ ಹೆಚ್ಚು ಸ್ಕ್ರೀನ್ಸ್​ನಲ್ಲಿ ತೆರೆಕಂಡ ‘ಸಾಹೋ’ ಸಿನಿಮಾ, ಬಾಕ್ಸಾಫೀಸ್​​ನಲ್ಲಿ ಕಮಾಲ್ ಮಾಡ್ತಿದೆ. ರಿಲೀಸ್ ಆದ ಮೂರ್ನಾಲ್ಕು ದಿನಗಳಲ್ಲಿಯೇ ಮುನ್ನೂರು ಕೋಟಿ ಕ್ಲಬ್ ಸೇರಿದೆ.

ನೆಗೆಟಿವ್ ರಿವ್ಯೂ​ಗಳ ನಡುವೆ ಪಾಸಿಟಿವ್ ಕಲೆಕ್ಷನ್
ಸಾಹೋ ಅಕೌಂಟ್​​​​​ಗೆ ಝಣ್​ ಝಣಾ ಝಣ್​​​..!!

ಟಾಲಿವುಡ್​​​ನ ರೆಬೆಲ್ ಸ್ಟಾರ್ ಡಾರ್ಲಿಂಗ್ ಪ್ರಭಾಸ್ ನಟನೆಯ ‘ಸಾಹೋ’ ಬಾಕ್ಸಾಫೀಸ್​ನಲ್ಲಿ ಹಲ್​ಚೆಲ್​​ ಎಬ್ಬಿಸುತ್ತಿದೆ. ತೆರೆಕಂಡು ವಾರ ಕಳೆಯುಷ್ಟರಲ್ಲಿಯೇ 330 ಕೋಟಿ ತನ್ನ ಕಿಸೆಗೆ ಇಳಿಸಿಕೊಂಡಿದೆ.

ಸಾಹೋ ಸುನಾಮಿ ಜೋರಾಗಿದೆ.. ಬರೋಬ್ಬರಿ 6 ಸಾವಿರಕ್ಕೂ ಹೆಚ್ಚಿನ ಬೆಳ್ಳಿತೆರೆಗಳನ್ನು ಆಕ್ರಮಿಸಿದ ಸಾಹೋ ಕಲೆಕ್ಷನ್​​ನಲ್ಲಿ ಕಮಾಲ್ ಮಾಡಿದೆ. ನಾಲ್ಕು ದಿನಕ್ಕೆ 330 ಕೋಟಿ ಕಲೆಕ್ಷನ್ ಮಾಡಿದೆ. ಬರಿ ಹಿಂದಿ ಭಾಷೆಯಲ್ಲಿಯೇ ಸೆಂಚುರಿ ಬಾರಿಸಿದೆ.

‘ಸಾಹೋ’ ಹಿಂದಿಯಲ್ಲೇ 100 ಕೋಟಿ ಕಲೆಕ್ಷನ್ 
ಶುಕ್ರವಾರ 24.40 ಕೋಟಿ
ಶನಿವಾರ 25.20 ಕೋಟಿ
ಭಾನುವಾರ 29.48 ಕೋಟಿ
ಸೋಮವಾರ 14.20 ಕೋಟಿ
ಮಂಗಳವಾರ 9.10 ಕೋಟಿ
ಒಟ್ಟು 102.38 ಕೋಟಿ
ಸಾಹೋ ತೆರೆಕಂಡಾಗ ಸಿನಿಮಾಗೆ ಮಿಶ್ರಪ್ರತಿಕ್ರಿಯೆ ದಕ್ಕಿತ್ತು.. ಮಾಮೂಲಿ ಕಥೆ ಗುರು, ಸಿಕ್ಕಾಪಟ್ಟೆ ಖರ್ಚು ಮಾಡಿದ್ದಾರೆ ಅಷ್ಟೆ ಎಂದೆಲ್ಲಾ ಮಾತನಾಡಿಕೊಂಡಿದ್ರು. ಬಾಲಿವುಡ್ ಬಾಕ್ಸಾಫೀಸ್ ತಜ್ಞ ತರಣ್ ಆದರ್ಶ್​​​ ಕೂಡ ಸಿನಿಮಾಗೆ ಒಂದೂವರೆ ಸ್ಟಾರ್ ಕೊಟ್ಟು, ನೆಗೆಟಿವ್ ರಿವ್ಯೂ ಕೊಟ್ಟಿದ್ರು. ಆದ್ರೆ ಅವರೇ ಈಗ ಸಾಹೋ ಕಲೆಕ್ಷನ್​​ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹಿಂದಿ ಭಾಷೆಯಲ್ಲಿ ಸಾಹೋ ಸಿನಿಮಾ ನೂರು ಕೋಟಿ ಗಳಿಸಿರೋದ್ರ ಬಗ್ಗೆ ಲೆಕ್ಕಾಚಾರವನ್ನು ಕೊಟ್ಟಿದ್ದಾರೆ.

ಕಲೆಕ್ಷನ್ ವಿಚಾರದಲ್ಲಿ ಸಾಹೋ ಇನ್ನಷ್ಟು ದೂರ ಸಾಗಬೇಕಿದೆ. ಬರೋಬ್ಬರಿ 300ರಿಂದ 350 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸಿನಿಮಾ ಇದು. ಈಗಾಗಲೇ ಹಾಕಿದ ಬಂಡವಾಳ ವಾಪಸ್ ಬಂದಿದೆ. ಆದ್ರೆ ಸಿನಿಮಾ ವಿತರಕರು, ಪ್ರದರ್ಶಕರು, ಥಿಯೇಟರ್ ಮಾಲೀಕರು ಇನ್ನುಳಿದವರಿಗೆ ಲಾಭ ಬೇಕಲ್ವಾ. ಇನಷ್ಟು ಕಲೆಕ್ಷನ್ ಆದ್ರೆ ಮಾತ್ರ ಸಾಹೋ ಸೂಪರ್ ಹಿಟ್ ಅಂತ ಬಣ್ಣಿಸಬಹುದು. ಸಾಹೋ ಸಿನಿಮಾ ಮುಂದಿನ ದಿನಗಳಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಾ ಕಾದು ನೋಡಬೇಕು.
ಎಂಟರ್​​​​​​​​​​​ಟೈನ್ಮೆಂಟ್ ಬ್ಯೂರೋ-ಟಿವಿ5

Recommended For You

About the Author: TV5 Kannada

Leave a Reply

Your email address will not be published. Required fields are marked *