ಸಿನಿಮಾ ಜಗತ್ತಿನಲ್ಲಿ ಕನ್ನಡದ ಕೀರ್ತಿ ಪತಾಕೆ ಹಾರಿಸಿದ ಉಪ್ಪಿ..!

ಕಾಲ ಬದಲಾಗಿದೆ.. ಸಿನಿಮಾ ಮೇಕಿಂಗ್ ಪರಿಯೂ ಬದಲಾಗಿದೆ.. ಪ್ರೇಕ್ಷಕ ಪ್ರಬುದ್ಧನಾದಂತೆ ಟೆಕ್ನಾಲಜಿ ಕೂಡ ಬದಲಾಗ್ತಿದೆ.. ಕೆಜಿಎಫ್​ನ ನಂತ್ರ ವಿಶ್ವ ಸಿನಿದುನಿಯಾದಲ್ಲಿ ನಮ್ಮ ಕನ್ನಡಕ್ಕೆ ಮತ್ತೊಂದು ಗರಿ ಸಿಕ್ಕಿದೆ. ಇದು ಪ್ರತಿಯೊಬ್ಬ ಕಲಾಭಿಮಾನಿ ಓದಲೇಬೇಕಾದ ಸ್ಟೋರಿ.

ಕೆಜಿಎಫ್ ಸಿನಿಮಾ ಇಡೀ ವಿಶ್ವ ಸಿನಿದುನಿಯಾವನ್ನ ನಮ್ಮ ಸ್ಯಾಂಡಲ್​ವುಡ್​ನತ್ತ ತಿರುಗಿ ನೋಡುವಂತೆ ಮಾಡಿದ್ದೇನೋ ನಿಜ. ಆದ್ರೆ ನಮ್ಮ ಕನ್ನಡ ಡೈರೆಕ್ಟರ್ ಒಬ್ಬರು ವರ್ಲ್ಡ್​ ಟಾಪ್ 50 ಡೈರೆಕ್ಟರ್ಸ್​ ಲಿಸ್ಟ್​ನಲ್ಲಿ ಮಿಂಚ್ತಾ ಇದ್ದಾರೆ. ಇದು ಬರೀ ಕನ್ನಡ ಚಿತ್ರರಂಗದ ಹಾಗೂ ಕನ್ನಡಿಗರ ಹೆಮ್ಮೆ ಮಾತ್ರವಲ್ಲ, ಭಾರತೀಯ ಚಿತ್ರರಂಗದ ಗರಿಮೆಯೂ ಹೌದು.

ಇತ್ತೀಚೆಗೆ ಕೆಜಿಎಫ್ ಹಾಗೂ ನಾತಿಚರಾಮಿ ಸೇರಿದಂತೆ ನಾಲ್ಕೈದು ಸಿನಿಮಾಗಳು ಬರೋಬ್ಬರಿ 13 ನ್ಯಾಷನಲ್ ಅವಾರ್ಡ್ಸ್​ನ ಮುಡಿಗೇರಿಸಿಕೊಂಡಿದ್ದು ಗೊತ್ತೇಯಿದೆ. ಅದ್ರ ಬೆನ್ನಲ್ಲೀಗ ಪ್ರತಿಯೊಬ್ಬ ಕನ್ನಡಿಗ ಹೆಮ್ಮೆ ಪಡೋ ಅಂತಹ ಸ್ವೀಟ್ ನ್ಯೂಸ್ ಹೊರಬಿದ್ದಿದೆ. ಅದು ರಿಯಲ್ ಸ್ಟಾರ್ ಉಪ್ಪಿಯಿಂದ ಅನ್ನೋದು ಖುಷಿಯ ವಿಚಾರ.

ಸಿನಿಮಾ ಜಗತ್ತಿನಲ್ಲಿ ಕನ್ನಡದ ಕೀರ್ತಿ ಪತಾಕೆ ಹಾರಿಸಿದ ಉಪ್ಪಿ..!
ವರ್ಲ್ಡ್​ ಟಾಪ್ 50 ಡೈರೆಕ್ಟರ್ಸ್​ನಲ್ಲಿ ಉಪೇಂದ್ರ ಮಿಂಚಿಂಗ್..!
ರಿಯಲ್ ಸ್ಟಾರ್ 90ರ ದಶಕದ ಟ್ರೆಂಡ್ ಸೆಟ್ ಫಿಲ್ಮ್ ಮೇಕರ್
ಸೂಪರ್- ಉಪ್ಪಿ 2 ನಂತ್ರ ಆ್ಯಕ್ಷನ್ ಕಟ್ ಹೇಳಿಲ್ಲ ಬುದ್ದಿವಂತ
ಉಪ್ಪಿ 2.. ಸೂಪರ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸಿ, ನಿರ್ಮಿಸಿದಂತಹ ಪಕ್ಕಾ ಉಪ್ಪಿ ಫ್ಲೇವರ್​ ಸಿನಿಮಾ. 2015ರಲ್ಲಿ ತೆರೆಕಂಡ ಈ ಸಿನಿಮಾದ ಬಳಿಕ ಉಪ್ಪಿ ಅದ್ಯಾಕೋ ನಿರ್ದೇಶನದ ಕಡೆ ಗಮನವೇ ಹರಿಸಿಲ್ಲ. ಪ್ರಜಾಕೀಯ ಅಂತ ಹೊಸ ಪಕ್ಷ ಕಟ್ಟಿ, ಸಿನಿಮಾ ಡೈರೆಕ್ಷನ್ ಮೇಲಿನ ಇಂಟರೆಸ್ಟ್ ಕಳೆದುಕೊಂಡ್ರು.

