ಸ್ವಾತಂತ್ರ್ಯ ದಿನಾಚರಣೆಗೆ ಕನ್ನಡದಲ್ಲೇ ವಿಶ್ ಮಾಡಿದ ಇಸ್ರೇಲ್

ನವದೆಹಲಿ: ದೇಶದೆಲ್ಲೆಡೆ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು,  ಕೆಂಪುಕೋಟೆಯಲ್ಲಿ ಬೆಳಗ್ಗೆ 7 ಗಂಟೆಗೆ ತ್ರಿವರ್ಣ ಧ್ವಜವನ್ನು ಹರಿಸುವ ಮೂಲಕ ದೇಶಕ್ಕೆ ಗೌರವವನ್ನು ಸಲ್ಲಿಸಿದರು. ನಂತರ 93 ನಿಮಿಷಗಳ ಕಾಲ ದೇಶದ ಜನರನ್ನು ಉದ್ದೇಶಿಸಿ ಭಾಷಣ ಮಾಡಿದರು.

ಸದ್ಯ ಭಾರತಕ್ಕೆ ಪರಮಾಪ್ತ ಮಿತ್ರ ಎಂದೇ ಕರೆಯುವ ಎಲ್ಲಾ ಸಂದರ್ಭದಲ್ಲೂ ದೇಶದ ಪರ ನಿಲ್ಲುವ ಇಸ್ರೇಲ್ ತನ್ನ ಮಿತ್ರ ದೇಶಕ್ಕೆ (ಭಾರತ) ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯವನ್ನು ಕೋರಿದೆ. ಜೊತೆಗೆ ಭಾರತದ 3 ಭಾಷೆಗಳಲ್ಲಿ ಶುಭ ಕೋರಿರುವುದು ವಿಶೇಷವಾಗಿದೆ.


ಇಸ್ರೇಲ್ ದೇಶವು ತನ್ನ ಅಧಿಕೃತ ಟ್ವೀಟರ್​ ಖಾತೆಯಲ್ಲಿ ಬರೆದುಕೊಂಡಿದ್ದು, ಹಿಂದಿ, ಕನ್ನಡ, ಮರಾಠಿ ಹಾಗೂ ಆಂಗ್ಲ ಭಾಷೆಯಲ್ಲಿ ಬರೆದು ಪೋಸ್ಟ್​ ಮಾಡಿಕೊಂಡಿದೆ.


ಪ್ರಧಾನಿ ಮೋದಿಯ ಮಿತ್ರರಾದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ವೀಡಿಯೊ ಮೂಲಕ ಭಾರತೀಯರಿಗೆ ಶುಭಾಶಯ ಕೋರಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *