ಅಭಿನಯ ಚಕ್ರವರ್ತಿ ಸುದೀಪ್ ತಿರುಗೇಟು ಕೊಟ್ಟಿದ್ದು ಯಾರಿಗೆ..?

ಅಭಿಮಾನಿಗಳ ಅಭಿಮಾನಿ ನಟ ಕಿಚ್ಚ ಸುದೀಪ್​, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ವೀಟ್ ಆಗಿರ್ತಾರೆ. ತಮ್ಮ ಸಿನಿಮಾಗಳಿಗೆ ಸಂಬಂಧಿಸಿದಂತೆ, ಸಹ ಕಲಾವಿದರು, ಸ್ನೇಹಿತರಿಗೆ ವಿಶೇಷ ಸಂದರ್ಭಗಳಲ್ಲಿ ಶುಭಾಶಯ ತಿಳಿಸೋಕೆ ಟ್ವಿಟ್ಟರ್​​ನ ಬಳಸಿಕೊಳ್ತಾರೆ.

ಆದರೆ, ಯಾವತ್ತೂ ಮತ್ತೊಬ್ಬರಿಗೆ ಟಾಂಗ್ ಕೊಡೋದಕ್ಕೆ ಟ್ವಿಟ್ಟರ್​​ ಅನ್ನ ಕಿಚ್ಚ ವೇದಿಕೆ ಮಾಡಿಕೊಂಡವರಲ್ಲ. ಆದರೆ, ಮೊನ್ನೆ ಸೋಮವಾರ ಮಧ್ಯಾಹ್ನ 1.48ರ ಸುಮಾರಿಗೆ ನಾಲ್ಕು ಸಾಲುಗಳನ್ನು ಬರೆದಿರೋ ತಮ್ಮ ಫೋಟೋ ಸಮೇತ ರನ್ನ ಮಾಡಿದ ಟ್ವೀಟ್​​ ಹಲವು ಪ್ರಶ್ನೆಗಳನ್ನ ಹುಟ್ಟಾಕ್ಕಿದೆ.

‘ಒಬ್ಬ ನಿಜವಾದ ಪುರುಷ ತಾನು ಗಂಡಸು ಎಂದು ಸಾಬೀತು ಮಾಡಲು ಮದ್ಯ ಬೇಕಿಲ್ಲ. ಹಾಗೇ ಸೂರ್ಯ ಮುಳುಗುವುದು ಬೇಕಿಲ್ಲ’ ಇದು ನಾನು ಎಲ್ಲೋ ಓದಿದ ಸುಂದರ ಸಾಲುಗಳು. ತುಂಬ ಅದ್ಭುತವಾದ ಅರ್ಥ ಕೊಡುತ್ತದೆ. ಈಗಂತ ಶೀರ್ಷಿಕೆ ಕೊಟ್ಟು, ತಮ್ಮ ಫೋಟೋವೊಂದನ್ನು ಸುದೀಪ್​​ ಪೋಸ್ಟ್ ಮಾಡಿದರು.

ಆ ಫೋಟೋದ ಮೇಲೂ ಯಾರಿಗೋ ತಿರುಗೇಟು ಕೊಡುವಂತಹ ನಾಲ್ಕು ಸಾಲುಗಳಿವೆ. ‘ನನ್ನ ಸಾಮರ್ಥ್ಯ ತೋರ್ಸೋಕ್ಕೆ ನಾನು ರಣಾಂಗಣದಲ್ಲಿ ಹೋರಾಟಕ್ಕೆ ಇಳಿಯೋದಿಲ್ಲ. ಎದುರಾಳಿ ಯುದ್ಧ ಮಾಡಲು ಎಷ್ಟು ಅರ್ಹ ಅನ್ನೋದನ್ನ ನೋಡಿ ಹೋರಾಟಕ್ಕೆ ಇಳಿಯುತ್ತೇನೆ ಎಂದು ಸುದೀಪ್ ಮಾಡಿದ್ದ ಈ ಟ್ವೀಟ್​​ ಸಿಕ್ಕಾಪಟ್ಟೆ ವೈರಲ್ಲಾಗಿದೆ.

ಚಾಲೆಂಜಿಂಗ್ ಸ್ಟಾರ್​​​​ ದರ್ಶನ್​​ಗೆ ಟಾಂಗ್​ ಕೊಡೋದಕ್ಕೆ ಸುದೀಪ್ ಈ ರೀತಿ ಟ್ವೀಟ್ ಮಾಡಿರಬಹುದು ಅಂತ ಕೆಲವರು ಮಾತನಾಡುತ್ತಿದ್ದಾರೆ. ಆದರೆ, ಇದು ಎಷ್ಟು ನಿಜ..? ಎಷ್ಟು ಸುಳ್ಳು ಅನ್ನೋದು ಗೊತ್ತಿಲ್ಲ. ಕಿಚ್ಚನ ಈ ಟ್ವೀಟ್ ಸ್ಯಾಂಡಲ್​ವುಡ್​ ಅಂಗಳದಲ್ಲಿ ಬಿರುರಾಳಿ ಎಬ್ಬಿಸಿರೋದಂತೂ ಸುಳ್ಳಲ್ಲ.

ಸ್ವಾತಂತ್ರ ದಿನೋತ್ಸವದ ಪ್ರಯುಕ್ತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕಿಚ್ಚ, ನಾನು ಚಿತ್ರರಂಗಕ್ಕೆ ಬಂದು 23 ವರ್ಷ ಆಗಿದೆ. ನನ್ನ ಒಂದು ಟ್ವೀಟ್ ಇಷ್ಟು ಚರ್ಚೆ ಆಗ್ತಿದೆ ಅಂದರೆ, ನಾನು ಬೆಳೆದಿದ್ದೇನೆ ಎಂದು ಅರ್ಥ ಎಂದರು.

ಚಂದ್ರ ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಣುವಂತೆ, ನನ್ನ ಟ್ವೀಟ್ ಕಾಣ್ತಿದೆ ಅಷ್ಟೆ, ಅಂತ ಹೇಳಿ ಸುದೀಪ್​ ಅದಕ್ಕೆ ಫುಲ್ ಸ್ಟಾಪ್ ಇಟ್ಟರು.

ಒಟ್ಟಾರೆ ಸುದೀಪ್​ ಮಾಡಿರೋ ಗೂಡಾರ್ಥದ ಟ್ವೀಟ್​​, ಎಲ್ಲೋ ಒಂದು ಕಡೆ ಸ್ಟಾರ್​ ವಾರ್​​ ಬಗ್ಗೆ ಸಾರಿ ಸಾರಿ ಹೇಳ್ತಿದೆ. ಸದ್ಯ ಅವ್ರ ಮಾತುಗಳಲ್ಲೂ ಅದು ಎದ್ದು ಕಾಣ್ತಿದೆ ಅನ್ನೋದು ಮಾತ್ರ ಸುಳ್ಳಲ್ಲ.ಇದು ಮುಂದೆ ಯಾವ ತಿರುವು ಪಡ್ಕೊಳ್ಳುತ್ತೆ ಅನ್ನೋದನ್ನ ಕಾದು ನೋಡ್ಬೇಕು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.