ಸಿಎಂ ಪರಿಹಾರ ನಿಧಿಗೆ ನಟ ಪುನೀತ್​ ರಾಜ್​​ಕುಮಾರ್ ನೀಡಿದ ಹಣವೇಷ್ಟು ಗೊತ್ತಾ?

ಬೆಂಗಳೂರು: ಪ್ರವಾಹ ಸಂತ್ರಸ್ತರಿಗೆ ನೆರವು ನೀಡಲು ನಟ ಪವರ್ ಸ್ಟಾರ್​ ಪುನೀತ್​​ ರಾಜ್​ಕುಮಾರ್ ಅವರು ಮುಖ್ಯಮಂತ್ರಿ ​ಬಿ.ಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ಕೊಟ್ಟಿದ್ದರು.

ನಗರದ ಡಾಲರ್ಸ್ ಕಾಲೋನಿಯ ಧವಳಗಿರ ನಿವಾಸದಲ್ಲಿಂದು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚೆಕ್​ ಮೂಲಕ ಹಣ ಹಸ್ತಾಂತರ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಸಿಎಂ ಪರಿಹಾರ ನಿಧಿಗೆ ನೆರವು ಕೊಡಲು ಬಂದಿದ್ದೆ. ನಾನು ಫೇಸ್​ಬುಕ್ ಲೈವ್ ಬಂದು ಹೇಳಿದ ಮೇಲೆ ಸಾಕಷ್ಟು ಜನ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಕೆಲಸ ಮಾಡಿದ್ದಾರೆ ಎಂದು ಅವರು ತಿಳಿಸಿದರು.

ಅಲ್ಲದೇ ಇನ್ನಷ್ಟು ಆರ್ಥಿಕ ನೆರವು ಕೊಡುವ ಯೋಜನೆ ಇದೆ, ಏನೇನೋ ಕಾರ್ಯಕ್ರಮಗಳನ್ನು ಇದಕ್ಕಾಗಿ ಹಾಕಿಕೊಂಡಿದ್ದೀವಿ, ನಾವೆಲ್ಲಾ ನಮ್ಮ ಕೈಲಾದ ಸಹಾಯ ಮಾಡ್ತೀವಿ ಎಂದು ಕನ್ನಡ ಚಿತ್ರರಂಗದ ಧೃವತಾರೆ ಡಾ. ರಾಜ್​ ಕುಮಾರ್ ಅವರ ಕಿರಿಯ ಮಗ ಪುನೀತ್​ ರಾಜ್​ಕುಮಾರ್ ಅವರು ಹೇಳಿದರು.

ಅಂತೆಯೇ ಬಿ.ಎಸ್ ಯಡಿಯೂರಪ್ಪ ಅವರು ಮನೆಗೆ ಬಂದಿದ್ದ ನಟ​ ಪುನೀತ್ ರಾಜ್​ಕುಮಾರ್​ ಅವರನ್ನು ತಮ್ಮ ನಿವಾಸದಿಂದ ಹೊರ ಬಂದು ಅವರನ್ನು ಕಳಿಸಿಕೊಟ್ಟಿದ್ದಾರೆ.

ಸದ್ಯ ನಟ ಪುನೀತ್​ ರಾಜ್​ ಕುಮಾರ್ ಅವರು ಮುಖ್ಯಮಂತ್ರಿ ಪರಿಹಾರ ನಿಧಿಗೆ 5 ಲಕ್ಷ ರೂಪಾಯಿ ಚೆಕ್ ನೀಡಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *