ವೋಟ್ ಕೇಳೋಕೆ ಮಾತ್ರ ಬರ್ತಾರೆ.. ಥೂ…!

ಶಿರಸಿ: ಮುಂಡಗೋಡದಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ ಕಾರ್​ಗೆ ಮುತ್ತಿಗೆ ಹಾಕಿ ತಮ್ಮ ಗ್ರಾಮಕ್ಕೆ ಬರುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

ನಾನು ಬರುವುದು ಮುಖ್ಯವಲ್ಲ ಅಧಿಕಾರಿಗಳು ಕೆಲಸ ಮಾಡುವುದು ಮುಖ್ಯ ಎಂದು ಜಾರಿಕೊಂಡಿದ್ದಕ್ಕೆ ಮುಂಡಗೋಡು ಗ್ರಾಮಸ್ಥರು ಹಿಡಿಶಾಪ ಹಾಕಿದ ಘಟನೆ ತಾಲೂಕಿನ ಕಾತೂರಿನಲ್ಲಿ ನಡೆದಿದೆ.

ಚಿಗಳ್ಳಿ ಚಕ್ ಡ್ಯಾಮ್ ಒಡೆದುಹೋದ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಗ್ರಾಮಸ್ಥರು ಆಗಮಿಸಿದ್ದರು. ಈ ವೇಳೆ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಸಂಸದ ಅನಂತ ಕುಮಾರ್ ಹೆಗಡೆಗೆ ಪ್ರವಾಹದಿಂದ ಹಾನಿಯಾದ ನಮ್ಮೂರಿಗೆ ಬಂದು ವೀಕ್ಷಿಸಬೇಕೆಂದು ಗ್ರಾಮಸ್ಥರು ಒತ್ತಾಯ ಮಾಡಿದರು.

ಆದರೆ ಎಲ್ಲವನ್ನೂ ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ನಾನು ಬರುವುದು ಮುಖ್ಯವಲ್ಲ ಎಂದು ಜಾರಿಕೊಂಡು ಕಾರ್ ಹತ್ತಿ ವಾಪಸ್ ಆಗಿದ್ದಾರೆ. ಇದರಿಂದ ಕೋಪಗೊಂಡ ಸ್ಥಳೀಯ ಗ್ರಾಮಸ್ಥರು ಅನಂತಕುಮಾರ್ ಹೆಗಡೆಗೆ ಹಿಡಿ ಶಾಪ ಹಾಕಿದ್ದಾರೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.