ಹೇಗಿದೆ ಗೊತ್ತಾ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಿನಿಮಾ? TV5 ರೇಟಿಂಗ್: 4/5

ಒಂದು ಮೊಟ್ಟೆ ಕಥೆ ಹೇಳಿ ಸ್ಯಾಂಡಲ್​​ವುಡ್​​ನಲ್ಲಿ ಸದ್ದು ಮಾಡಿದ್ದ ರಾಜ್ ಬಿ ಶೆಟ್ಟಿ ಮತ್ತೊಂದು ಹಾಸ್ಯ ಭರಿತ ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರನ್ನು ನಕ್ಕು ನಗಿಸಲು ಬಂದಿದ್ದಾರೆ. ಟ್ರೈಲರ್ ಮೂಲಕ ಸಖತ್ ಸೌಂಡ್ ಮಾಡಿದ್ದ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರ ರಾಜ್ಯಾದ್ಯಂತ ರಿಲೀಸ್ ಆಗಿದೆ.

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ. ಟ್ರೈಲರ್​​ ಮತ್ತು ಸ್ಟಾರ್​ಕಾಸ್ಟ್​​​​​ ಮೂಲಕ ಸಖತ್ ಸೌಂಡ್ ಮಾಡಿದ್ದ ಚಿತ್ರ. ಹಲವು ಸಿನಿಮಾಗಳಲ್ಲಿ ಕಾಮಿಡಿ ಪಾತ್ರಗಳ ಮೂಲಕ ನಗಿಸಿದ್ದ ಸುಜಯ್ ಶಾಸ್ತ್ರಿ ಈ ಚಿತ್ರದ ಸೂತ್ರಧಾರ. ಹಾಸ್ಯ ಭರಿತ ಸಿನಿಮಾ ಇದಾಗಿದ್ದು ರಾಜ್ ಬಿ ಶೆಟ್ಟಿ ಮತ್ತೆ ತಮ್ಮ ಡೈಲಾಗ್​ಗಳ ಮೂಲಕ ಕಮಾಲ್ ಮಾಡಿದ್ದಾರೆ. ಸಿನಿಮಾ ರಾಜ್ಯಾದ್ಯಂತ ತೆರೆಕಂಡು ಭರ್ಜರಿ ರೆಸ್ಪಾನ್ಸ್​ ಪಡೆದುಕೊಂಡಿದೆ.

ಚಿತ್ರ: ಗುಬ್ಬಿ ಮೇಲೆ ಬ್ರಹ್ಮಾಸ್ತ್ರ
ನಿರ್ದೇಶನ: ಸುಜಯ್ ಶಾಸ್ತ್ರಿ
ನಿರ್ಮಾಪಕ: ಟಿ ಆರ್ ಚಂದ್ರಶೇಖರ್
ಸಂಗೀತ: ಮಣಿಕಾಂತ್ ಕದ್ರಿ
ಛಾಯಾಗ್ರಹಣ: ಸುನಿತ್ ಹಲಗೇರಿ
ತಾರಾಬಳಗ: ರಾಜ್ ಬಿ ಶೆಟ್ಟಿ, ಕವಿತಾ ಗೌಡ, ಸುಜಯ್ ಶಾಸ್ತ್ರಿ, ಅರುಣಾ ಬಾಲರಾಜ್, ಪ್ರಮೋದ್ ಶೆಟ್ಟಿ ಇತರರು.

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸ್ಟೋರಿಲೈನ್
ವೆಂಕಟ್ ಕೃಷ್ಣ ಗುಬ್ಬಿ ಚಿತ್ರದ ನಾಯಕ. ವಯಸ್ಸಾದ್ರು ವೆಂಕಟ್​​ಗೆ ಮದುವೆಯಾಗಿರೋದಿಲ್ಲ. ಪ್ರೀತಿ ಮಾಡಿ ಮದುವೆ ಆಗಬೇಕು ಅನ್ನೋದು ವೆಂಕಟ್ ಪಾಲಿಸಿ. ಅದ್ರಂತೆ ಫೇಸ್​ಬುಕ್​ನಲ್ಲಿ ಪರ್ಪಲ್ ಪ್ರಿಯಾ ಪರಿಚಯವಾಗ್ತಾಳೆ. ಆಕೆ ಇವ್ನ ಪ್ರೀತಿಯನ್ನು ಒಪ್ಪಿಕೊಂಡ ನಂತರ ಅವಳಿಂದ ಹಾಗೂ ಅವಳಿಗಾಗೋ ಸಮಸ್ಯೆಗಳನ್ನು ಹೇಗೆ ಎದುರಿಸುತ್ತಾನೆ ಅನ್ನೋದೇ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ. ಸಿಂಪಲ್​ ಕಥೆಯನ್ನ ಸಖತ್ ಕಾಮಿಡಿಯಾಗಿ, ಲವಲವಿಕೆಯಿಂದ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಸುಜಯ್ ಶಾಸ್ತ್ರಿ.