ಆದ್ರೆ, ಉಪ್ಪಿ ಎಂತಹ ಡೈರೆಕ್ಟರ್ ಅನ್ನೋದನ್ನ ಹೇಳೋಕ್ಕೆ ಇಲ್ಲಿರೋ ಒಂದು ನಿದರ್ಶನವೇ ಸಾಕು. ಹೌದು.. ಉಪ್ಪಿ 90ರ ದಶಕದಲ್ಲಿ ಟ್ರೆಂಡ್ ಸೆಟ್ ಸ್ಟಾರ್ ಡೈರೆಕ್ಟರ್. ಇವ್ರು ಮಾಡಿದ ಸಿನಿಮಾಗಳೆಲ್ಲಾ ಬ್ಲಾಕ್ ಬಸ್ಟರ್. ಇವ್ರ ಫಿಲ್ಮ್ ಮೇಕಿಂಗ್ ಸ್ಟೈಲ್ ಹಾಗೂ ಡೈಲಾಗ್ಸ್​ಗೆ ಇಡೀ ವರ್ಲ್ಡ್​ ಕ್ಲೀನ್ ಬೋಲ್ಡ್ ಆಗಿಬಿಟ್ಟಿತ್ತು.

ಇದನ್ನ ನೋಡಿಯೇ ಸಿನಿಮಾ ವರದಿಗಳ ಅಥೆಂಟಿಕ್ ವೆಬ್​ಸೈಟ್ ಐಎಮ್​ಡಿಬಿ ವರ್ಲ್ಡ್​ ಟಾಪ್ 50 ಸ್ಟಾರ್ ಡೈರೆಕ್ಟರ್ಸ್​ ಲಿಸ್ಟ್​ನಲ್ಲಿ ಉಪೇಂದ್ರ ಹೆಸರನ್ನ ಪ್ರಸ್ತಾಪಿಸಿದೆ. ಕ್ರಿಸ್ಟೋಫರ್ ನೋಲಾನ್, ರಾಜ್​ಕುಮಾರ್ ಹಿರಾನಿ, ಸೆರ್ಗಿಯೋ, ಡೀವಿಡ್ ಫಿಂಚರ್, ಸ್ಟೀವ್, ಚಾರ್ಲ್ಸ್ ಚಾಪ್ಲಿನ್ ಸೇರಿದಂತೆ ವಿಶ್ವದ ದಿಗ್ಗಜ ನಿರ್ದೇಶಕ ಮಹಾಶಯರ ಜೊತೆ ಉಪ್ಪಿ 17ನೇ ಸ್ಥಾನ ಅಲಂಕರಿಸಿದ್ದಾರೆ.

ಅಂದಹಾಗೆ ಇದು ಇತ್ತೀಚೆಗೆ ಅಪ್ಡೇಟ್​ ಆಗಿರೋ ವಿಷಯವೇನಲ್ಲ. IMDB ಈ ರೇಟಿಂಗ್ ಕೊಟ್ಟು ವರ್ಷಗಳೇ ಕಳೆದಿದೆ. ಆದ್ರೀಗ ಸಾಮಾಜಿಕ ಜಾಲತಾಣದಲ್ಲಿ ಉಪ್ಪಿಯ ಈ ಸಾಧನೆ ಸಖತ್ ವೈರಲ್ ಆಗ್ತಿದೆ. ಅದಕ್ಕೆ ಉಪೇಂದ್ರ ಕೂಡ ಧನ್ಯವಾದ ತಿಳಿಸಿದ್ದಾರೆ. ಹಾಗಾಗಿ, ಎಲ್ಲರ ನೋಟ ಬುದ್ದಿವಂತನ ಡೈರೆಕ್ಷನ್ ಮೇಲೆ ಬಿದ್ದಿದೆ. ಇತ್ತೀಚೆಗೆ ಸುದೀಪ್ ಕೂಡ ಉಪ್ಪಿಗೆ ಆ್ಯಕ್ಷನ್ ಕಟ್ ಹೇಳಲು ಮನವಿ ಇಟ್ಟಿದ್ರು. ಅದು ಯಾವಾಗ ಫಲಿಸುತ್ತೆ ಅನ್ನೋದು ಕಾದುನೋಡಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಹೆಡ್, ಟಿವಿ5

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.