ಸಿಎಂ ಯಡಿಯೂರಪ್ಪರ ನಿವಾಸಕ್ಕೆ ಜಿಟಿಡಿ ಭೇಟಿ ನೀಡಿದ್ಯಾಕೆ ಗೊತ್ತಾ..?

ಮೈಸೂರು: ಮೈಮುಲ್ ಅಧ್ಯಕ್ಷರಾಗಿ ಜಿ.ಟಿ.ದೇವೇಗೌಡರ ಆಪ್ತರಾದ ಸಿದ್ದೇಗೌಡ ಆಯ್ಕೆಯಾಗಿದ್ದು, ಮೈಸೂರಿನ ತಮ್ಮ ನಿವಾಸದಲ್ಲಿ ಜಿಟಿಡಿ ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಜಿಟಿಡಿ, ಈ ಮೊದಲೇ ಸಿದ್ದೇಗೌಡರನ್ನ ಅಧ್ಯಕ್ಷರಾಗಿ ಆಯ್ಕೆ ಮಾಡಲು ತೀರ್ಮಾನ ಮಾಡಲಾಗಿತ್ತು. ಆದ್ರೆ ವಾರದ ಹಿಂದೆ ನಾಮನಿರ್ದೇಶನವಾದ ಬಿಎಸ್ವೈ ತಂಗಿ ಮಗ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದರು. ಈ ವಿಚಾರ ಮಾತನಾಡಲು ನಾನು ಬಿಎಸ್ವೈ ಅವರ ಮನೆಗೆ ಹೋಗಿದ್ದೆ. ಅವರು ಪ್ರೀತಿಯಿಂದ ಮಾತನಾಡಿಸಿ ನನ್ನ ಮನವಿ ಕೇಳಿದರು. ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಇರಬಾರದು. ಎಲ್ಲರೂ ಅಧ್ಯಕ್ಷರನ್ನಾಗಿ ಸಿದ್ದೇಗೌಡ ಆಯ್ಕೆ ಮಾಡಲು ತೀರ್ಮಾನಿಸಿದ್ದಾರೆ ಎಂದೆ.

ಅದಕ್ಕೆ ಪ್ರತಿಯಾಗಿ ಅವರು ವಿಜಯೇಂದ್ರ ಅವರಿಗೆ ತಿಳಿಸಿ ಅಶೋಕ್ ನಾಮಪತ್ರ ವಾಪಸ್ ಪಡೆದಿದ್ದಾರೆ. ರೈತರಿಗೆ ಅನಕೂಲ ಆಗೋ ಕ್ಷೇತ್ರದಲ್ಲಿ ರಾಜಕೀಯ ಇರಬಾರದು ಅನ್ನೋದೆ ನಮ್ಮ ಉದ್ದೇಶ. ನಮ್ಮ ಮನವಿಗೆ ಸ್ಪಂದಿಸಿದ ಸಿಎಂಗೆ ಧನ್ಯವಾದಗಳು ಎಂದು ಧನ್ಯವಾದ ತಿಳಿಸಿದರು.

ಅದೇ ರೀತಿ ಅಶೋಕ್ ಅವರು ಸಹ ನಮಗೆ ಸಹಕರಿಸದ್ದಕ್ಕೆ ಧನ್ಯವಾದಗಳು. ನಾನು ಇದೊಂದೆ ವಿಚಾರಕ್ಕೆ ಸಿಎಂ ಮನೆಗೆ ಹೋಗಿದ್ದೆ. ಆ ಸಂದರ್ಭದಲ್ಲಿ ಕೆಲ ನಾಯಕರು ಅಲ್ಲೇ ಇದ್ದರು. ಅದು ಬಿಟ್ಟರೆ ರಾಜಕೀಯ ಇಲ್ಲ ಎಂದು ಮೈಸೂರಿನಲ್ಲಿ ಜಿಟಿಡಿ ಸ್ಪಷ್ಟನೆ ನೀಡಿದ್ದಾರೆ.

ಇನ್ನು ಮೈತ್ರಿ ಸರ್ಕಾರದಲ್ಲಿ ಫೋನ್ ಕದ್ದಾಲಿಕೆ ಆಗಿತ್ತೆಂಬ ವಿಷಯದ ಬಗ್ಗೆ ಮಾತನಾಡಿದ ಜಿ.ಟಿ.ದೇವೇಗೌಡ, ನನಗೆ ಯಾರು ಏನು ಮಾಡ್ತಾರೆ ಅನ್ನೋದು ಬೇಕಾಗಿಲ್ಲ. ಅವರೇನು ಅಂತಾನೆ ಇವರೇನು ಅಂತಾನೆ ಅನ್ನೋದನ್ನ ತಿಳಿದುಕೊಳ್ಳುವ ಅವಶ್ಯಕತೆ ನನಗೆ ಇಲ್ಲ. ಬೇರೆಯವರು ಯಾರ ಮಾತನನ್ನ ಕೇಳಿಸಿಕೊಳ್ತಾರೋ.? ಆ ಪೋನ್ ಕದ್ದಾಲಿಗೆ ಯಾಕೇ ಮಾಡ್ತಿದ್ದಾರೆ ಅಂತ ನನಗೆ ಅರ್ಥವಾಗುತ್ತಲೇ ಇಲ್ಲ. ಎಲ್ಲವನ್ನು ನೇರವಾಗಿ ಮಾತನಾಡುವವನು ನಾನು. ನನಗೆ ಅದರ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.

ಅಲ್ಲದೇ, ಕುಮಾರಸ್ವಾಮಿ ಮಾಡಿಸಿದ್ದಾರೆಂಬ ಆರೋಪದ ಬಗ್ಗೆ ತನಗೇನು ಗೊತ್ತಿಲ್ಲವೆಂದು ಹೇಳಿದ ಜಿಟಿಡಿ, ಆ ಬಗ್ಗೆ ನನಗೇನು ಗೊತ್ತಿಲ್ಲ. ಹಿಂದೆಯೂ ಫೋನ್ ಕದ್ದಾಲಿಕೆ ತನಿಖೆ ಆಗಿದೆ ಅಲ್ವಾ, ಈಗಲೂ ಆಗಲಿ ಎಂದು ಜಿಟಿಡಿ ಆಗ್ರಹಿಸಿದ್ದಾರೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.