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಆರ್ಟಿಸ್ಟ್​ ಪರ್ಫಾರ್ಮೆನ್ಸ್
ದಿನನಿತ್ಯ ನಡೆಯುವ ವಿಚಾರವನ್ನೇ ಇಟ್ಟುಕೊಂಡು ಸುಜಯ್ ಚೆನ್ನಾಗಿ ಸ್ಕ್ರಿಪ್ಟ್ ಮಾಡಿ ಮೊದಲ ಸಿನಿಮಾದಲ್ಲೇ ಗೆದ್ದಿದ್ದಾರೆ. ಒನ್ಸ್ ಅಗೇನ್​ ರಾಜ್ ಬಿ ಶೆಟ್ಟಿ ತಮ್ಮ ಅಭಿನಯದ ಮೂಲಕ ಕಮಾಲ್ ಮಾಡಿದ್ದಾರೆ. ಅರುಣಾ ಬಾಲರಾಜ್, ಮಂಜುನಾಥ್ , ಸುಜಯ್ ಶಾಸ್ತ್ರಿ ಸ್ಕ್ರೀನ್ ಮೇಲೆ ಬಂದಾಗಲೆಲ್ಲ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಾರೆ. ಪರ್ಪಲ್ ಪ್ರಿಯಾ ಆಗಿ ಕವಿತಾ ಗೌಡ ಸೊಗಸಾಗಿ ಕಂಡ್ರೆ, ರಾಬಿನ್ ಹುಡ್ ಪಾತ್ರದಲ್ಲಿ ಪ್ರಮೋದ್​ ಶೆಟ್ಟಿ ಇಷ್ಟವಾಗ್ತಾರೆ.

ಕ್ರಿಸ್ಟಲ್ ಪಾರ್ಕ್ ಸಿನಿಮಾಸ್​​ ಬ್ಯಾನರ್​ನಲ್ಲಿ ಹ್ಯಾಟ್ರಿಕ್​ ಸಿನಿಮಾಗಳ ಸರದಾರ ನಿರ್ಮಾಪಕ ಟಿ.ಆರ್ ಚಂದ್ರಶೇಖರ್. ಮತ್ತೊಂದು ಸಕ್ಸಸ್ ಫುಲ್ ಸಿನಿಮಾ ಕೊಟ್ಟಿದ್ದಾರೆ ನಿರ್ಮಾಪಕ ಟಿ.ಆರ್ ಚಂದ್ರ ಶೇಖರ್. ಮಣಿಕಾಂತ್ ಕದ್ರಿ ಸಂಗೀತ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ಮತ್ತೊಂದು ಪ್ಲಸ್​ ಪಾಯಿಂಟ್.

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ಲಸ್ ಪಾಯಿಂಟ್:
⦁ ಸ್ಕ್ರೀನ್ ಪ್ಲೇ & ನಿರ್ದೇಶನ
⦁ ಕಲಾವಿದರ ನಟನೆ
⦁ ಸಂಗೀತ

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಮೈಸನ್ ಪಾಯಿಂಟ್:
ದ್ವಿತಿಯಾರ್ಧ ಕೊಂಚ ಲ್ಯಾಗ್ ಅನ್ನೋದನ್ನ ಹೊರತು ಪಡಿಸಿದ್ರೆ ಇಡೀ ಸಿನಿಮಾ ಅಚ್ಚುಕಟ್ಟಾಗಿ ಮೂಡಿ ಬಂದಿದ್ದು ಪ್ರೇಕ್ಷಕರನ್ನ ನಗೆಗಡಲಲ್ಲಿ ತೇಲಿಸುತ್ತದೆ.

TV5 ರೇಟಿಂಗ್: 4/5

ಫೈನಲ್ ಸ್ಟೇಟ್​ಮೆಂಟ್
ಇಡೀ ಫ್ಯಾಮಿಲಿ ಕುಳಿತು ಹೊಟ್ಟೆ ಹುಣ್ಣಾಗುವಷ್ಟು ನಗಬೇಕು ಅಂದ್ರೆ ಮಿಸ್ ಮಾಡ್ದೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಿನಿಮಾ ನೋಡಿ ಎಂಜಾಯ್ ಮಾಡಿ.
ಭಾರತಿ ಜಾವಳ್ಳಿ ಎಂಟಟೈನ್ಮೆಂಟ್ ಬ್ಯುರೋ ಟಿವಿ5

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.