ಮದುವೆ ಆಗೋಣ ಬಾ ಎಂದ…ಪ್ರೇಯಸಿ ಹೋದಳು ಆದರೆ ನಡೆದಿದ್ದೇ ಬೇರೆ..!

ತುಮಕೂರು: ಮದುವೆ ತಡವಾಗಿ ಆಗೋಣ ಎಂದಿದಕ್ಕೆ ಪ್ರಿಯತಮೆಯನ್ನು ಕತ್ತು ಹಿಸುಕಿ ಸಾಯಿಸಲು ಯತ್ನಿಸಿದ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಮದಲೂರು ಗ್ರಾಮದಲ್ಲಿ ನಡೆದಿದೆ.

ಮಹಾವೀರ ಭಕ್ತ ಗುರುನಾನಕ್ (23) ಎಂಬ ಹುಚ್ಚು ಪ್ರೇಮಿ ತನ್ನ ಪ್ರಿಯತಮೆ ಪ್ರೇಮಾಳ (23) ಸಾಯಿಸಲು ಮುಂದಾಗಿದ್ದಾನೆ.

ಮದಲೂರು ಗ್ರಾಮಕ್ಕೆ ಯುವತಿಯನ್ನು ಕರೆಯಿಸಿಕೊಂಡು ಅತೀ ಶೀಘ್ರದಲ್ಲೆ ಮದುವೆಯಾಗುವಂತೆ ಒತ್ತಡ ಹಾಕಿದ್ದಾನೆ.  ಚಿತ್ರದುರ್ಗದಲ್ಲಿ ಬಿ.ಎಸ್ಸಿ ನರ್ಸಿಂಗ್ ಓದುತ್ತಿರುವ ಹುಡುಗಿ ಈಗಲೇ ಮದುವೆ ಬೇಡ ಎಂದಿದ್ದಾಳೆ. ಇದಕ್ಕೆ ಸಿಟ್ಟಿಗೆದ್ದ ಮಹಾವೀರ್ ಪ್ರೇಮಾಳ ವೇಲ್ ನಿಂದ ಆಕೆಯ ಕುತ್ತಿಗೆ ಹಿಸುಕಿ ಸಾಯಿಸಲು ಮಾಡಲು ಪ್ರಯತ್ನಿಸಿದ್ದಾನೆ. ಪರಿಣಾಮ ಪ್ರೇಮಾ ಪ್ರಜ್ಞಾ ಹೀನಳಾಗಿ ಬಿದ್ದಿದ್ದಾಳೆ.

ಬಳಿಕ ಪ್ರಿಯತಮೆ ಸತ್ತಿದ್ದಾಳೆ ಎಂದು ಭಾವಿಸಿದ ಮಹಾವೀರ ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಜ್ಞೆ ಬಂದ ಬಳಿಕ ಪ್ರೇಮಾ ತನ್ನ ಮನೆಯವರಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ದಾಳೆ. ಸದ್ಯ ಯುವತಿ ಸ್ಥಿತಿ ಗಂಭೀರವಾಗಿದ್ದು ಬೆಂಗಳೂರಿನ ನಿಮ್ಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಇನ್ನೂ ಮಹಾವೀರ ಭಕ್ತ ಗುರುನಾನಕ್ ಮದಲೂರು ಜಿ.ಪಂ ಕ್ಷೇತ್ರದ ಸದಸ್ಯೆ ಲಕ್ಷ್ಮಿ ದೇವಮ್ಮಳ ಮಗನೆಂದು ತಿಳಿದು ಬಂದಿದ್ದು, ಈ ಸಂಬಂಧ ಶಿರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.