ಸರ್ಕಾರಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಎಚ್ಚರಿಕೆ!

ಬೆಂಗಳೂರು: ಪ್ರಧಾನಿಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಿಂದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜನಪ್ರಿಯ ಅನ್ನಭಾಗ್ಯ ಯೋಜನೆಗೆ ಬಿಜೆಪಿ ಸರ್ಕಾರ ಕತ್ತರಿ ಪ್ರಯೋಗಕ್ಕೆ ಚಿಂತನೆ ಬಗ್ಗೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯ ಅವರು ಬದ್ಧತೆಯಿಂದ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದು ಅವರು ಶುಕ್ರವಾರ ಹೇಳಿದರು.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ನಮ್ಮ ಹಳೆಯ ಯೋಜನೆಯನ್ನು ಕೈ ಬಿಟ್ಟರೆ ಸರಿಯಲ್ಲ, ರದ್ಧು ಪಡಿಸುವುದನ್ನೂ ಮಾಡಬಾರದು, ನಮ್ಮ ಯೋಜನೆ ಬಗ್ಗೆ ನಮಗೆ ಬದ್ಧತೆ ಇದೆ ಎಂದು ಅವರು ತಿಳಿಸಿದರು.

ಇನ್ನು ದ್ವೇಷದ ರಾಜಕಾರಣ ಮಾಡಲ್ಲ ಅಂತ ಸಿಎಂ ಹೇಳಿದ್ದಾರೆ, ಅದರಂತೆ ಅವರು ನಡೆದುಕೊಳ್ಳಬೇಕು, ನಮ್ಮ ಕಾರ್ಯಕ್ರಮ ತೆಗೆದರೆ ನಾವು ಸುಮ್ಮನಿರಲ್ಲ, ಅದರ ಬಗ್ಗೆ ವಿಸ್ತೃತ ಹೋರಾಟ ರೂಪಿಸಬೇಕಾಗುತ್ತದೆ ಎಂದು ಕಾಂಗ್ರೆಸ್​​ ಮುಖಂಡ, ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ರಾಜ್ಯ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆಯ ಮಾತುಗಳನ್ನು ಹೇಳಿದರು.

ಸದ್ಯ ಬಿಜೆಪಿ ಸರ್ಕಾರವು ಪ್ರಧಾನಮಂತ್ರಿ ಕಿಸಾನ ಸಮ್ಮಾನ್ ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆಗೆ ಆರ್ಥಿಕ ಕೊರತೆ ಎದುರಾಗಿರುವುದರಿಂದ ಹಿಂದೆ ಕಾಂಗ್ರೆಸ್​​ ಸರ್ಕಾರ ಜಾರಿಗೆ ತಂದಿದ್ದ ಸಿದ್ದರಾಮಯ್ಯ ಅವರ ಕನಸ್ಸಿನ ಅನ್ನಭಾಗ್ಯ ಯೋಜನೆಯಿಂದ ವಿತರಣೆ ಮಾಡುತ್ತಿರುವ ಅಕ್ಕಿಯ ಪ್ರಮಾಣದಲ್ಲಿ ಕೊಂಚ ಇಳಿಕೆ ಮಾಡುವ ಚಿಂತೆ ನಡೆಸಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್​ ಮುಖಂಡರು ಅದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.