ಸೈಮಾ ಅವಾರ್ಡ್ಸ್- ರಾಕಿಭಾಯ್‍​ಗೆ ಒಲಿದ ಅತ್ಯುತ್ತಮ ನಾಯಕ ನಟ ಪ್ರಶಸ್ತಿ

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅದ್ದೂರಿಯಾಗಿ ಸೈಮಾ ಅವಾರ್ಡ್ಸ್ ನಡೆದಿದ್ದು, ನಿನ್ನೆ ಅಂದರೆ ಆಗಸ್ಟ್ 15 ರಂದು ಕತಾರ್​ನ ವೇದಿಕೆಯಲ್ಲಿ ಸಾಕಷ್ಟು ಕನ್ನಡ ಸಿನಿಮಾಗಳು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿವೆ.

ಈ ವರ್ಷದ ಸೈಮಾ ಅವಾರ್ಡ್ಸ್ ನಲ್ಲಿ ಪ್ರಶಸ್ತಿ ಬಾಚಿಕೊಂಡ ಕನ್ನಡ ಸಿನಿಮಾಗಳ ಪಟ್ಟಿ ನೋಡೋದಾದರೆ ಮೊದಲಿಗೆ ಸೈಮಾ ಅತ್ತ್ಯುತ್ತಮ ನಟನಾಗಿ ರಾಕಿಂಗ್​ ಸ್ಟಾರ್ ಯಶ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕೆಜಿಎಫ್​ ಚಿತ್ರ ಸ್ಯಾಂಡಲ್​ವುಡ್​ ಸೇರಿದಂತೆ ವಿಶ್ವದಾದ್ಯಂತ ಸಖತ್​ ಸುದ್ದಿ ಮಾಡಿದ್ದು, ಕೆಜಿಎಫ್ ಚಿತ್ರಕ್ಕಾಗಿ ಯಶ್ ಈ ಭಾರಿ ಸೈಮಾ ಅವಾರ್ಡ್​ಗೆ ಭಾಜನರಾಗಿದ್ದಾರೆ.

ಇನ್ನು ಕೆಜಿಎಫ್​ ಮೂಲಕ ಯಶ್ ಅತ್ಯುತ್ತಮ ನಟ ಪ್ರಶಶ್ತಿ ಪಡೆದುಕೊಂಡರೆ. ಅದೇ ಕೆಜಿಎಫ್​ ಚಿತ್ರದ ನಿರ್ದೇಶಕ ಪ್ರಶಾಂತ್​ ನೀಲ್ ಬೆಸ್ಟ್ ಡೈರೆಕ್ಟರ್ ಅವಾರ್ಡ್​ನ್ನು ಮುಡಿಗೇರಿಸಿಕೊಂಡಿದ್ದಾರೆ. ಕೆಜಿಎಫ್​ ಚಿತ್ರದ ಮೂಲಕ ಕೇವಲ ಈ ಎರಡು ಅವಾರ್ಡ್​ಗಳು ಮಾತ್ರವಲ್ದೆ, ಅತ್ಯುತ್ತಮ ಛಾಯಾಗ್ರಾಹಕನಾಗಿ ಕೆಜಿಎಫ್​ನ ಭುವನ್​ಗೌಡ ಹಾಗೂ ಅತ್ತ್ಯುತ್ತಮ ಪೋಷಕ ನಟಿಯಾಗಿ ಅರ್ಚನಾ ಜೋಯಿಸ್​ ಕೂಡ ಸೈಮಾ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಕೆಜಿಎಫ್​ಗೆ ಒಟ್ಟಾರೆ 4 ಅವಾರ್ಡ್​ಗಳು ದೊರಕಿದ್ದು, ಟಗರು ಚಿತ್ರದ ಪಾಲಿಗೆ 2 ಸೈಮಾ ಅವಾರ್ಡ್​ಗಳು ದೊರಕಿವೆ. ಟಗರು ಚಿತ್ರದ ಅಭಿನಯಕ್ಕಾಗಿ ಅತ್ತ್ಯುತ್ತಮ ಖಳನಟ ಪ್ರಶಸ್ತಿಯನ್ನು ನಟ ಧನಂಜಯ್​ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಟಗರು ಚಿತ್ರ ಹೋಲ್ಡಾನ್, ಹೋಲ್ಡಾನ್ ಹಾಡಿಗಾಗಿ ಅನನ್ಯ ಭಟ್ ಅತ್ತ್ಯುತ್ತಮ ಗಾಯಕಿ ಪ್ರಶ್ತಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಇನ್ನು ಅತ್ತ್ಯುತ್ತಮ ನವ ನಟಿ ಆ ಕರಾಳ ರಾತ್ರಿ ಚಿತ್ರಕ್ಕಾಗಿ ಅನುಪಮ ಗೌಡ, ಹಾಗೂ ಅತ್ತ್ಯುತ್ತಮ ನವ ನಿರ್ದೇಶಕ ಅಯೋಗ್ಯ ಚಿತ್ರಕ್ಕಾಗಿ ಮಹೇಶ್ ಕುಮಾರ್ ಸೈಮಾ ಅವಾರ್ಡ್​ನ್ನು ಪಡೆದುಕೊಂಡಿದ್ದಾರೆ.

ಅಯೋಗ್ಯ ಚಿತ್ರಕ್ಕೆ ನವ ನಿರ್ದೇಶಕ ಪ್ರಶಸ್ತಿ ಮಾತ್ರವಲ್ದೆ, ಏನಮ್ಮಿ ಏನಮ್ಮಿ ಹಾಡಿಗಾಗಿ ಅತ್ತ್ಯುತ್ತಮ ಗೀತರಚನೆಗಾಗಿ ಚೇತನ್​ ಕುಮಾರ್ ಕೂಡ ಪ್ರಶಸ್ತಿ ಪಡೆದಿದ್ದು, ಅತ್ತ್ಯುತ್ತಮ ಫೋಷಕ ನಟನಾಗಿ ನಟ ಪ್ರಕಾಶ್ ಕೆ ತುಮಿನಾಡು , ಸರ್ಕಾರಿ ಹಿರಿಯ ಪ್ರಾಥಮಿಕ ಚಿತ್ರಕ್ಕಾಗಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.​

ಮೇಲ್ಕಂಡ ಎಲ್ಲಾ ಪ್ರಶಸ್ತಿಗಳ ಬಗ್ಗೆ ಸ್ವತ: ಸೈಮಾ ವೆಬ್​ಸೈಟ್​ ಅಫಿಶೀಯಲ್​ ಆಗಿ ಅನೌನ್ಸ್​ ಮಾಡಿದ್ದು, ಇದರ ಜೊತೆಗೆ ಅತ್ತ್ಯುತ್ತಮ ಸಿನಿಮಾ,ಅತ್ತ್ಯುತ್ತಮ ನಟಿ, ಗಾಯಕ, ಹಾಗೂ ನವ ನಟ ಪ್ರಶ್ತಿಯನ್ನು ಇನ್ನಷ್ಟೇ ಹಂಚಿಕೊಳ್ಳಬೇಕಾಗಿದೆ.

ಅರ್ಚನಾ ಶರ್ಮಾ, ಎಂಟರ್​ಟೈನ್ಮೆಂಟ್ ಬ್ಯುರೋ,ಟಿವಿ5

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.