ಸಚಿವ ಸಂಪುಟ ರಚನೆಗೆ ಗ್ರೀನ್‌ ಸಿಗ್ನಲ್‌? ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ

ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಸಚಿವ ಸಂಪುಟ ವಿಸ್ತರಣೆಯಾಗದಿರುವುದಕ್ಕೆ ಪ್ರತಿಪಕ್ಷ ಮತ್ತು ಸಾರ್ವಜನಿಕ ವಲಯದಲ್ಲೂ ಟೀಕೆಗೆ ಗುರಿಯಾಗಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಸಚಿವ ಸಂಪುಟ ರಚನೆ ಮಾಡಲು ಅಮಿತ್ ಷಾ ಜೊತೆಗೆ ಚರ್ಚೆ ನಡೆಸಲಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆ  ನಿನ್ನೆ ರಾತ್ರಿಯೇ ದೆಹಲಿಗೆ ತೆರಳಲಿರುವ ಸಿಎಂ ಯಡಿಯೂರಪ್ಪ, ಶುಕ್ರವಾರ, ಶನಿವಾರ ಎರಡು ದಿನಗಳ ಕಾಲ ದೆಹಲಿಯಲ್ಲಿಯೇ ಉಳಿಯಲಿದ್ದಾರೆ.

ಎರಡು ದಿನಗಳ ಕಾಲ ಹೊಸದಿಲ್ಲಿಯೇ ವಾಸ್ತವ್ಯ ಹೂಡುತ್ತೇನೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಸಚಿವ ಸಂಪುಟ ಸೇರಲಿರುವವರ ಪಟ್ಟಿಗೆ ಅನುಮೋದನೆ ಪಡೆಯಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

ಅತೃಪ್ತ ಶಾಸಕರ ರಾಜೀನಾಮೆ ವಿಚಾರ ಇನ್ನೂ ಸುಪ್ರೀಂ ಕೋರ್ಟ್ ನಲ್ಲಿ ಇದ್ದು, ಹೀಗಾಗಿ ಮೊದಲ ಹಂತದಲ್ಲಿ ಹಿರಿಯ ಹಾಗೂ ಒಳ್ಳೆಯ ಇಮೇಜ್ ಹೊಂದಿರುವ ಶಾಸಕರಿಗೆ ಆದ್ಯತೆ ನೀಡಲಿದ್ದಾರೆ,  ಜೊತೆಗೆ ಮೂವರು ಮಹಿಳಾ ಶಾಸಕರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಶಶಿಕಲಾ ಜೊಲ್ಲೆ ಹಾಗೂ ಪೂರ್ಣಿಮಾ ನಡುವೆ ಪೈಪೋಟಿ ಇದೆ. ಆದರೆ ಅಣ್ಣಾ ಸಾಹೇಬ್ ಗೆ ಸಂಸತ್ ಟಿಕೆಟ್ ನೀಡಿದ್ದರ ಹಿನ್ನೆಲೆ  ಬಹುತೇಕ ಪೂರ್ಣಿಮಾಗೆ ಸಚಿವ ಸ್ಥಾನದ ಭಾಗ್ಯ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಆಗಸ್ಟ್. 19 ರಂದು ಸಚಿವ ಸಂಪುಟ ವಿಸ್ತರಣೆಗೆ ದಿನಾಂಕ ಫಿಕ್ಸ್ ಆಗಿದ್ದು, ಹೈಕಮಾಂಡ್ ಗ್ರೀನ್ ಸಿಗ್ನಲ್ ಬಳಿಕ ಮಹೂರ್ತ ನಿಗಧಿ ಆಗುತ್ತದೆ. ಪಕ್ಷೇತರ ಶಾಸಕ ನಾಗೇಶ್ ಗೂ ಆರಂಭದಲ್ಲೆ ಸಚಿವ ಸ್ಥಾನ ನೀಡಲಿದ್ದು, ವಿವಾದ ಬಗೆಹರಿದ ಬಳಿಕ ಅತೃಪ್ತರಿಗೆ ಸಚಿವ ಸ್ಥಾನ ನೀಡಲಾಗುತ್ತಾದೆ.

ಒಟ್ಟಾರೆ, ಪ್ರದೇಶವಾರು, ಜಾತಿ ಲೆಕ್ಕಾಚಾರ, ಅನುಭವದ ಆಧಾರದ ಮೇಲೆ ಡಿಸಿಎಂಗಳ ಸಂಖ್ಯೆಯನ್ನು ಹೆಚ್ಚಿಸಲೂಬಹುದು. 106 ಶಾಸಕರ ಬೆಂಬಲದೊಂದಿಗೆ ಸದನದಲ್ಲಿ ಬಹುಮತ ಸಾಬೀತು ಮಾಡಿದ ಬಿಎಸ್ ಯಡಿಯೂರಪ್ಪ, ಯಾರಿಗೆಲ್ಲಾ ಸಚಿವ ಸ್ಥಾನ ನೀಡಬೇಕು ಎಂಬ ಪಟ್ಟಿಯನ್ನು ಈಗಾಗಲೇ ಬಿಜೆಪಿ ಹೈಕಮಾಂಡ್‍ಗೆ ನೀಡಿದ್ದಾರೆ ಎನ್ನಲಾಗಿದೆ.

ಬಿಜೆಪಿ ಸಂಭಾವ್ಯ ಸಚಿವರ ಪಟ್ಟಿ

1. ಶ್ರೀರಾಮುಲು, ವಾಲ್ಮೀಕಿ

2. ಮಾಧುಸ್ವಾಮಿ, ಲಿಂಗಾಯತ

3. ಉಮೇಶ್ ಕತ್ತಿ, ಲಿಂಗಾಯತ

4. ಕೆ.ಎಸ್. ಈಶ್ವರಪ್ಪ, ಕುರುಬ

5. ಗೋವಿಂದ ಕಾರಜೋಳ, ದಲಿತ ಬಲಗೈ

6. ಆರ್. ಅಶೋಕ್, ಒಕ್ಕಲಿಗ

7. ಡಾ. ಅಶ್ವತ್ಥ ನಾರಾಯಣ, ಒಕ್ಕಲಿಗ

8. ಬಸವರಾಜ್ ಬೊಮ್ಮಾಯಿ, ಲಿಂಗಾಯತ

9. ಬಸವರಾಜ್ ಪಾಟೀಲ್ ಯತ್ನಾಳ್, ಲಿಂಗಾಯತ

10. ನಾಗೇಶ್, ಪಕ್ಷೇತರ/ ದಲಿತ ಬಲಗೈ

11.ಕೆ.ಜೆ.ಭೋಪಯ್ಯ, ಒಕ್ಕಲಿಗ

12. ಎಂ.ಪಿ. ರೇಣುಕಾಚಾರ್ಯ, ಲಿಂಗಾಯತ

13. ಅಂಗಾರ, ದಲಿತ

14. ಹಾಲಾಡಿ ಶ್ರೀನಿವಾಸ್ ಶೆಟ್ಟಿ,

15. ಕೋಟಾ ಶ್ರೀನಿವಾಸ್ ಪೂಜಾರಿ, ಬಿಲ್ಲವ (ಒಬಿಸಿ)

16. ಶಶಿಕಲಾ ಜೊಲ್ಲೆ, ಲಿಂಗಾಯತ ಹಾಗೂ ಮಹಿಳಾ ಕೋಟಾ

17. ಪೂರ್ಣಿಮಾ, ಯಾದವ ಸಮುದಾಯ ಹಾಗೂ ಮಹಿಳಾ ಕೋಟಾ

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.