ಕೆಲ ದಿನಗಳಲ್ಲೇ ಗ್ರಾಹಕರಿಗೆ ಕಣ್ಣೀರು ತರಿಸಲಿದೆ ಈರುಳ್ಳಿ.!

ಬೆಂಗಳೂರು: ಭಾರೀ ಮಳೆಯಿಂದ ರೈತರಿಗೆ ಕಣ್ಣೀರು ಸುರಿಸಿರುವ ಈರುಳ್ಳಿ ಇದೀಗ ಗ್ರಾಹಕರ ಕಣ್ಣಿನಲ್ಲೂ ಕಣ್ಣೀರು ತರುವ ಆತಂಕ ಎದುರಾಗಿದೆ.

ಉತ್ತರ ಕರ್ನಾಟಕ ಭಾಗ ಹಾಗೂ ಮಹಾರಾಷ್ಟ್ರದಲ್ಲಿ ಭಾರಿ ಮಳೆಯಿಂದ ಈರುಳ್ಳಿ ಬೆಳೆ ಹಾನಿಗೀಡಾಗಿದ್ದು, ಬರುವ ಕೆಲ ದಿನಗಳಲ್ಲಿ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಬೆಂಗಳೂರಿಗೆ ಬರಬೇಕಾದ ಈರುಳ್ಳಿ ಪೂರೈಕೆಯಲ್ಲಿ ಭಾರಿ ಇಳಿಕೆ ಕಂಡಿದ್ದು, ಗುಣಮಟ್ಟದ ಈರುಳ್ಳಿಗೆ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ.

ಉತ್ತರದಲ್ಲಿ ಭಾರಿ ಮಳೆ ಪ್ರವಾಹ. ಬೆಂಗಳೂರಿಗೆ ಈರುಳ್ಳಿ ಪೂರೈಕೆ ಕುಸಿತ..!
ಕೆಲ ದಿನಗಳಲ್ಲೇ ಗ್ರಾಹಕರಿಗೆ ಕಣ್ಣೀರು ತರಿಸಲಿದೆ ಈರುಳ್ಳಿ.!
ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದ ಎಲ್ಲೆಲ್ಲೂ ಮಳೆ. ಹೀಗಾಗಿ ರೈತರು ಬೆಳೆದ ಬೆಳೆ ಮಳೆಗೆ ಆಹುತಿಯಾಗಿದೆ. ಅನೇಕ ಕಡೆಗಳಲ್ಲಿ ಭೂಮಿಯಿಂದ ಈರುಳ್ಳಿ ತೆಗೆಯಲಾರಷ್ಟು ಹಾಳಾಗಿದ್ದು, ಬೆಂಗಳೂರಿಗೆ ಪೂರೈಕೆಯಾಗುವ ಈರುಳ್ಳಿ ಪ್ರಮಾಣ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ.

ಮಹಾರಾಷ್ಟ್ರ ಹಾಗೂ ವಿಜಯಪುರದಿಂದ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಪೂರೈಕೆಯಾಗುತ್ತಿದ್ದ ನೂರಾರು ಲೋಡ್ ಈರುಳ್ಳಿ ಪ್ರಮಾಣ ಇಳಿಕೆಯಾಗಿದೆ. ಭಾರಿ ಮಳೆಯಿಂದ ಭೂಮಿಯಿಂದ ಈರುಳ್ಳಿ ತೆಗೆಯಲಾರದಷ್ಟು ಹಾಳಾಗಿದ್ದು, ಪೂರೈಕೆ ಮೇಲೆ ಎಫೆಕ್ಟ್ ತಟ್ಟಿದೆ.

ಪೂರೈಕೆಯಾಗಿ ಬರುತ್ತಿರುವ ಗುಣಮಟ್ಟದ ಈರುಳ್ಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಪ್ರತಿ ದಿನ ಎಪಿಎಂಸಿ ಮಾರುಕಟ್ಟೆಗೆ 120-ರಿಂದ 130 ಲೋಡ್ ಈರುಳ್ಳಿ ಬರುತ್ತಿತ್ತು. ಆದರೆ ಕಳೆದ ಕೆಲ ದಿನಗಳಿಂದ 60-ರಿಂದ 65 ಲೋಡ್ ಮಾತ್ರ ಈರುಳ್ಳಿ ಬರುತ್ತಿದೆ.

ಭಾರಿ ಮಳೆಯಿಂದ ಮಹಾರಾಷ್ಟ್ರ, ಉತ್ತರ ಕರ್ನಾಟಕ ಸೇರಿದಂತೆ ಹಲವೆಡೆ ಈರುಳ್ಳಿ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಇದರಿಂದ ಹೊಸ ಫಸಲು ಅಕ್ಟೋಬರ್ ಮಾರುಕಟ್ಟೆ ಬರುವರಿಗೆ ಈರುಳ್ಳಿ ಗಗನಮುಖಿಯಾಗುವ ಆತಂಕ ಎದುರಾಗಿದೆ.

