ನೆರೆ ಸಂತ್ರಸ್ತರಿಗೆ ಡಿ.ಸಿ ತಮ್ಮಣ್ಣ ಡಿಮ್ಯಾಂಡ್ ಮಾಡಿದ ಪರಿಹಾರ​ ಎಷ್ಟು ಗೊತ್ತಾ?

ಹುಬ್ಬಳ್ಳಿ: ಅತಿವೃಷ್ಠಿಯಿಂದಾಗಿ ಈ ಭಾಗದಲ್ಲಿ ಸಾವಿರಾರು ಕುಟುಂಬಗಳು ನಷ್ಟ ಅನುಭವಿಸಿವೆ. ಈ ಹಿನ್ನೆಲೆಯಲ್ಲಿ ನಮ್ಮ ಕೈಲಾದ ಸಹಾಯ ಮಾಡುತ್ತಿದ್ದೇವೆ ಎಂದು ಮಾಜಿ ಸಚಿವ ಡಿ.ಸಿ ತಮ್ಮಣ್ಣ ಅವರು ಶುಕ್ರವಾರ ಹೇಳಿದರು.

ಹುಬ್ಬಳ್ಳಿಯಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ನೆರೆ ಸಂತ್ರಸ್ಥರಿಗಾಗಿ ಆರು ಲಾರಿ ಆಹಾರ ಸಾಮಗ್ರಿ ಒದಗಿಸುತ್ತಿದ್ದೇವೆ, 50 ಲಕ್ಷ ರೂ. ವೆಚ್ಚದಲ್ಲಿ ಆಹಾರ ಪದಾರ್ಥಗಳು ಹಾಗೂ ಸಾಮಗ್ರಿಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.

ಇನ್ನು ಡಿ.ಸಿ ತಮ್ಮಣ್ಣ ಸೇವಾ ಪ್ರತಿಷ್ಠಾನ ಫೌಂಡೇಶನ್ ವತಿಯಿಂದ ಈ ಸಹಾಯ ಮಾಡಲಾಗುತ್ತಿದೆ, ಈ ಪ್ರವಾಹದ ಬಗ್ಗೆ ಕೇಂದ್ರ ಸರ್ಕಾರವೂ ಗಂಭೀರವಾಗಿ ಪರಿಗಣಿಸಬೇಕು, ಸಂತ್ರಸ್ಥರ ನೆರವಿಗಾಗಿ ಸಿಎಂ 5 ಸಾವಿರ ಕೋಟಿ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದಾರೆ ಎಂದು ಅವರು ತಿಳಿಸಿದರು.

ಆದರೆ, ಐದು, ಹತ್ತು ಸಾವಿರ ಕೋಟಿ ಯಾವುದಕ್ಕೂ ಸಾಲುವುದಿಲ್ಲ ಇನ್ನೂ ಹೆಚ್ಚಿನ ಪರಿಹಾರ ಒದಗಿಸಬೇಕು, ಸದ್ಯದ ಮಟ್ಟಿಗೆ ಕೇಂದ್ರ ಸರ್ಕಾರ ಕೂಡಲೇ 10 ಸಾವಿರ ಕೋಟಿ ಬಿಡುಗಡೆ ಮಾಡಬೇಕು ಎಂದು ಅವರು ನುಡಿದರು.

ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ಅಧಿಕಾರ ಅವಧಿಯಲ್ಲಿ ಫೋನ್ ಕದ್ದಾಲಿಕೆ ಆರೋಪ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ಈ ಹಿಂದೆ ಇದ್ದ ಸರ್ಕಾರಗಳೂ ಫೋನ್ ಕದ್ದಾಲಿಕೆ ಮಾಡಿವೆ, ಇದೇನು ಫೋನ್ ಕದ್ದಾಲಿಕೆ ಮಾಡುವುದು ಇತಿಹಾಸದಲ್ಲಿ ಹೊಸದೇನಲ್ಲ, ಈ ಹಿಂದೆ ಕೇಂದ್ರ ಸರ್ಕಾರವೂ ಈ ಫೋನ್ ಕದ್ದಾಲಿಕೆ ಮಾಡಿದೆ, ಈ ಬಗ್ಗೆ ಸರ್ಕಾರ ತನಿಖೆ ಮಾಡಲಿ ಎಂದು ಡಿ.ಸಿ ತಮ್ಮಣ್ಣ ಅವರು ತಿಳಿಸಿದರು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.