‘ಚುನಾಯಿತ ಪ್ರತಿನಿಧಿಗಳಿಗೆ ಸಾಮಾನ್ಯ ಜ್ಞಾನ ಇರಬೇಕು ಅದಕ್ಕೆ ಕಾಮನ್ ಸೆನ್ಸ್ ಅಂತಾರೆ’

ಬಾಗಲಕೋಟೆ: ಚುನಾಯಿತ ಪ್ರತಿನಿಧಿಗಳಿಗೆ ಸಾಮಾನ್ಯಜ್ಞಾನ ಇರಬೇಕು ಅದಕ್ಕೆ ಕಾಮನ್ ಸೆನ್ಸ್ ಅಂತಾರೆ ಎಂದು ಚಿಕ್ಕಮಗಳೂರು-ಉಡುಪಿ ಕ್ಷೇತ್ರದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಮಂಗಳವಾರ ಹೇಳಿದರು.

ಕಾಂಗ್ರೆಸ್ ನಾಯಕರು ಬಕ್ರೀದ್ ಇಫ್ತಿಯಾರ್ ಕೂಟದಲ್ಲಿ ಭಾಗಿಯಾದ ವಿಚಾರ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಅವರು, ಭಾರೀ ಭೋಜನ ಮಾಡಿದವರ ಮಾನಸಿಕ ಸ್ಥಿತಿ ಏನು(?) ಅನ್ನೋದು ಗೊತ್ತಾಗುತ್ತೆ! ಎಂದು ಅವರು ತಿಳಿಸಿದರು.

ಫೋಟೊದಲ್ಲಿ ಹಿರಿಯ ರಾಜಕಾರಣಿಗಳಿದ್ದು ಅವರು ಸಂತ್ರಸ್ತರ ಕಷ್ಟ ಆಲಿಸುವ ಕೆಲಸ ಮಾಡಬೇಕಿದೆ, ಹಿರಿಯ ಕಾಂಗ್ರೆಸ್ ನಾಯಕರು ನಮ್ಮ ಸರ್ಕಾರಕ್ಕೆ ನೆರೆ ಕುರಿತು ತಮ್ಮ ಸಲಹೆಗಳನ್ನು ನೀಡಬೇಕು, ಅದನ್ನು ನಾವು ಆಲಿಸುತ್ತೇವೆ ಎಂದರು.

ಇನ್ನು ನೆರೆ ಹಾವಳಿ ವೇಳೆ ಯಾರೂ ರಾಜಕೀಯ ಮಾಡುವುದು ಬೇಡ, ಎಲ್ಲರೂ ಸೇರಿ ನೆರೆ ಸಂತ್ರಸ್ತರಿಗೆ ಸಹಾಯ ಮಾಡೋಣ, ನಮ್ಮ ಸರ್ಕಾರಕ್ಕೆ ನಿಮ್ಮ ಸಲಹೆ-ಸೂಚನೆ ಅಗತ್ಯವಿದೆ, ನಾವು ಅದನ್ನು ಸ್ವೀಕರಿಸುತ್ತೇವೆ ಪ್ರವಾಹ ಬಂದ ಸಂದರ್ಭದಲ್ಲಿ ನಾವೆಲ್ಲ ಪಕ್ಷ ಬೇಧ ಮರೆತು ಕೆಲಸ ಮಾಡಬೇಕಿದೆ ಎಂದು ಅವರು ನುಡಿದರು.

ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಇಫ್ತಿಯಾರ್ ಕೂಟದಲ್ಲಿ ಭಾಗಿಯಾದ ಕಾಂಗ್ರೆಸ್ ನಾಯಕರ ಫೋಟೊ ವೈರಲ್ ಆಗಿದ್ದು ಪೋಟೋದಲ್ಲಿ ಕಾಂಗ್ರೆಸ್​ ಮುಖಂಡರಾದ ಮಾಜಿ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಇತರ ಹಿರಿಯ ರಾಜಕಾರಣಿಗಳಿದ್ದರು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.