ಕೇಂದ್ರಮಂತ್ರಿ ಸುರೇಶ್ ಅಂಗಡಿ ಕೇಳಿರುವ ಸಚಿವ ಸ್ಥಾನ ಎಷ್ಟು ಗೊತ್ತಾ?

ಬೆಳಗಾವಿ: ಟೆಲಿಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿದಂತೆ ಯಾರೇ ತಪ್ಪು ಮಾಡಿದರು ಶಿಕ್ಷೆ ಆಗಬೇಕು ಎಂದು ಕೇಂದ್ರ ಸಚಿವ ಸುರೇಶ್ ಅಂಗಡಿ ಅವರು ಸೋಮವಾರ ಹೇಳಿದರು.

ಬೆಳಗಾವಿಯಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಕರ್ನಾಟಕದ ರಾಜಕಾರಣ ನೈತಿಕತೆಗೆ ಹೆಸರುವಾಸಿಯಾಗಿದೆ, ಈ ಹಿಂದೆ ಟೆಲಿಫೋನ್ ಕದ್ದಾಲಿಕೆ ಪ್ರಕರಣ ಕೇಳಿ ಬಂದಾಗ ರಾಮಕೃಷ್ಣ ಹೆಗಡೆ ರಾಜೀನಾಮೆ ನೀಡಿದರು ಎಂದು ಅವರು ತಿಳಿಸಿದರು.

ಇನ್ನು ಪ್ರತಿಯೊಬ್ಬರ ಖಾಸಗಿ ವಿಚಾರಗಳು ಗೌಪ್ಯವಾಗಿರಬೇಕು, ಖಾಸಗಿ ವಿಚಾರಗಳನ್ನು ಕದ್ದಾಲಿಸುವುದು ಅಪರಾಧವಾಗಿದೆ, ಟೆಲಿಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದ್ದನ್ನು ನಾನು ಸ್ವಾಗತಿಸುತ್ತೇನೆ, ಕದ್ದಾಲಿಕೆ ಮಾಡಿಲ್ಲ ಅಂದರೆ ಹೆಚ್.ಡಿ ಕುಮಾರಸ್ವಾಮಿ ಅವರು ಹೆದರುವ ಅಗತ್ಯವಿಲ್ಲ ಎಂದರು.

ನಾಳೆ ಸಚಿವ ಸಂಪುಟ ರಚನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರಿಗೆ ತಮ್ಮ ಸಂಪುಟ ರಚಿಸುವ ಹಕ್ಕು ಇದೆ, ಹೀಗಾಗಿ ಪಕ್ಷದ ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರು ಯಾರು ಸಚಿವರಾಗಬೇಕೆಂದು ತೀರ್ಮಾನ ಮಾಡುತ್ತಾರೆ, ಪ್ರವಾಹದಿಂದ ಉತ್ತರ ಕರ್ನಾಟಕ ತತ್ತರಿಸಿ ಹೋಗಿದೆ, ಹೀಗಾಗಿ ನಾವು ರಾಜಕೀಯಕ್ಕೆ ಹೆಚ್ಚಿನ ಒತ್ತು ನೀಡದೇ ಸಂಪುಟ ವಿಸ್ತರಣೆ ಮಾಡುತ್ತಿದ್ದೇವೆ ಎಂದು ಸುರೇಶ್ ಅಂಗಡಿ ಅವರು ನುಡಿದರು.

ಸದ್ಯ ಬೆಳಗಾವಿ ಜಿಲ್ಲೆಗೆ ನಾಲ್ಕು ಮಂತ್ರಿ ಸ್ಥಾನ ನೀಡಬೇಕೆಂದು ಕೇಳಿದ್ದೇವೆ, ಜಿಲ್ಲೆ ದೊಡ್ಡದಾಗಿದ್ದು, ಬೆಳಗಾವಿ ಲೋಕಸಭೆಗೆ ಎರಡು ಮಂತ್ರಿ ಸ್ಥಾನ, ಚಿಕ್ಕೋಡಿ ಲೋಕಸಭೆಗೆ ಎರಡು ಮಂತ್ರಿ ಸ್ಥಾನ ನೀಡುವಂತೆ ಮನವಿ ಮಾಡಿದ್ದೇವೆ ಎಂದು ಕೇಂದ್ರ ಮಂತ್ರಿ ಸುರೇಶ್ ಅಂಗಡಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *