ಚೆನ್ನೈನಲ್ಲಿ ಲೈಟ್ ಬಾಯ್ ಆಗಿದ್ದರಂತೆ ದಚ್ಚು..!

ಚಾಲೆಂಜಿಂಗ್ ಸ್ಟಾರ್ ದರ್ಶನ್​ ನಟನೆಯ ಕುರುಕ್ಷೇತ್ರ ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ತೆರೆಕಂಡು ಭರ್ಜರಿ ಪ್ರದರ್ಶನ ಕಾಣ್ತಿದೆ. ಇದೀಗ ತಮಿಳು ವರ್ಷನ್​ ರಿಲೀಸ್​ಗೆ ರೆಡಿಯಾಗಿದ್ದು, ಚೆನ್ನೈನಲ್ಲಿ ಕುರುಕ್ಷೇತ್ರ ಪ್ರಿರಿಲೀಸ್​​​ ಈವೆಂಟ್​​​ ನಡೆದಿದೆ. ಕಾರ್ಯಕ್ರಮದಲ್ಲಿ ತಮಿಳಿನಲ್ಲೇ ಮಾತನಾಡಿರೋ ದರ್ಶನ್​​​​, ಚೆನ್ನೈ ಜೊತೆಗಿನ ನಂಟು ಮತ್ತು ತಮ್ಮ ಹಳೇ ದಿನಗಳನ್ನ ನೆನಪಿಸಿಕೊಂಡಿದ್ದಾರೆ.

ಚಾಲೆಂಜಿಂಗ್​ ಸ್ಟಾರ್ ತಮಿಳು ಕೇಳಿ ಫ್ಯಾನ್ಸ್ ಫಿದಾ
ಚೆನ್ನೈನಲ್ಲಿ ಲೈಟ್ ಬಾಯ್ ದಚ್ಚು ಜೀವನ ರಹಸ್ಯ..!!
ಬಾಕ್ಸಾಫೀಸ್ ಸುಲ್ತಾನ್​ ದರ್ಶನ್​, ದುರ್ಯೋಧನನಾಗಿ ಬಾಕ್ಸಾಫೀಸ್​ನಲ್ಲಿ ಧೂಳೆಬ್ಬಿಸಿದ್ದಾರೆ. ಕರ್ನಾಟಕ ಮತ್ತು ತೆಲುಗು ರಾಜ್ಯಗಳಲ್ಲಿ ಕುರುಕ್ಷೇತ್ರ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದ್ದು, ವಿದೇಶದಲ್ಲೂ ಕೌರವೇಶ್ವರನ ದರ್ಬಾರ್ ಜೋರಾಗಿದೆ. ಇದೀಗ ಕಾಲಿವುಡ್,​ ಮಾಲಿವುಡ್​ ಕಡೆ ದುರ್ಯೋಧನನ ದಂಡಯಾತ್ರೆ ಮುಂದುವರೆದಿದೆ.

ಈ ವಾರ ತಮಿಳಿನಲ್ಲಿ ಕುರುಕ್ಷೇತ್ರ ಸಿನಿಮಾ ರಿಲೀಸ್ ಆಗ್ತಿದ್ದು, ಚೆನ್ನೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡ ಭಾಗವಹಿಸಿತ್ತು. ಈ ವೇಳೆ ಸ್ಪಷ್ಟ ತಮಿಳಿನಲ್ಲೇ ಮಾತನಾಡಿದ ದರ್ಶನ್, ಚೆನ್ನೈ ಜೊತೆಗಿನ ತಮ್ಮ ನಂಟಿನ ಬಗ್ಗೆ ಮಾತನಾಡಿದ್ರು.

ನಾನು ಅಡ್ಯಾರ್​ ಫಿಲ್ಮ್​ ಇನ್ಸಿಟ್ಯೂಟ್ ಸ್ಟೂಡೆಂಟ್. ನಾನು ಆ್ಯಕ್ಟಿಂಗ್ ಕೋರ್ಸ್ ಇಲ್ಲೆ ಮಾಡ್ದೆ. ನನ್ನ ಬ್ಯಾಚ್​ಮೇಟ್ಸ್ ಇಲ್ಲೇ ಇದ್ದಾರೆ. ಅಲ್ಲಿಂದ ನನ್ನ ಕರಿಯರ್ ಸ್ಟಾರ್ಟ್ ಆಯ್ತು. ಸಿನಿಮಾ ವಿಷಯಕ್ಕೆ ಬಂದ್ರೆ, ಲೈಟ್​ ಬಾಯ್​ ಆಗಿ ನಾನು ವೃತ್ತಿ ಆರಂಭಿಸಿದೆ. 150 ರೂಪಾಯಿ ನನ್ನ ವರಮಾನ ಆಗ. ಹಾಗೆ ಶುರುವಾಯ್ತು. ಅಲ್ಲಿಂದ ಇಲ್ಲಿವರೆಗೆ ಬರೋದಕ್ಕೆ ಸುಮಾರು 25-26 ವರ್ಷ ಆಯ್ತು.

ದರ್ಶನ್,​ ನೀನಾಸಂ ವಿದ್ಯಾರ್ಥಿ ಅನ್ನೋದು ಎಲ್ಲರಿಗೂ ಗೊತ್ತಿತ್ತು. ಆದ್ರೆ ಇದೇ ಮೊದಲ ಬಾರಿಗೆ ಚೆನ್ನೈ ಅಡ್ಯಾರ್​ ಸಂಸ್ಥೆಯಲ್ಲಿ ಅಭಿನಯ ಕಲಿತಿದ್ದರ ಬಗ್ಗೆ ಅವರು ಮಾತನಾಡಿದ್ದಾರೆ. ದರ್ಶನ್​ ಲೈಟ್​ ಬಾಯ್​ ಆಗಿ ಮುಂದೆ ಸಣ್ಣಪುಟ್ಟ ಪಾತ್ರಗಳ ಮೂಲಕ ಗುರ್ತಿಸಿಕೊಂಡು ನಂತ್ರ ಹೀರೋ ಆದ್ರು. ತಮಿಳಿನ ವಲ್ಲರಸು ಸಿನಿಮಾದಲ್ಲೂ ದರ್ಶನ್​ ಬಣ್ಣ ಹಚ್ಚಿದ್ರು. ಇತ್ತೀಚೆಗೆ ಹೈದರಾಬಾದ್​​ನಲ್ಲಿ ತೆಲುಗು ಮಾತನಾಡಿ ನೆರೆದಿದ್ದವರ ಮನಗೆದ್ದಿದ್ದ ದಚ್ಚು, ಇದೀಗ ತಮಿಳು ಮಾತನಾಡಿ ಸೈ ಅನ್ನಿಸಿಕೊಂಡಿದ್ದಾರೆ.

ಖಳನಟರ ಮಕ್ಕಳು ಹೀರೋಗಳಾದ ಕಥೆ ಹೇಳಿದ ದರ್ಶನ್..!
ತಮ್ಮ ‘ಸೀನಿಯರ್’ ಕರ್ಣನ ಬಗ್ಗೆ ದಚ್ಚು ಹೇಳಿದೇನು ಗೊತ್ತಾ..?
ಇನ್ನು ಚಿತ್ರದಲ್ಲಿ ಕರ್ಣನ ಪಾತ್ರ ಮಾಡಿರೋ ಅರ್ಜುನ್ ಸರ್ಜಾ ಬಗ್ಗೆ ದಚ್ಚು ಮನಬಿಚ್ಚಿ ಮಾತನಾಡಿದ್ರು. ತಾವು ಏಕೆ ಅವರನ್ನ ಸೀನಿಯರ್ ಅಂತ ಕರಿಯೋದು ಅನ್ನೋದನ್ನು ಹೇಳಿದ್ರು.

ಹೆಮ್ಮೆಯ ವಿಷಯ ಏನಂದ್ರೆ, ಎಲ್ಲರೂ ಅರ್ಜುನ್​ ಸರ್ಜಾ ಅವರನ್ನ ಅರ್ಜುನ್ ಸರ್​ ಅಂತ ಕರಿತಾರೆ. ಆದ್ರೆ ನಾನು ಮಾತ್ರ ಸೀನಿಯರ್ ಅಂತ ಕರೀತಿನಿ. ಕಾರಣ ನಮ್ಮ ತಂದೆ ಕನ್ನಡ ಸಿನಿಮಾಗಳಲ್ಲಿ ಖಳನಟನಾಗಿ ಕೆಲಸ ಮಾಡ್ತಿದ್ರು. ಅವರೀಗ ಇಲ್ಲ. ನಮ್ಮ ತಂದೆ ಮತ್ತು ಅವರ ತಂದೆ ಒಟ್ಟೋಟ್ಟಿಗೆ ಕೆಲಸ ಮಾಡ್ತಿದ್ರು. ಖಳನಟರ ಮಕ್ಕಳು ಕೂಡ ಹೀರೋ ಆಗಬಹುದು, ಅದು ಸಾಧ್ಯ ಅಂತ ತೋರಿಸಿಕೊಟ್ಟವರು ಅವರು. ಹೀರೋ ಮಗ ಹೀರೋ ಆಗ್ಬೇಕು, ವಿಲನ್ ಮಗ ವಿಲನ್​ ಆಗಬೇಕು ಅನ್ನೋದನ್ನ ಬ್ರೇಕ್​ ಮಾಡಿದ್ದು ಅವರು, ಅದಕ್ಕೆ ಅವರನ್ನ ಸೀನಿಯರ್ ಅಂತೀನಿ.

ಒಟ್ಟಾರೆ ದರ್ಶನ್​ ಮಾತು ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಕುರುಕ್ಷೇತ್ರ ತಮಿಳು ಸಿನಿಮಾ ಕೂಡ ನಿರೀಕ್ಷೆ ಮೂಡಿಸಿದ್ದು, ದೊಡ್ಟಮಟ್ಟದಲ್ಲಿ ಸದ್ದು ಮಾಡೋ ಸುಳಿವು ಸಿಕ್ತಿದೆ. ಕಾಲಿವುಡ್​ನಲ್ಲಿ ದುರ್ಯೋಧನನ ದರ್ಬಾರ್​ ಹೇಗಿರುತ್ತೆ ಅಂತ ಕಾದು ನೋಡ್ಬೇಕು.
ಎಂಟ್ರಟ್ರೈನ್​ಮೆಂಟ್ ಬ್ಯೂರೋ,ಟಿವಿ5

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.