ಸಿಎಂ ಪರಿಹಾರ ನಿಧಿಗೆ ಡಿ.ಕೆ ಶಿವಕುಮಾರ್ ಕೊಡುವ ಹಣ ಎಷ್ಟು ಗೊತ್ತಾ?

ಬೆಂಗಳೂರು: ಕೊಡಗು, ಮಲೆನಾಡು, ಉತ್ತರ ಕರ್ನಾಟಕದಲ್ಲಿ ಪ್ರವಾಹವಾಗಿದೆ, ಕೊಡಗಿನಲ್ಲಿ ರೆಡ್ ಅಲರ್ಟ್ ಕೂಡ ಘೋಷಿಸಲಾಗಿದೆ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಶುಕ್ರವಾರ ಹೇಳಿದರು.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಪ್ರತಿ ಮನೆಗೆ 5 ಸಾವಿರ ಕೊಡುತ್ತೇನೆ, 5 ಲಕ್ಷ ಕೊಡುತ್ತೇನೆ ಅಂತ ಘೋಷಿಸಿದ್ದಾರೆ ಅವರು ಹೇಳಿದಂತೆ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ನಡೆದುಕೊಳ್ಳಲಿ ಎಂದು ಅವರು ತಿಳಿಸಿದರು.

ಇನ್ನು ಇದೀಗ ದೆಹಗಲಿಗೆ ಹೋಗಿದ್ದಾರೆ, ಅಲ್ಲಿಂದ ಎಷ್ಟು ಗಿಫ್ಟ್ ತರುತ್ತಾರೆ ನೊಡೋಣ, ನಾನು 50 ಲಕ್ಷ ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಡುತ್ತೇನೆ ಎಂದು ಅವರು ನುಡಿದರು.

ಕೆಪಿಸಿಸಿ ಅಧ್ಯಕ್ಷರು, ಪದಾಧಿಕಾರಿಗಳ ನೇಮಕ ವಿಷಯಕ್ಕೆ ಸಂಬಂಧಿದಂತೆ ಮಾತನಾಡಿದ ಅವರು, ಆ ವಿಚಾರ ನಮ್ಮ ಹಿರಿಯ ನಾಯಕರು ನೋಡಿಕೊಳ್ಳುತ್ತಾರೆ, ನಾನು ಸೀನಿಯರ್ ಅಲ್ಲ, ನಾನೊಬ್ಬ ಜೂನಿಯರ್, ನಾನೊಬ್ಬ ಶಾಸಕ, ಈಗ ಜನರ ಕೆಲಸ ಮಾಡೋಕೆ ಬಿಟ್ಟರೆ ಸಾಕು, ನನಗೆ ಯಾವ ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಬೇಡ, ಪ್ರಸ್ತುತ ಇರುವವರಿಗೆ ನಾನು ಸಹಕಾರ ಕೊಡುತ್ತೇನೆ ಎಂದು ಅವರು ಹೇಳಿದರು.

ಇನ್ನು ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ದೆಹಲಿಗೆ ಭೇಟಿ ನೀಡಿರುವ ವಿಚಾರವಾಗಿ ಮಾತನಾಡಿದ ಅವರು, ಹೋಗ್ಲಿ ಅದೇನು ತೆಗೆದುಕೊಂಡು ಬರ್ತಾರೋ ಬರಲಿ, ನಮ್ಮ ಎಂಎಲ್​​ಎ ಫ್ರೆಂಡ್ಸ್ (ಅನರ್ಹ) ಗಳಿಗೂ, ಗಿಫ್ಟ್ ತರಲಿ, ಅದೇನ್ ಗಿಫ್ಟ್, ಹೂ ಎಲ್ಲಾ ತರ್ತಾರೋ ತರಲಿ, ಅವರೆಲ್ಲಾ ಚೆನ್ನಾಗಿರಲಿ ಎಂದು ಡಿ.ಕೆ ಶಿವಕುಮಾರ್ ಅವರು ಅನರ್ಹ ಶಾಸಕರ ಪರಿಸ್ಥಿತಿ ಬಗ್ಗೆ ವ್ಯಂಗ್ಯವಾಡಿದರು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.