‘ನನಗೆ ಎಲ್ಲಾ ಥರ ಮಾತಾಡಕ್ಕೆ ಬರತ್ತೆ, ಇಂಡಸ್ಟ್ರಿಯವರಾದ್ರೆ ಯಾರನ್ನೂ ಸುಮ್ಮನೆ ಬಿಡಲ್ಲ’

ಬೆಂಗಳೂರು: ನಟ ಕೋಮಲ್ ಥಳಿತಕ್ಕೊಳಗಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ನಟ ಜಗ್ಗೇಶ್, ಸಿನಿಮಾ ಇಂಡಸ್ಟ್ರಿಯವರು ಈ ಕೆಲಸ ಮಾಡಿದ್ದೇ ಆದಲ್ಲಿ, ಯಾರನ್ನೂ ಸುಮ್ಮನೆ ಬಿಡುವುದಿಲ್ಲ ಎಂದಿದ್ದಾರೆ.

ನನ್ನ ತಮ್ಮ ಮಗುನಾ ಟ್ಯೂಶನ್ ಗೆ ಬಿಡಲಿಕ್ಕೆ ಹೋಗ್ತಾ ಇದ್ದ. ಶ್ರೀರಾಮಪುರ ರೈಲ್ವೆ ಅಂಡರ್ ಪಾಸ್ ಬಳಿ ಘಟನೆ ನಡೆದಿದೆ. ನಾಲ್ಕು ಜನ ಬೈಕ್ ಸವಾರರು ಕ್ಷುಲ್ಲಕ ಕಾರಣಕ್ಕೆ ಸೈಡ್ ಕೊಟ್ಟಿಲ್ಲ ಅನ್ನೋ ವಿಚಾರಕ್ಕೆ ಗಲಾಟೆ ಕುಡಿದು ಗಲಾಟೆ ಮಾಡಿದ್ದಾರೆಂದು ಜಗ್ಗೇಶ್ ಘಟನೆ ಬಗ್ಗೆ ವಿವರಿಸಿದರು.

ಮೂರು ಜನ ಕೋಮಲ್‌ನನ್ನು ಹಿಡಿದುಕೊಂಡಿದ್ದಾರೆ. ಇನ್ನೊಬ್ಬ ಕೋಮಲ್ ಮೇಲೆ ಹಲ್ಲೆ ಮಾಡಿದ್ದಾನೆ. ನಾಲ್ಕು ಜನ ಕುಡಿದು ಹೊಡೆದಿದ್ದಾರೆ. ಈ ರೀತಿಯ ಘಟನೆ ಬೆಂಗಳೂರಿನಲ್ಲಿ ಆಗಬಾರದು. ನನ್ನ ತಮ್ಮ ಅಥವಾ ನಟ ಅಂತಾ ಅಲ್ಲ, ಯಾವ ಜನರಿಗೂ ಕೂಡ ಹೀಗೆ ಆಗಬಾರದು ಎಂದು ಜಗ್ಗೇಶ್ ಆಗ್ರಹಿಸಿದ್ದಾರೆ.

ನಂಗೆ ಗೊತ್ತಾಗುತ್ತೆ ಯಾರು ಏನ್ ಮಾಡಿದ್ದಾರೆ ಅಂತಾ. ಇಂಡಸ್ಟ್ರಿಯವರು ಮಾಡಿದ್ದಾರಾ, ಅಥವಾ ಬೇರೆಯವರು ಮಾಡಿದ್ದಾರ ಗೊತ್ತಿಲ್ಲ. ಇಂಡಸ್ಟ್ರಿಯವರು ಮಾಡಿದ್ರೆ ಖಂಡಿತಾ ನಾನು ಬಿಡಲ್ಲ. ನಾನು ಮೂವತ್ತು ವರ್ಷದಿಂದ ಇಂಡಸ್ಟ್ರಿಯಲ್ಲೇ ಇರೋದು. ನಾನಾದ್ರೆ ಬ್ಯಾಡ್ ವರ್ಡ್ಸ್ ನಲ್ಲಿ ಬೈಯೋದು ಗೊತ್ತು. ಕೋಮಲ್ ಪಾಪದವನು, ಅವನಿಗೆ ಇವೆಲ್ಲಾ ಗೊತ್ತಾಗಲ್ಲ ಎಂದಿದ್ದಾರೆ. ಅಲ್ಲದೇ ಆರೋಪಗಳಿಗೆ ತಕ್ಕ ಶಿಕ್ಷೆಯಾಗಬೇಕು, ಇನ್ಮೇಲೆ ಬೆಂಗಳೂರಿನಲ್ಲಿ ಇಂತಹ ಘಟನೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಗ್ಗೇಶ ಹೇಳಿಕೆ ನೀಡಿದ್ದಾರೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.