ಬಿಜೆಪಿ ಹಿರಿಯ ಶಾಸಕರ ವಿರುದ್ದ ಆಪರೇಷನ್ ಕಮಲದ ರೂವಾರಿಗಳು ಗರಂ!

ಬೆಂಗಳೂರು: ಈಗ ಬಿ.ಎಸ್​ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗೋದಕ್ಕೆ ಕಾರಣ ನಾವು ಆದರೆ ಸೀನಿಯರ್ಸ್ ಅನಿಸಿಕೊಂಡಿರೋ ಇವರಿಗೆ ಮೊದಲ ಹಂತದಲ್ಲಿಯೇ ಸಚಿವರಾಗಬೇಕಂತೆ, ಇವರು ಕೇಳಿರೋ ಖಾತೆನೇ ಬೇಕಂತೆ ಎಂದು ಆಪರೇಷನ್ ಕಮಲದ ರೂವಾರಿಗಳು ಗರಂ ಆಗಿದ್ದಾರೆ.

ಇನ್ನು ಬಿಎಸ್​ವೈ ಅವರು ಸರ್ಕಾರ ಬರಲಿಕ್ಕೆ ಹಗಲು-ರಾತ್ರಿ ಕಷ್ಟ ಪಟ್ಟವರು ನಾವು, ಹಣ, ಸಮಯ ಎಲ್ಲಾ ಖರ್ಚಾಗಿದ್ದು ನಮ್ದು, ಅಧಿಕಾರ ಮಾತ್ರ ಮೊದಲು ಇವರಿಗೇ ಬೇಕು ಎಂದು ಆಪರೇಷನ್ ಕಮಲ ರೂವಾರಿಗಳು ತಮ್ಮ ತಮ್ಮಲ್ಲೇ ಚರ್ಚೆ ನಡೆಸಿ ಬೇಸರಗೊಂಡಿರುವ ವ್ಯಕ್ತಪಡಿಸುತ್ತಿದ್ದಾರೆ.

ಸದ್ಯ ಆಪರೇಷನ್​ ಕಮಲದ ರೂವಾರಿಗಳು ಎನ್ನಲಾಗಿರುವ ಅಶ್ವಥ್ ನಾರಾಯಣ, ಎಸ್.ಆರ್ ವಿಶ್ವನಾಥ್, ಅರವಿಂದ ಲಿಂಬಾವಳಿ, ಸಿ.ಪಿ ಯೋಗೇಶ್ವರ್ ಅವರಿಗೆ ಬೇಸರವಾಗಿ ಈ ರೀತಿಯ ಚರ್ಚೆ ನಡೆಸಲಾಗಿದ್ದು ಹಿರಿಯ ಬಿಜೆಪಿ ಶಾಸಕರ ಮೇಲೆ ಒಳಗೊಳಗೆ ಗರಂ ಆಗಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *