ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್​ಗೆ ಮಿಥಾಲಿ ರಾಜ್​​ ನಿವೃತ್ತಿ ಘೋಷಣೆ

ನವದೆಹಲಿ: ಹಿರಿಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಅವರು ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್​ ತಂಡದಿಂದ ಮಂಗಳವಾರ ನಿವೃತ್ತಿ ಘೋಷಿಸಿದ್ದಾರೆ. 2012, 2014 ಮತ್ತು 2016ರಲ್ಲಿ ಮಹಿಳಾ ವಿಶ್ವಕಪ್​ ಟಿ-20ಯ ಮೂರು ಆವೃತ್ತಿಗಳು ಸೇರಿದಂತೆ ಒಟ್ಟು 32 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದರು. ಇವರಿಗೆ ಸದ್ಯ 36 ವರ್ಷದರಾಗಿದ್ದಾರೆ.

“2006 ರಿಂದ ಟಿ-20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಬಳಿಕ, ನನ್ನ ಶಕ್ತಿಯನ್ನು ಸಿದ್ಧತೆ ಮಾಡಿಕೊಳ್ಳಲು ಅಂತಾರಾಷ್ಟ್ರೀಯ ಟಿ-20 ಕ್ರಿಕೆಟಿಗೆ ನಿವೃತ್ತಿ ಹೇಳಲು ನಾನು ಬಯಸುತ್ತೇನೆ. 2021 ಏಕದಿನ ವಿಶ್ವಕಪ್‌ಗಾಗಿ ನಾನೇ. ನನ್ನ ದೇಶಕ್ಕಾಗಿ ವಿಶ್ವಕಪ್ ಗೆಲ್ಲುವುದು ನನ್ನ ಕನಸಾಗಿ ಉಳಿದಿದೆ ಅದನ್ನು ನನ್ನ ಅತ್ಯುತ್ತಮವಾಗಿ ಆಡಲು ನಾನು ಬಯಸುತ್ತೇನೆ ” ಎಂದು ಬಿಸಿಸಿಐ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಮಿಥಾಲಿ ರಾಜ್ ಅವರು ಹೇಳಿಕೊಂಡಿದ್ದಾರೆ.”

ಬಿಸಿಸಿಐ ಅವರ ನಿರಂತರ ಬೆಂಬಲಕ್ಕಾಗಿ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಮತ್ತು ದಕ್ಷಿಣ ಆಫ್ರಿಕಾ ಮಹಿಳೆಯರ ವಿರುದ್ಧದ ತವರು ಸರಣಿಗೆ ಭಾರತೀಯ ಟಿ-20 ತಂಡಕ್ಕೆ ಶುಭ ಹಾರೈಸುತ್ತೇನೆ” ಎಂದು ಮಿಥಾಲಿ ರಾಜ್ ಹೇಳಿದ್ದಾರೆ.

ಮಿಥಾಲಿ ರಾಜ್ ಅವರು 2006ರಲ್ಲಿ ಡರ್ಬಿಯಲ್ಲಿ ಆಡಿದ ಭಾರತದ ಮಹಿಳಾ ಮೊದಲ ಟಿ -20 ಪಂದ್ಯದಲ್ಲಿ ನಾಯಕರಾಗಿದ್ದರು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಗೆಲುವಿನ ಬಳಿಕ, ಅವರು ಇನ್ನೂ 88 ಪಂದ್ಯಗಳನ್ನು ಆಡಿದರು, ಇದರಲ್ಲಿ ಅವರು 2364ರನ್ ಗಳಿಸಿದರು, ಟಿ-20ನಲ್ಲಿ ಭಾರತೀಯ ಮಹಿಳೆಯೊಬ್ಬರು ಹೆಚ್ಚು ರನ್​ಗಳಿಸಿದವರು ಎಂಬ ಹೆಸರಿಗೆ ಪಾತ್ರರಾಗಿದ್ದಾರೆ.

ಮಿಥಾಲಿ ರಾಜ್ ಅವರು ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ 2000 ರನ್‌ಗಳ ಹೆಗ್ಗುರುತನ್ನು ತಲುಪಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.

ಸೆಪ್ಟೆಂಬರ್ 24 ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧ ಐದು ಅಂತಾರಾಷ್ಟ್ರೀಯ ಟಿ-20 ಪಂದ್ಯಗಳ ಸರಣಿಯನ್ನು ಭಾರತದ ಮಹಿಳೆಯರ ತಂಡ ಎದುರಿಸಲಿದ್ದಾರೆ.   2020ರ ಫೆಬ್ರವರಿ-ಮಾರ್ಚ್​ನಲ್ಲಿ ಟಿ-20 ವಿಶ್ವಕಪ್ ಕ್ರಿಕೆಟ್​ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ.

Recommended For You

About the Author: TV5 Kannada

Leave a Reply

Your email address will not be published. Required fields are marked *