ಸೈರಾ ನರಸಿಂಹ ರೆಡ್ಡಿಯ ಸಾಮ್ರಾಜ್ಯದ ಸಣ್ಣ ಝಲಕ್ ನಿಮಗಾಗಿ

ಈ ವರ್ಷದ ಮೋಸ್ಟ್ ಅವೇಟೆಡ್​​​ ಬಯೋಗ್ರಾಫಿಕಲ್​ ಎಪಿಕ್​ ಆ್ಯಕ್ಷನ್​ ಸಿನಿಮಾ ಸೈರಾ ನರಸಿಂಹ ರೆಡ್ಡಿ. ಚಿರಂಜೀವಿ, ಬಿಗ್​ಬಿ, ಸುದೀಪ್ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸಿರೋ ಹೈವೋಲ್ಟೇಜ್​​​ ಸಿನಿಮಾ ಇದು. ಅಕ್ಟೋಬರ್​ನಲ್ಲಿ ಸೈರಾ ಸಮರಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು,ಈ ಗ್ಯಾಪ್​ನಲ್ಲೇ ಸ್ಪೆಷಲ್​​ ಮೇಕಿಂಗ್ ಝಲಕ್​ ರಿವೀಲ್ ಆಗಿದೆ.

ಹೇಗಿದೆ ಗೊತ್ತಾ ಸೈರಾ ನರಸಿಂಹ ರೆಡ್ಡಿ ಸಾಮ್ರಾಜ್ಯ..?
ಝಲ್ ಎನಿಸ್ತಿದೆ ಸೈರಾ ಮೆಗಾ ಮೇಕಿಂಗ್ ಝಲಕ್​
ಕೋಟೆ ಕೊತ್ತಲುಗಳ ಅದ್ದೂರಿ ಸೆಟ್​ಗಳು. ಅಂದಿನ ಕಾಲದಲ್ಲಿ ಬಳಸ್ತಿದ್ದ ಯುದ್ಧ ಸಾಮಗ್ರಿಗಳು. ಆ ಕಾಲದ ವೇಷಭೂಷಣ. ಕುದುರೆ ಸವಾರರ ಆರ್ಭಟ. ಬ್ರಿಟೀಷರ ಬಂದೂಕು, ಪಿರಂಗಿ ಸದ್ದು.. ಅಬ್ಬಬ್ಬಾ ಸೈರಾ ಸಾಮ್ರಾಜ್ಯ ಅದ್ಧೂರಿ, ಅದ್ಭುತ ಮತ್ತು ಅತೀ ರೋಚಕ.

ನರಸಿಂಹ ರೆಡ್ಡಿ ಸಾಮ್ರಾಜ್ಯದಲ್ಲಿ ದಿಗ್ಗಜರ ಸಮಾಗಮ
ಸೈರಾ ಅಖಾಡದಲ್ಲಿ ಕನ್ನಡ ಸೂಪರ್​ ಸ್ಟಾರ್​ ಕಿಚ್ಚನ ಹವಾ
ಸೈರಾ ನರಸಿಂಹರೆಡ್ಡಿ. ಮೆಗಾ ಫ್ಯಾಮಿಲಿಯ ಮಹತ್ವಾಕಾಂಕ್ಷೆಯ ಸಿನಿಮಾ.. ಸುರೇಂದರ್ ರೆಡ್ಡಿ ನಿರ್ದೇಶನದ ಬಹುಕೋಟಿ ವೆಚ್ಚದ ಐತಿಹಾಸಿಕ ಚಿತ್ರ. ಚಿರಂಜೀವಿ, ಅಮಿತಾಬ್ ಬಚ್ಚನ್, ಕಿಚ್ಚ ಸುದೀಪ್, ವಿಜಯ್ ಸೇತುಪತಿ, ನಯನತಾರಾ, ತಮನ್ನಾ, ಅನುಷ್ಕಾ ಶೆಟ್ಟಿರಂತಹ ಸೂಪರ್ ಸ್ಟಾರ್​ಗಳು ಕೈ ಜೋಡಿಸಿರೋ ಸೂಪರ್ ಪ್ರಾಜೆಕ್ಟ್. ತೆಲುಗು- ಹಿಂದಿ ಸೇರಿದಂತೆ ಪಂಚ ಭಾಷೆಗಳಲ್ಲಿ ನಿರ್ಮಾಣವಾಗ್ತಿರೋ ಪ್ಯಾನ್​ ಇಂಡಿಯನ್​ ಸಿನಿಮಾ ಸೈರಾ ನರಸಿಂಹ ರೆಡ್ಡಿ. ಸದ್ಯ ಸೈರಾ ಮೇಕಿಂಗ್​ ವೀಡಿಯೋ ಧೂಳೆಬ್ಬಿಸಿದೆ.

ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ನರಸಿಂಹ ರೆಡ್ಡಿ ಸ್ನೇಹಿತ ಅವುಕು ರಾಜು ಪಾತ್ರದಲ್ಲಿ ಬಣ್ಣ ಹಚ್ಚಿದ್ದು, ಕಿಚ್ಚನ ಲುಕ್ಕು, ಖದರ್​ ಸಿಂಪ್ಲಿ ಸೂಪರ್.

ನರಸಿಂಹ ರೆಡ್ಡಿ ಗುರುವಾಗಿ ಅಮಿತಾಬ್​, ಪತ್ನಿಯಾಗಿ ನಯನತಾರಾ, ತಮಿಳು ಪಾಳೇಗಾರನಾಗಿ ವಿಜಯ್ ಸೇತುಪತಿ, ಜಗಪತಿ ಬಾಬು ಹೀಗೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ನರಸಿಂಹ ರೆಡ್ಡಿ ಬ್ರಿಟೀಷರ ವಿರುದ್ಧ ಹೋರಾಡುವ ದೃಶ್ಯಗಳನ್ನ ಬಹಳ ಅದ್ಭುತವಾಗಿ ಸೆರೆಹಿಡಿಯಲಾಗಿದೆ. ರಾಮೋಜಿ ಫಿಲ್ಮ್​ ಸಿಟಿ, ಜಾರ್ಜಿಯಾ, ಹೊಗನೇಕಲ್​​, ಕೇರಳ ಸೇರಿದಂತೆ ಅದ್ಭುತ ಲೊಕೇಶನ್​ಗಳಲ್ಲಿ ಶೂಟಿಂಗ್ ನಡೆದಿದೆ.

ಹಾಲಿವುಡ್​​​ನ ಗ್ರೇಗ್​ ಪೋವೆಲ್​​, ಲೀ ವಿಟ್ಟೇಕರ್​​​ ಮತ್ತು ರಾಮ್​- ಲಕ್ಷ್ಮಣ್​ ಮಾಸ್ಟರ್​​ ಸೈರಾ ಆ್ಯಕ್ಷನ್​ ಸೀಕ್ವೆನ್ಸ್ ಕಂಪೋಸ್ ಮಾಡಿದ್ದಾರೆ. 1850 ಹಿಂದಿನ ಕಾಲಘಟ್ಟವನ್ನ ಸೈರಾ ಸಿನಿಮಾದಲ್ಲಿ ಕಟ್ಟಿಕೊಡೋಕ್ಕೆ ಚಿತ್ರತಂಡ ಸಿಕ್ಕಾಪಟ್ಟೆ ಶ್ರಮಿಸಿದೆ. ನಿರ್ದೇಶಕ ಸುರೇಂದರ್ ರೆಡ್ಡಿ, ಬಾಹುಬಲಿಯನ್ನ ಮೀರಿಸುವಂತೆ ಸೈರಾ ಚಿತ್ರವನ್ನ ತೆರೆಗೆ ತರೋ ಪ್ರಯತ್ನ ಮಾಡ್ತಿದ್ದಾರೆ. ಮೇಕಿಂಗ್​ ಝಲಕ್​​​​​ನಲ್ಲಿ ಅದರ ಸುಳಿವು ಸಿಕ್ತಿದೆ.
ನಾಣಿ.. ಎಂಟ್ರಟ್ರೈನ್​ಮೆಂಟ್ ಬ್ಯೂರೋ, ಟಿವಿ5

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.