ವರುಣ ಮಳೆ- ರಾಜ್ಯದಲ್ಲಿ ಮತ್ತೆ ಧಾರಾಕಾರ ಮಳೆ … ಹೈ ಅಲರ್ಟ್ ಘೋಷಣೆ , ಎಲ್ಲೆಲ್ಲಿ..?

ಕೊಡಗು : ಜಿಲ್ಲೆಯ ವಿರಾಜಪೇಟೆಯಲ್ಲಿ ಮಹಾ ಆತಂಕ ಎದುರಾಗಿದೆ. ವಿರಾಜಪೇಟೆಯಲ್ಲೇ ಅತಿದೊಡ್ಡ ಬೆಟ್ಟವಾದ ಅಯ್ಯಪ್ಪ ಗುಡ್ಡ ಬಿರುಕು ಬಿಟ್ಟಿದೆ.

ಕೊಡಗಿನಾದ್ಯಂತ ಇನ್ನೂ  ಮಳೆಯೂ ನಿಂತಿಲ್ಲ. ಇದರಿಂದಾಗಿ ಗುಡ್ಡ ಕುಸಿಯುವ ಭೀತಿ ಉಂಟಾಗಿದೆ. ಬೆಟ್ಟದ ತಪ್ಪಲಿನಲ್ಲಿ 10 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್‌ ಮಾಡಲಾಗಿದೆ.

ವಿರಾಜಪೇಟೆಯಲ್ಲಿ ಮತ್ತೊಂದು ಮೃತದೇಹ ಸಿಕ್ಕಿದ್ದು, ಗುಡ್ಡ ಕುಸಿತಕ್ಕೆ ಬಲಿಯಾದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಅಲ್ಲದೇ 6 ಜನ ಕಣ್ಮರೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.

ಮೂಡಿಗೆರೆ ತಾಲೂಕಿನ ಕಳಸ ಹೋಬಳಿಯಲ್ಲಿ ಕಾಣೆಯಾಗಿದ್ದ ಸಂತೋಷ್‌ ಎಂಬ ವ್ಯಕ್ತಿಯಶವ ಪತ್ತೆಯಾಗಿದೆ. ಇದರಿಂದ ಕಾಫಿನಾಡಲ್ಲಿ ಮಳೆಗೆ ಬಲಿಯಾದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಸೈನಿಕರಿಂದ ರಕ್ಷಣೆಯಾಗಿದ್ದ ಕಿಟ್ಟು ಪೂಜಾರಿಯೂ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ. ಸದ್ಯ ಮಲೆನಾಡು ಭಾಗದಲ್ಲಿ ಜಿಲ್ಲೆಯಲ್ಲಿ ಮತ್ತೆ ಧಾರಾಕಾರ ಮಳೆಯಾಗುತ್ತಿದ್ದು, ಕೊಟ್ಟಿಗೆಹಾರ, ಕಳಸ, ಚಾರ್ಮಾಡಿ, ಮೂಡಿಗೆರೆ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಕೇವಲ ಮಲೆನಾಡಿನಷ್ಟೇ ಅಲ್ಲ, ಕರಾವಳಿ ಭಾಗದ ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿದೆ. ಮಳೆ ಕಡಿಮೆಯಾಗಿದ್ದರಿಂದ ಗಂಜಿಕೇಂದ್ರ ಸೇರಿದ್ದ ಜನರು ವಾಪಸ್‌ ಮನೆಗೆ ಸೇರುತ್ತಿದ್ದಾರೆ. ಆದರೆ ಬೆಳಗ್ಗೆಯಿಂದ ಮತ್ತೆ ಧಾರಾಕಾರ ಮಳೆಯಾಗುತ್ತಿದ್ದು, ಆತಂಕ ಶುರುವಾಗಿದೆ. ಹೀಗಾಗಿ ಜಿಲ್ಲಾಡಳಿತ ಎಚ್ಚೆರಿಕೆಯಿಂದ ಇರುವಂತೆ ಸೂಚನೆ ನೀಡಿದೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.