‘ಸಿದ್ದರಾಮಯ್ಯಗೆ ದೆಹಲಿಗೆ, ಔತಣಕೂಟಕ್ಕೆ ಹೋಗಲು ಟೈಮ್ ಇದೆ. ಆದರೆ ಬಾದಾಮಿಗೆ ಬರಲಿಕ್ಕಿಲ್ಲ’

ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ವಾಗ್ದಾಳಿ ನಡೆಸಿದ್ದು, ದೆಹಲಿಗೆ ಮತ್ತು ಔತಣಕೂಟಕ್ಕೆ ಹೋಗಲು ಸಮಯ ಸಿಗತ್ತೆ. ಆದ್ರೆ ಬಾದಾಮಿಗೆ ಭೇಟಿ ನೀಡಲು ಮಾತ್ರ ಸಿದ್ದರಾಮಯ್ಯ ಅವರಿಗೆ ಸಮಯವಿಲ್ಲವೆಂದು ಹರಿಹಾಯ್ದಿದ್ದಾರೆ.

ಯಾವತ್ತೂ ನೆನಪು ಮರೆಯಬಾರದು. ಚಾಮುಂಡೇಶ್ವರಿ ಕೋಪಕ್ಕೆ ಅಲ್ಲಿ ಸೋತರೂ ಕೂಡ, ಇಲ್ಲಿ ತಾಯಿ ಬನಶಂಕರಿ ಕೈ ಹಿಡಿದುಕೊಂಡಳು. ಈ ಕ್ಷೇತ್ರದ ಜನ ಕಷ್ಟದಲ್ಲಿದ್ದಾರೆ. ಸಿದ್ದರಾಮಯ್ಯ ಇವತ್ತು ವಿಧಾನಸಭೆ ಮೆಟ್ಟಿಲು ಏರಲು ಕಾರಣ ಯಾರು..? ವಿರೋಧ ಪಕ್ಷದ ನಾಯಕನಾಗಲು ಕಾರಣ ಯಾರು..? ಅದಕ್ಕೆಲ್ಲ ಬದಾಮಿ ಕ್ಷೇತ್ರದ ಜನರು ಕಾರಣ ಅನ್ನೋದನ್ನ ಸಿದ್ದರಾಮಯ್ಯ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಶ್ರೀರಾಮುಲು ಆಕ್ರೋಶ ಹೊರಹಾಕಿದ್ದಾರೆ.

ಇವತ್ತು ಇದನ್ನೆಲ್ಲ ಮರೆತಿರುವ ಸಿದ್ದರಾಮಯ್ಯನವರು, ಬದಾಮಿ ಕ್ಷೇತ್ರಕ್ಕೆ ಬರಲು ಧೂಳು ಜಾಸ್ತಿ ಆಗುತ್ತೆ, ಕಣ್ಣಿನ ನೋವಾಗುತ್ತೆ ಅಂತಾರೆ. ಇವತ್ತು ಬದಾಮಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂತಹ ಜನರಿಗೆ ಸಹಾಯ ಮಾಡಿದ್ರೆ ತಾಯಿ ಬನಶಂಕರಿ ಕೈ ಹಿಡಿದುಕೊಳ್ಳುತ್ತಾಳೆ. ಆ ತಾಯಿಗೂ ಕೋಪ ಬರೋ ಹಾಗೆ ಮಾಡಿದ್ರೆ ತಾಯಿ ಏನ್ ಮಾಡ್ತಾಳೆ ಅನ್ನೋದು ವಿಚಾರ ಮಾಡಬೇಕು ಎಂದು ಹೇಳಿದ್ದಾರೆ.

ಇನ್ನು ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶ್ರೀರಾಮುಲು, ಸಂಪುಟ ವಿಸ್ತರಣೆ ತಡವಾದ್ರೂ ಪರವಾಗಿಲ್ಲ. ಜನರೇ ಕಷ್ಟದಲ್ಲಿ ಇರುವ ಟೈಮ್‌ನಲ್ಲಿ, ಈಗಿನ ಪರಿಸ್ಥಿತಿಯಲ್ಲಿ ನಾವು ಯಾರೂ ಮಂತ್ರಿ ಆಗಬೇಕು ಅಂತ ನಿರೀಕ್ಷೆ ಮಾಡಲ್ಲ. ನಮ್ಮ ಕೈಯಲ್ಲಿ ಅಧಿಕಾರ ಇಲ್ಲ.

ಮುಖ್ಯಮಂತ್ರಿಗಳು ಒಬ್ಬರೇ ಇದ್ದಾರೆ. ಅವರ ಸೂಚನೆಯಂತೆ ನಾವು ಓಡಾಡುತ್ತಿದ್ದೇವೆ. ಅಧಿಕಾರಿಗಳು ಜನಪ್ರತಿನಿಧಿಗಳ ಸಹಕಾರದಿಂದ ಸಹಾಯ ಮಾಡುತ್ತಿದ್ದಾರೆ. ಮೊದಲ ಆದ್ಯತೆ ಜನರಿಗೆ ಕೊಡೋಣ. ಸಂಕಷ್ಟದಲ್ಲಿರುವ ಜನರಿಗೆ ಪರಿಹಾರ ಒದಗಿಸೋಣ. ಆಮೇಲೆ ಮಂತ್ರಿ ಮಂಡಲ ವಿಸ್ತರಣೆ ಆಗಲಿ ಎಂದಿದ್ದಾರೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.