ಉತ್ತರ ಕರ್ನಾಟಕ ಪ್ರವಾಹ ಪೀಡಿತ ಪ್ರದೇಶಕ್ಕೆ ಕಾಮಿಡಿ ಕಿಲಾಡಿಗಳು ತಂಡ ಲಗ್ಗೆ

ಕಾಮಿಡಿ ಕಿಲಾಡಿಗಳು ತಂಡದವರು ಉತ್ತರ ಕರ್ನಾಟಕ ಪ್ರವಾಹ ಪೀಡಿತ ಪ್ರದೇಶವಾದ ರಾಯಚೂರಿನ ಹಳ್ಳಿಯೊಂದಕ್ಕೆ ಭೇಟಿ ಕೊಟ್ಟು ಬಂದಿದ್ದು ಜೊತೆಗೆ ಅಲ್ಲಿನ ಪರಿಸ್ಥಿತಿಯನ್ನು ಕಂಡು ತಂಡವು ನೊಂದುಕೊಂಡಿದಲ್ಲದೇ ತಮ್ಮಗಾದ ಅನುಭವನ್ನು ಹಂಚಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಟೋಗಳನ್ನು ಹರಿಬಿಟ್ಟದ್ದಾರೆ.

ಅಲ್ಲಿ ಓಡಾಡೋವಾಗ ಆಗಾಗ ಕಣ್ಣು ಒದ್ದೆ ಆಗ್ತಿದ್ರೂ ಎದೆ ಕಲ್ಲಾಗೆಯಿತ್ತು. ಪ್ರಳಯಗಳು ಎಲ್ಲೆಲ್ಲೋ ಆಗಿದ್ದ ಸುದ್ದಿಗಳ್ನ ನೋಡಿದಾಗೆಲ್ಲಾ ಮನಸ್ಸು ಕರಗ್ತಿತ್ತು. ಆದ್ರೆ ಈಗ ಅದು ಮನೆ ಬಾಗಿಲಲ್ಲೇ ಆಗಿದೆ ಅಂದ್ರೆ ನಂಬೋಕೆ ಕಷ್ಟ ಆಗ್ತಿತ್ತು. ಆದ್ರು ಎಲ್ಲಾ ನಡೆದೋಗಿದೆ. ಸಹಾಯ ಸಹಕಾರಗಳು ಬೆಟ್ಟದಷ್ಟೇ ಬಂದಿವೆ.

ಇನ್ನೊಂದೆರಡು ದಿನದಲ್ಲಿ ನೆರೆ ಪೂರ ಇಳಿದೋಗಬಹುದು. ಆನಂತರದ್ದು ನಿಜವಾದ ಸವಾಲು. ಊರಿಗೂರೆ ಸ್ವಚ್ಛ ಮಾಡಿ, ಪುನರ್ವಸತಿ ಕೆಲ್ಸ ಅಚ್ಚಕಟ್ಟಾಕಿ ಆಗ್ಬೇಕಿದೆ. ಇಲ್ದಿದ್ರೆ ಯಾವ್ ಯಾವ ಕಾಯಿಲೆಗಳು ಹರಡ್ತಾವೋ ಗೊತ್ತಿಲ್ಲ. ಇವುಗಳನ್ನೆಲ್ಲಾ ಸರ್ಕಾರ ಸರಿಯಾಗಿ ನಿರ್ವಹಿಸೋ ಥರ ಆಗ್ಲಿ.

ಕಾಮಿಡಿ ಕಿಲಾಡಿಗಳು ಬಳಗದ ಕ್ಯಾಪ್ಟನ್ ಶರಣಯ್ಯ, ಸ್ನೇಹಿತರಾದ ಅಪ್ಪಣ್ಣ, ಸದಾನಂದ, ಮುತ್ತುರಾಜ್ ಜೊತೆ ರಾಯಚೂರಿನ ಹಳ್ಳಿಯೊಂದಕ್ಕೆ ಹೋಗಿ ಬಂದೆವು. ನಮ್ಮ ಜೊತೆ ಕೈ ಜೋಡಿಸಿದ ಸ್ಥಳೀಯ ಸ್ನೇಹಿತರಿಗೆ ಅನಂತ ಧನ್ಯವಾದಗಳು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.