‘ಖಾಸಗಿ ವಿಚಾರ ಬಹಿರಂಗ ಮಾಡೋದು ನೀಚತನದ ಕೆಲಸ’

ಮೈಸೂರು: ಫೋನ್ ಕದ್ದಾಲಿಕೆ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್, ಫೋನ್ ಕದ್ದಾಲಿಕೆ ದೊಡ್ಡ ನೀಚತನ. ಅದು ಯಾರೇ ಮಾಡಿದ್ರು ಕೂಡ ಅದೊಂದು ದೊಡ್ಡ ತಪ್ಪು ಎಂದು ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಈ ಹಿಂದೆ ಸಿಎಂ ಆಗಿದ್ದ ರಾಮಕೃಷ್ಣ ಅವರೇ ಫೋನ್ ಕದ್ದಾಲಿಕೆಯಲ್ಲಿ ಸಿಕ್ಕಿಬಿದ್ದಿದ್ರು. ಅವ್ರು ಬಹಳ ಚಾಣಾಕ್ಷರು, ಫೋನ್ ಕದ್ದಾಲಿಕೆ ಪ್ರಕರಣದಲ್ಲಿ. ಅವ್ರು ರಾಜೀನಾಮೆ ಕೊಡುವ ಸಂದರ್ಭ ಎದುರಾಯಿತು. ಈ ಪ್ರಕರಣ ಸಿಬಿಐ ತನಿಖೆ ಆಗಲಿ. ಸಮಗ್ರವಾದ ತನಿಖೆಗೆ ಒಕ್ಕೊರಲ ಒತ್ತಾಯ ಕೇಳಿ ಬರುತ್ತಿದೆ. ಖಾಸಗಿ ವಿಚಾರ ಬಹಿರಂಗ ಮಾಡೋದು ನೀಚತನದ ಕೆಲಸ ಎಂದು ವಿಶ್ವನಾಥ್ ಪ್ರಕರಣದ ತನಿಖೆಗೆ ಒತ್ತಾಯಿಸಿದ್ದಾರೆ.

ಇನ್ನು ಪೋನ್ ಕದ್ದಾಲಿಕೆ ಪ್ರಕರಣದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೆಸರು ಕೇಳಿಬಂದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ವಿಶ್ವನಾಥ್, ಯಾರೇ ಮುಖ್ಯಮಂತ್ರಿ ಆದರೂ, ಅವರ ಬಳಿ ಬೇಹುಗಾರಿಕೆ ಇಲಾಖೆ ಇರತ್ತೆ. ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಅವರ ಬಳಿಯೇ ಇಂಟೆಲಿಜೆನ್ಸ್ ಇಲಾಖೆ ಇರತ್ತೆ. ಹಾಗಾಗಿ ಕುಮಾರಸ್ವಾಮಿ ಅವ್ರ ಗಮನಕ್ಕೆ ಬಾರದೆ ಇದು ನಡೆದಿಲ್ಲ ಎಂದು ವಿಶ್ವನಾಥ್ ಪರೋಕ್ಷವಾಗಿ ಕುಮಾರಸ್ವಾಮಿ ವಿರುದ್ಧ ಆರೋಪಿಸಿದ್ದಾರೆ.

ಹುಣಸೂರು ಬೈ ಎಲೆಕ್ಷನ್‌ನಲ್ಲಿ ತಾವು ಸ್ಪರ್ಧಿಸುವ ವಿಚಾರ ಕುರಿತಂತೆ ಮಾತನಾಡಿದ ವಿಶ್ವನಾಥ್, ನನ್ನ ಪ್ರಕರಣ ಇನ್ನೂ ಕೋರ್ಟ್‌ನಲ್ಲಿ ಇದೆ. ಅದು ಮೊದಲು ಇತ್ಯರ್ಥವಾಗಲಿ ನಂತರ ಆ ಬಗ್ಗೆ ನೋಡುವ. ಕಾಲಾಯ ತಸ್ಮೈ ನಮಃ ಎಲ್ಲವೂ ಕಾಲವೇ ನಿರ್ಧರಿಸುತ್ತದೆ. ಆದರೆ ಎ.ಮಂಜು ಹುಣಸೂರಿನಲ್ಲಿ ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡ್ತಿಲ್ಲ. ಸುಮ್ಮನೆ ಎ.ಮಂಜು, ಯೋಗೇಶ್ವರ್ ಹೆಸರು ಕೇಳಿ ಬರುತ್ತಿದೆ ಎಂದು ಹೇಳಿದ್ದಾರೆ.

 

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.