ಕಳೆದ ಒಂದು ವಾರದ ಹಿಂದೆ 15 ರೂ. ಇದ್ದ ಈರುಳ್ಳಿ ದರ ಇದೀಗ 25-30 ರೂ ಗೆ ಏರಿಕೆಯಾಗಿದೆ. ಈರುಳ್ಳಿ ದಿನೇ ದಿನೇ ಗ್ರಾಹಕರ ಕಣ್ಣೀರು ತರಿಸಿದೆ. ಬೆಲೆ ಜಾಸ್ತಿಯಾಗಿದೆ, ಸಾಂಬಾರಿಗೆ ಎರಡು ಈರುಳ್ಳಿ ಹಾಕೋ ಜಾಗದಲ್ಲಿ ಒಂದಷ್ಟೇ ಹಾಕ್ತಿದ್ದೀವಿ ಅಂತಾರೆ ಗ್ರಾಹಕರು.

ಬೆಂಗಳೂರು ನಗರಕ್ಕೆ ನಿತ್ಯ 3 ಸಾವಿರಕ್ಕೂ ಹೆಚ್ಚು ಈರುಳ್ಳಿ ಅಗತ್ಯ ಇದೆ. ಆದರೆ ಭಾರಿ ಮಳೆಯಿಂದ ಅಗತ್ಯಕ್ಕೆ ತಕ್ಕಂತೆ ಈರುಳ್ಳಿ ಪೂರೈಕೆಯಾಗುತ್ತಿಲ್ಲ. ವಿಜಯಪುರ, ದಾವಣಗೆರೆ, ಬಳ್ಳಾರಿ, ಮಹಾರಾಷ್ಟ್ರ ಸೇರಿದಂತೆ ಹಲವೆಡೆ ಸರಬರಾಜುವಾಗುವ ಈರುಳ್ಳಿ ಪ್ರಮಾಣ ಶೇ _65-ರಿಂದ 70 ರಷ್ಟು ಕುಸಿದಿದೆ.

ಬೆಂಗಳೂರಿನ ಎಪಿಎಂಸಿ ಮಾರುಕಟ್ಟೆಗೆ ನಿತ್ಯ 100ರಿಂದ 120 ಲಾರಿಗಳು ಬರುತ್ತಿದ್ದು, ಇದೀಗ ಅರ್ಧದಷ್ಟು ಬರದೇ ಇರೋದು ವರ್ತಕರ ಆತಂಕಕ್ಕೆ ಕಾರಣವಾಗಿದೆ. ಮುಂದಿನ ತಿಂಗಳಲ್ಲಿ ಗಣೇಶ್‌ ಚತುರ್ಥಿ, ದಸರಾ ಹಬ್ಬಗಳ ಸಡಗರ ಇರಲಿದ್ದು, ಈರುಳ್ಳಿಗೆ ಅಧಿಕ ಬೇಡಿಕೆ ಬರಲಿದೆ. ದಿನಕ್ಕೆ 18 ಸಾವಿರಕ್ಕೂ ಅಧಿಕ ಟನ್ ಈರುಳ್ಳಿ ಅಗತ್ಯ ಇದ್ದು, ಮಳೆಗೆ ಹಾನಿಯಾದ ಪರಿಣಾಮ ಇದರ ಬೇಡಿಕೆ ಇನ್ನಷ್ಟು ಜಾಸ್ತಿಯಾಗಲಿದೆ. ಇನ್ನು 50 ರಿಂದ 60 ರೂಪಾಯಿ ಆಗಲಿದೆ ಅಂತಾರೆ ಎಪಿಎಂಸಿ ವರ್ತಕರು.

ಒಟ್ನಲ್ಲಿ ಭಾರಿ ಮಳೆಯ ಎಫೆಕ್ಟ್‌ನಿಂದ ರೈತರು ಬೆಳೆದ ಬೆಳೆಗಳು ಸಂಪೂರ್ಣವಾಗಿ ಹಾನಿಯಾಗಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದ್ದು, ಈರುಳ್ಳಿ ಅಂತೂ ಗ್ರಾಹಕರಿಗೆ ಇನ್ನಷ್ಟು ಕಣ್ಣೀರು ತರಿಸೋದ್ರಲ್ಲಿ ಅನುಮಾನವೇ ಇಲ್ಲ..
ಕೃಷ್ಣಮೂರ್ತಿ, ಟಿವಿ5, ಬೆಂಗಳೂರು

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.