ನೆಹರು- ಗಾಂಧೀಜಿ ವಿರುದ್ಧ ಅಶ್ಲೀಲ್ ಟ್ವೀಟ್ ಮಾಡಿದ ಲೇಖಕಿ..!

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ವಿರುದ್ಧ ಲೇಖಕಿಯೊಬ್ಬರು ಅಶ್ಲೀಲವಾಗಿ ಟ್ವೀಟ್ ಮಾಡಿದ್ದು, ಲೇಖಕಿ ಪ್ರೊ.ಮಧುಕಿಶ್ವರ್ ವಿರುದ್ಧ ಸೈಬರ್‌ ಕ್ರೈಂನಲ್ಲಿ ಎಫ್‌ಐಆರ್ ದಾಖಲಾಗಿದೆ.

ಮಹಾತ್ಮಾ ಗಾಂಧಿ ಮತ್ತು ಜವಾಹರ್‌ಲಾಲ್ ನೆಹರು ನಡುವೆ ಸಲಿಂಗ ಕಾಮವಿತ್ತು ಎಂದು ಮಧುಕಿಶ್ವರ್ ವಿವಾದಾತ್ಮಕ ಟ್ವೀಟ್ ಮಾಡಿದ್ದರು. ಮಧುಕಿಶ್ವರ್ ಓರ್ವ ಲೇಖಕಿ ಮತ್ತು ಸೆಂಟರ್ ಆಫ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ ಎಂಬ ಸಂಸ್ಥೆಯಲ್ಲಿ ಪ್ರಾಧ್ಯಾಪಕಿಯಾಗಿದ್ದು, ಸದಾ ವಿವಾದಿತ ಟ್ವೀಟ್‌ಗಳಿಂದ ಸುದ್ದಿಯಲ್ಲಿರುತ್ತಿದ್ದರು. ಮಧುಕಿಶ್ವರ್ ಟ್ವೀಟ್ ವಿರುದ್ಧ ಜನಾಧಿಕಾರ ಸಂಘರ್ಷ ಪರಿಷತ್ ಸಂಸ್ಥೆ ದೂರು ನೀಡಿದೆ.

ಇದೇ ವರ್ಷ ಜೂನ್‌ನಲ್ಲಿ ಮಧುಕಿಶ್ವರ್ ಮಾಡಿದ ಈ ಟ್ವೀಟ್ ವಿವಾದ ಸೃಷ್ಟಿಸಿದ್ದು, ಮಹಾತ್ಮಾ ಗಾಂಧಿಯವರ ಮೇಲೆ ನೆಹರುರವರ ಪ್ರಭಾವ ಜೋರಾಗಿತ್ತು. ಅವರಿಬ್ಬರಲ್ಲಿ ಸಲಿಂಗಕಾಮ ಸಂಬಂಧ ಇತ್ತೆಂದು ಮಧುಕಿಶ್ವರ್ ಟ್ವೀಟ್ ಮಾಡಿದ್ದರು.

ದಕ್ಷಿಣ ಭಾರತದ ಸ್ನೇಹಿತರೊಬ್ಬರು ಗಾಂಧೀಜಿ ಮತ್ತು ನೆಹರು ಸಂಬಂಧದ ಬಗ್ಗೆ ತನಗೆ ಹೇಳಿದ್ದರು ಎಂದಿರುವ ಮಧು, ನೆಹರು ಮತ್ತು ಗಾಂಧಿ ಒಮ್ಮೆ ತಮ್ಮ ಕುಟುಂಬದ ಮನೆಯೊಂದರಲ್ಲಿ ಒಂದೇ ಮಂಚದಲ್ಲಿ ಮಲಗಿದ್ದರು ಎಂದು ಸ್ನೇಹಿತರ ಮಾತನ್ನ ಟ್ವೀಟರ್‌ನಲ್ಲಿ ಬರೆದುಕೊಂಡಿದ್ದರು.

ಅಲ್ಲದೇ, ಸಲಿಂಗಕಾಮ ಸಹಜ. ಇದರಿಂದ ಸರ್ದಾರ್ ವಲ್ಲಭ್ ಭಾಯ್ ಪಟೇಲ್ ಪ್ರಧಾನಿಯಾಗುವುದು ತಪ್ಪಿತು. ಗಾಂದೀಜಿಯವರ ನೆಹರೂ ಮೇಲಿನ ಅಭಿಮಾನಕ್ಕೆ ಪ್ರಧಾನಿಪಟ್ಟ ಪಟೇಲರ ಕೈತಪ್ಪಿತು. ನೆಹರುಗೆ ಅವಕಾಶ ನೀಡಿದ್ದು ಸರಿಯಲ್ಲ ಎಂದು ಮಧು ಟ್ವೀಟ್ ಮಾಡಿದ್ದರು.

ಇನ್ನು ಮಧುಕೇಶ್ವರ್ ಟ್ವೀಟ್ ವಿರೋಧಿಸಿರುವ ಜನಾಧಿಕಾರ ಸಂಘಟನೆಯ ಐಯ್ಯರ್‌ರವರು, ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ನೀಡಿದ್ದು, ತಮ್ಮ ಜೀವನವನ್ನು ದೇಶದ ಸ್ವಾತಂತ್ರ್ಯ ಕ್ಕೆ ಮೀಸಲಿಟ್ಟ ಮಹಾತ್ಮಾಗಾಂಧಿ ವಿರುದ್ಧ ಮಾಡಿರುವ ಟ್ವೀಟ್ ಸುಳ್ಳು. ಮಹಾನ್ ಸಾಧಕರ ವಿರುದ್ಧ ಸೂಕ್ತ ದಾಖಲೆಗಳಿಲ್ಲದೆ ಆರೋಪ ತಪ್ಪು. ಇದರಿಂದ ಸಮಾಜದ ಸ್ವಾಸ್ಥ್ಯ ನಾಶವಾಗುತ್ತದೆ ಎಂದು ಆರೋಪಿಸಿದ್ದಾರೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.