ಫೇಸ್​ಬುಕ್​​ ಮೂಲಕ ಸಂತ್ರಸ್ತರ ವಿಷಯದಲ್ಲಿ ರಾಹುಲ್ ಗಾಂಧಿ ಮಾಡಿದ್ರು ಈ ಕೆಲಸ!

ನವದೆಹಲಿ: ಕೇರಳದ ತನ್ನ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಕ್ಯಾಂಪಿಂಗ್ ಮಾಡುತ್ತಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇಂದು ವಿನಾಶಕಾರಿ ಪ್ರವಾಹದಿಂದ ಹಾನಿಗೊಳಗಾದವರಿಗೆ ಪರಿಹಾರ ಸಾಮಗ್ರಿಗಳನ್ನು ಒದಗಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ.

ತಮ್ಮ ಕ್ಷೇತ್ರದಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡುತ್ತಿರುವ ರಾಹುಲ್​ ಗಾಂಧಿ ಅವರು ತಮ್ಮ ಫೇಸ್​ ಬುಕ್​ ಪುಟದಲ್ಲಿ ಪೋಸ್ಟ್ ಮಾಡುವ ಮೂಲಕ ಮನವಿ ಮಾಡಿದ್ದಾರೆ.

ನನ್ನ ಸಂಸದೀಯ ಕ್ಷೇತ್ರ ವಯನಾಡವು ಪ್ರವಾಹದಿಂದ ಧ್ವಂಸಗೊಂಡಿದೆ, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ ಮತ್ತು ಪರಿಹಾರ ಶಿಬಿರಗಳಿಗೆ ಸ್ಥಳಾಂತರಗೊಂಡಿದ್ದಾರೆ ಎಂದು ರಾಹುಲ್​ ಗಾಂಧಿ ಅವರು ಪೋಸ್ಟ್ ಮಾಡಿಕೊಂಡಿದ್ದಾರೆ.

ಕಾಂಗ್ರೆಸ್ ಮುಖಂಡರು ತಮ್ಮ ಕ್ಷೇತ್ರದಲ್ಲಿ ಕೊರತೆಯಿರುವ ಅಗತ್ಯ ವಸ್ತುಗಳನ್ನು ಪಟ್ಟಿ ಮಾಡಿದ್ದಾರೆ.

ನೀರಿನ ಬಾಟಲಿಗಳು, ಸ್ಲೀಪಿಂಗ್ ಮ್ಯಾಟ್ಸ್, ಕಂಬಳಿ, ಒಳ ಉಡುಪುಗಳು, ಧೋತಿಗಳು, ನೈಟ್‌ಗೌನ್‌ಗಳು, ಮಕ್ಕಳ ಉಡುಪು, ಚಪ್ಪಲಿಗಳು, ನೈರ್ಮಲ್ಯ ಕರವಸ್ತ್ರಗಳು, ಸಾಬೂನುಗಳು, ಹಲ್ಲುಜ್ಜುವ ಬ್ರಷ್‌ಗಳು, ಟೂತ್‌ಪೇಸ್ಟ್, ಡೆಟಾಲ್, ಸೋಪ್ ಪೌಡರ್, ಬ್ಲೀಚಿಂಗ್ ಪೌಡರ್ ಮತ್ತು ಕ್ಲೋರೈನ್ ಸೇರಿದಂತೆ ಸಾಮಗ್ರಿಗಳ ತುರ್ತು ಅಗತ್ಯ ನಮಗೆ ಇದೆ ಎಂದು ಮನವಿ ಮಾಡಿದ್ದಾರೆ.

ಅವರು ಪಟ್ಟಿ ಮಾಡಿದ ಮಲಪ್ಪುರಂ ಜಿಲ್ಲೆಯ ಸಂಗ್ರಹ ಕೇಂದ್ರಗಳಿಗೆ ವಸ್ತುಗಳನ್ನು ಕಳುಹಿಸುವಂತೆ ದಾನಿಗಳಿಗೆ ಮನವಿ ಮಾಡಿದರು.

ಭಾನುವಾರ ಅವರು ತಮ್ಮ ಕ್ಷೇತ್ರದಲ್ಲಿ ಪ್ರವಾಹ ಮತ್ತು ಭೂಕುಸಿತದಿಂದಾಗಿ ಜನರು ಅನುಭವಿಸುತ್ತಿರುವುದು ಹಾರ್ಟ್​ ಬ್ರೇಕಿಂಗ್​ ಎಂದೇ ಕರೆದಿದ್ದಾರೆ. ಕೇರಳದಲ್ಲಿ ನೈಸರ್ಗಿಕ ವಿಕೋಪದಿಂದ ಹಾನಿಗೊಳಗಾದವರಿಗೆ ತಕ್ಷಣದ ನೆರವು ನೀಡುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸಿದರು.

ಮಲಪ್ಪುರಂ ಜಿಲ್ಲೆಯ ಮೂರು ವಿಧಾನಸಭಾ ವಿಭಾಗಗಳು ರಾಹುಲ್​ ಗಾಂಧಿ ಅವರ ವಯನಾಡ್ ಕ್ಷೇತ್ರದ ಭಾಗವಾಗಿದೆ.

ಕಾಂಗ್ರೆಸ್ ಮುಖಂಡರು ತಮ್ಮ ಕ್ಷೇತ್ರದ ಪ್ರವಾಹ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವಯನಾಡ್ ಜಿಲ್ಲಾಧಿಕಾರಿ ಮತ್ತು ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮಾತನಾಡಿದ್ದಾರೆ.
ಇದು ಚುನಾವಣೆಯ ನಂತರ ವಯನಾಡಿಗೆ ಅವರ ಎರಡನೇ ಭೇಟಿಯಾಗಿದೆ.

ಏಪ್ರಿಲ್ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಬೆಟ್ಟ(ವಯನಾಡ್) ಕ್ಷೇತ್ರದಿಂದ ದಾಖಲೆಯ ಅಂತರದಿಂದ ಜಯಗಳಿಸಿದರು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.