ಆಗಸ್ಟ್ 18, 2008 ವಿರಾಟ್ ಕೊಹ್ಲಿಗೆ ಮರೆಯಲಾಗದ ದಿನ ಏಕೆ ಅಂತ ನೀವು ನೋಡಿ!

ನವದೆಹಲಿ: ಆಗಸ್ಟ್ 18, 2008ರಂದು (ಈ ದಿನ) ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರು ಅಂತಾರಾಷ್ಟ್ರೀಯ ಏಕದಿನ (50 ಓವರ್​) ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ದಿನವಾಗಿದ್ದು ಹೀಗಾಗಿ ರನ್​ ಮಿಷನ್​ಗೆ ವಿರಾಟ್ ಕೊಹ್ಲಿ ಅವರಿಗೆ ಇವತ್ತು ವಿಶೇಷವಾಗಿದೆ.

ವಿರಾಟ್ ಅವರು ಸದ್ಯ ಟೀಂ ಇಂಡಿಯಾದಲ್ಲಿ ಅಬ್ಬರಿಸುತ್ತಿದ್ದು ಅವರ ಬ್ಯಾಟಿಂಗ್ ವೈಖರಿಗೆ ಇಡೀ ಕ್ರಿಕೆಟ್​ ಜಗತ್ತು ಸಲಾಂ ಎಂದಿದೆ. ಅಲ್ಲದೇ ಅವರು ಈ ಹನ್ನೊಂದು ವರ್ಷದಲ್ಲಿ ಸಾಕಷ್ಟು ದಾಖಲೆಗಳನ್ನು ಅವರ ಹೆಸರಿಗೆ ಬರೆದುಕೊಂಡಿದ್ದಾರೆ.

ಇನ್ನು ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ ನಾಯಕ ವಿರಾಟ್ ಕೊಹ್ಲಿ ಅವರು ಮೊದಲ ಅಂತಾರಾಷ್ಟ್ರೀಯ ಪದಾರ್ಪಣೆ ಪಂದ್ಯವನ್ನು ಶ್ರೀಲಂಕಾದ ವಿರುದ್ಧ ಆಡಿದರು. ಆ ಪಂದ್ಯದಲ್ಲಿ ಅವರು 12 ರನ್​ಗಳನ್ನು ಸಹ ಗಳಿಸಿದ್ದರು.

ವಿರಾಟ್ ಅವರು ಮೊದಲ ಸೆಂಚುರಿ ಬಾರಿಸಿದ್ದು 2009ರಲ್ಲಿ ಆದರೆ ಈಗ ಅವರು ಏಕದಿನ ಕ್ರಿಕೆಟ್​ನಲ್ಲಿ ಜಗತ್ತಿನಲ್ಲೇ ಸಚಿನ್ ತೆಂಡೂಲ್ಕರ್​​ ಬಿಟ್ಟರೇ ಅತೀ ಹೆಚ್ಚು (43) ಶತಕ ದಾಖಲಿಸಿದ 2ನೇ ಆಟಗಾರ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.

https://platform.twitter.com/widgets.js

https://platform.twitter.com/widgets.js

https://platform.twitter.com/widgets.js

Recommended For You

About the Author: TV5 Kannada

Leave a Reply

Your email address will not be published. Required fields are marked *