‘ನನಗೆ ಮೂರು ಸಲ ಸಿಎಂ ಆಗುವ ಅವಕಾಶವಿತ್ತು’- ಮಾಜಿ ಡಿಸಿಎಂ ಪರಮೇಶ್ವರ್

ತುಮಕೂರು: ರಾಜ್ಯದ ಜನರ ಸೇವೆ ಮಾಡಲು ನನಗೆ ಮೂರು ಸಲ ಮುಖ್ಯಮಂತ್ರಿ ಆಗುವ ಅವಕಾಶವಿತ್ತು ಎಂದು ಮಾಜಿ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರು ಸೋಮವಾರ ತಿಳಿಸಿದ್ದಾರೆ.

ತುಮಕೂರಿನ ಕೊರಟಗೆರೆ ಕಾರ್ಯಕ್ರಮದಲ್ಲಿಂದು ಮಾತನಾಡಿದ ಅವರು, ರಾಜಕೀಯ ದೊಂಬರಾಟದ ನಡುವೆ ನನಗೆ ಸಿಎಂ ಆಗುವ ಅವಕಾಶ ಕೈತಪ್ಪಿದೆ ಎಂದು ಅವರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಇನ್ನು ರಾಜ್ಯದಲ್ಲಿನ ವಿಭಿನ್ನ ರೀತಿಯ ರಾಜಕೀಯ ನಡೆಗಳಿಂದಾಗಿ ಮೂರೂ ಬಾರಿಯೂ ಅವಕಾಶಗಳು ಕೈಜಾರಿ ಹೋಗಿದೆ. ರಾಜ್ಯದ ಸರಕಾರಿ ಇಲಾಖೆಯ ಅಧಿಕಾರಿಗಳಿಗೆ ಉನ್ನತ ಸ್ಥಾನ ನೀಡಲು ಜಾತಿಯ ಪಾತ್ರವೇ ಮುಖ್ಯ ಪಾತ್ರವಹಿಸುತ್ತದೆ ಎಂದು ಅವರು ಹೇಳಿದರು.

ಇನ್ನು ರಾಜಕಾರಣಿಗಳ ಸಮುದಾಯಕ್ಕೆ ಮುಖ್ಯಸ್ಥಾನ ಕೊಡುತ್ತಿರುವುದು ದುರ್ದೈವವಾಗಿದೆ, ಸರ್ಕಾರ ನಡೆಸುವ ರಾಜಕಾರಣಿಗಳ ಮನಸ್ಸು ಬದಲಾವಣೆ ಆದರೆ ಮಾತ್ರ ಜಾತಿಯ ವ್ಯವಸ್ಥೆ ಬದಲಾಗಲು ಸಾಧ್ಯವಾಗುತ್ತದೆ ಎಂದು ಡಾ. ಜಿ ಪರಮೇಶ್ವರ್ ಅವರು ಕೊರಟಗೆರೆಯ ಖಾಸಗಿ ಕಾರ್ಯಕ್ರಮದಲ್ಲಿ ತಮ್ಮ ನೋವು ತೋಡಿಕೊಂಡ ಹಂಚಿಕೊಂಡಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *