ಸೌತ್‌ ಸಿನಿದುನಿಯಾದಲ್ಲಿ ಮೋಡಿ ಮಾಡಲಿದೆ ದೇವರಕೊಂಡ- ಪೂರಿ ಡೆಡ್ಲಿ ಕಾಂಬಿನೇಷನ್‌

ಕ್ರೇಜಿ ಕಾಂಬಿನೇಷನ್​​ ಸಿನಿಮಾಗಳಿಗೆ ಸಿನಿ ರಸಿಕರು ಕಾಯ್ತಾ ಇರ್ತಾರೆ. ಸದ್ಯ ಟಾಲಿವುಡ್​ ಅಂಗಳದಲ್ಲಿ ಸೂಪರ್ ಹಿಟ್ ಸಿನಿಮಾಗಳ ಮೂಲಕ ಸೆನ್ಸೇಷನ್​ ಕ್ರಿಯೇಟ್ ಮಾಡಿರೋ ಹೀರೋ ಮತ್ತು ಡೈರೆಕ್ಟರ್​ ಒಂದೇ ಚಿತ್ರಕ್ಕೆ ಕೈ ಜೋಡಿಸಿದ್ದಾರೆ. ಈ ಸುದ್ದಿ ತೆಲುಗು ಚಿತ್ರರಂಗದಲ್ಲಿ ವಿದ್ಯುತ್​ ಸಂಚಾರ ಆಗುವಂತೆ ಮಾಡಿದೆ.

ಒಬ್ರು ಸೌತ್​ ಸಿನಿದುನಿಯಾದ ಸೆನ್ಸೇಷನಲ್ ಯಂಗ್​ ಹೀರೋ
ಮತ್ತೊಬ್ರು ಟಾಲಿವುಡ್ ಡ್ಯಾಶಿಂಗ್​ ಡೈರೆಕ್ಟರ್ ಪೂರಿ ಜಗನ್ನಾಥ್
ದೇವರಕೊಂಡ​​- ಪೂರಿ ಡೆಡ್ಲಿ ಕಾಂಬಿನೇಷನ್​​​​ ಸಿನಿಮಾ ಕನ್ಫರ್ಮ್
ಸ್ಟಾರ್ ಡೈರೆಕ್ಟರ್ ಪೂರಿ ಜಗನ್ನಾಥ್​​ ಡೈರೆಕ್ಷನ್​ನಲ್ಲಿ ವಿಜಯ್​ ದೇವರಕೊಂಡ ನಟಿಸೋ ಬ್ರೇಕಿಂಗ್​ ನ್ಯೂಸ್ ಟಾಲಿವುಡ್​ನಲ್ಲಿ ಸಖತ್ ಸೌಂಡ್ ಮಾಡ್ತಿದೆ. ಈ ವಿಚಾರವನ್ನ ಸ್ವತ: ಚಾರ್ಮಿ ಕೌರ್​ ಕನ್ಫರ್ಮ್​ ಮಾಡಿದ್ದು, ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ. ಪೂರಿ- ವಿಜಯ್ ಕ್ರೇಜಿ ಕಾಂಬಿನೇಷನ್​ ಸಿನಿಮಾ ಸಿಕ್ಕಾಪಟ್ಟೆ ಕುತೂಹಲ ಕೆರಳುವಂತೆ ಮಾಡಿದೆ.

ಇಸ್ಮಾರ್ಟ್​ ಶಂಕರ್​ ಸಿನಿಮಾ ಬ್ಲಾಕ್​ ಬಸ್ಟರ್ ಹಿಟ್​ ಸಂಭ್ರಮದಲ್ಲಿರೋ ಪೂರಿ, ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಅರ್ಜುನ್​ ರೆಡ್ಡಿ, ಗೀತಾಗೋವಿಂದಂ ಸಿನಿಮಾಗಳ ಮೂಲಕ ಕಮಾಲ್ ಮಾಡಿದ ವಿಜಯ್ ದೇವರಕೊಂಡ, ಇತ್ತೀಚೆಗೆ ಡಿಯರ್ ಕಾಮ್ರೇಡ್​ ಸಿನಿಮಾದಲ್ಲಿ ಮಿಂಚಿದ್ರು. ಇದೀಗ ವಿಜಯ್​ಗಂತ್ಲೇ ಪೂರಿ ಸ್ಪೆಷಲ್ ರೋಲ್​ ಡಿಸೈನ್​ ಮಾಡಿದ್ದು, ಪರ್ಫೆಕ್ಟ್​ ಕಾಂಬಿನೇಷನ್​ನಲ್ಲಿ ಪಕ್ಕಾ ಮಾಸ್​ ಮಸಾಲ ಸಿನಿಮಾ ರೆಡಿಯಾಗೋದು ಕನ್ಫರ್ಮ್​ ಆಗಿದೆ.

ಪೂರಿ ಜಗನ್ನಾಥ್​ ಸಿನಿಮಾಗಳಲ್ಲಿ ಹೀರೋಗಳು ಪಕ್ಕಾ ರೌಡಿಗಳ ತರ ಬಿಹೇವ್​ ಮಾಡ್ತಾರೆ ಅಂತ ಕೆಲವರು ಹೇಳ್ತಾರೆ. ಹೀರೋ ಯಾರೇ ಆದ್ರೂ, ಆ ಸಿನಿಮಾದಲ್ಲಿ ಹೀರೋ ಪಾತ್ರದ ಮೇಲೆ ಪೂರಿ ಜಗನ್ನಾಥ್​​ ಛಾಯೆ ಇದ್ದೇ ಇರುತ್ತೆ. ಅಂತಾದ್ರಲ್ಲಿ ರೌಡಿಯಂತ ವಿಜಯ್​ ದೇವರಕೊಂಡ ಜೊತೆಯಾದ್ರೆ, ಅದಕ್ಕಿಂತ ಪರ್ಫೆಕ್ಟ್​​ ಕಾಂಬಿನೇಷನ್​​ ಇರತ್ತಾ ಹೇಳಿ. ಅದೇ ಕಾರಣಕ್ಕೆ ಈ ಸಿನಿಮಾ ಇನ್ನಿಲ್ಲದ ಕುತೂಹಲ ಕೆರಳಿಸಿದೆ. ಪೂರಿ ಟೇಕಿಂಗ್, ದೇವರಕೊಂಡ ಖದರ್​ ಸಿಂಕ್​ ಆದ್ರೆ, ಸಿನಿಮಾ ಬ್ಲಾಕ್​ ಬಸ್ಟರ್ ಗ್ಯಾರೆಂಟಿ ಅಂತಿದೆ ಟಾಲಿವುಡ್.

ದೇವರಕೊಂಡನ ರೌಡಿ ಮಾಡೋಕ್ಕೆ ಹೊರಟ ಪೂರಿ ಜಗನ್ನಾಥ್..!
ಪಕ್ಕಾ ಮಾಸ್​ ಮಸಾಲಾ ಎಂಟ್ರಟ್ರೈನರ್​​ ಚಿತ್ರಕ್ಕೆ ಭರ್ಜರಿ ಪ್ಲಾನ್
ಇಸ್ಮಾರ್ಟ್ ಶಂಕರ್ ನಂತ್ರ ಪೂರಿ ಜಗನ್ನಾಥ್​, ಡಬಲ್ ಇಸ್ಮಾರ್ಟ್ ಶಂಕರ್ ಅನ್ನೋ ಸಿನಿಮಾ ಮಾಡ್ತಾರೆ ಅನ್ನಲಾಗಿತ್ತು. ಆದ್ರೆ, ಅದನ್ನ ಪಕ್ಕಕ್ಕಿಟ್ಟು ವಿಜಯ್ ದೇವರಕೊಂಡ ಸಿನಿಮಾ ಕೈಗೆತ್ತಿಕೊಂಡಿದ್ಧಾರೆ. ಇದು ಪಕ್ಕಾ ಪೂರಿ ಸ್ಟೈಲ್ ಮಾಸ್ ಮಸಾಲಾ ಸಿನಿಮಾ ಆಗಿರುತ್ತೆ. ನಿರ್ದೇಶನದ ಜೊತೆಗೆ ಚಾರ್ಮಿ ಜೊತೆ ಸೇರಿ, ಚಿತ್ರಕ್ಕೆ ಪೂರಿ ಜಗನ್ನಾಥ್ ಬಂಡವಾಳ ಹಾಕ್ತಿದ್ಧಾರೆ. ಶೀಘ್ರದಲ್ಲೇ ಈ ಡೆಡ್ಲಿ ಕಾಂಬೋ ಸಿನಿಮಾ ಸೆಟ್ಟೇರಲಿದೆ.
ಎಂಟ್ರಟ್ರೈನ್​ಮೆಂಟ್ ಬ್ಯೂರೋ, ಟಿವಿ5

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.