ವಿಂಡೀಸ್ ವಿರುದ್ಧ ಟೀಮ್ ಇಂಡಿಯಾಗೆ ಭರ್ಜರಿ ಜಯ: ವಿರಾಟ್ ಅಮೋಘ ಶತಕ

ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಆತಿಥೇಯ ವಿಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಪೋರ್ಟ್​ ಆಫ್ ಸ್ಪೆನ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಪಡೆ ಆತಿಥೇಯರ ವಿರುದ್ಧ ಹೇಗೆ ಸವಾರಿ ಮಾಡಿತು ಎನ್ನುವ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ಓದಿ.

ಟಾಸ್​ ಗೆದ್ದ ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿತು. ಓಪನರ್ಸ್​ಗಳಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ Decent ಓಪನಿಂಗ್ ಕೊಡುವಲ್ಲಿ ಎಡವಿದರು. 2 ರನ್​ ಗಳಿಸಿದ್ದ ಧವನ್ ವೇಗಿ ಕಾಟ್ರೆಲ್​ ಅವರ ಮೊದಲ ಓವರ್​ನ ಮೂರನೇ ಎಸೆತದಲ್ಲಿ ಎಲ್​ ಬಿ ಬಲೆಗೆ ಬಿದ್ದರು.

ಕೇವಲ 2 ರನ್​ಗೆ ಆರಂಭಿಕ ಆಘಾತ ಅನುಭವಿಸಿ ಸಂಕಷ್ಟದಲ್ಲಿದ್ದ ತಂಡಕ್ಕೆ ಕ್ಯಾಪ್ಟನ್ ಕೊಹ್ಲಿ ಆಪತ್ಬಾಂಧವ ರಾದರು. ಮೂರನೇ ಕ್ರಮಾಂಕದಲ್ಲಿ ಬಂದ ಕೊಹ್ಲಿ ಓಪನರ್ ರೋಹಿತ್ ಜೊತೆಗೂಡಿ 74ರನ್​ಗಳ ಜೊತೆಯಾಟ ನೀಡಿದರು. ಆದರೆ, 18 ರನ್​ ಗಳಿಸಿ ಸ್ಲೋ ಅಂಡ್​ ಸ್ಟಡಿ ಇನ್ನಿಂಗ್ಸ್ ಕಟ್ಟುತ್ತಿದ್ದ ರೋಹಿತ್ ವೇಗಿ ಚೇಸ್ ಎಸೆತದಲ್ಲಿ ಪೂರಾನ್​ಗೆ ಕ್ಯಾಚ್ ನೀಡಿ ಹೊರ ನಡೆದರು.

ನಾಲ್ಕನೆ ಕ್ರಮಾಂಕದಲ್ಲಿ ಬಂದ ರಿಷಭ್​ ಪಂತ್ ಮತ್ತೆ ಫ್ಲಾಪ್ ಆದರು. ನಿಧಾನಗತಿಯಲ್ಲಿ ಆಡುತ್ತಿದ್ದ ಪಂತ್ ಆಲ್​ರೌಂಡರ್ ಬ್ರಾಥ್​ ವೈಟ್ ಎಸೆತದಲ್ಲಿ ಬೌಲ್ಡ್​ ಆದರು. ಇದರೊಂದಿಗೆ ಟೀಮ್ ಇಡಿಯಾ ಮತ್ತೆ ಸಂಕಷ್ಟದಲ್ಲಿ ಸಿಲುಕಿತು. ಆದರೆ, ಮಿಡ್ಲ್​ ಆರ್ಡರ್​ನಲ್ಲಿ ಬಂದ ಯಂಗ್​ ಡೈನಾಮಿಕ್​​ ಬ್ಯಾಟ್ಸ್​ಮನ್ ಶ್ರೇಯಸ್ ಅಯ್ಯರ್ ನಾಯಕನಿಗೆ ಒಳ್ಳೆಯ ಸಾಥ್ ಕೊಟ್ಟು ವಿಂಡೀಸ್ ಲೆಕ್ಕಾಚಾರಗಳನ್ನ ತಲೆ ಕೆಳಗೆ ಮಾಡಿದರು. ಕ್ಯಾಪ್ಟನ್ ಕೊಹ್ಲಿ 57 ಎಸೆತದಲ್ಲಿ ಅರ್ಧ ಶತಕ ಬಾರಿಸಿದರು. ಈ ಜೋಡಿ ನಾಲ್ಕನೇ ವಿಕೆಟ್​ಗೆ 125 ರನ್​ಗಳ ಜೊತೆಯಾಟ ಕೊಟ್ಟರು.

ಜವಾಬ್ದಾರಿಯುತ ಬ್ಯಾಟಿಂಗ್ ಮುಂದುವರೆಸಿದ ಕ್ಯಾಪ್ಟನ್ ವಿರಾಟ್ ಕೊಹ್ಲಿ 112 ಎಸೆತದಲ್ಲಿ ಶತಕ ಬಾರಿಸಿ ಸಂಭ್ರಮಿಸಿದರು. ಇನ್ನು ಶ್ರೇಯಸ್​ ಅಯ್ಯರ್​ ಅರ್ಧ ಶತಕಬಾರಿಸಿ ಸಂಭ್ರಮಿಸಿದರು. ಆದರೆ, ಈ ಸಂಭ್ರಮ ಹೆಚ್ಚು ಹೊತ್ತು ಇರಲಿಲ್ಲ, 120 ರನ್ ಗಳಿಸಿದ್ದ ಕೊಹ್ಲಿ ಬ್ರಾಥ್​ವೈಟ್​ಗೆ ವಿಕೆಟ್ ಒಪ್ಪಿಸಿ ಹೊರ ನಡೆಯುತ್ತಾರೆ.

ಪಂದ್ಯಕ್ಕೆ ಅಡ್ಡಿ ಮಾಡಿದ ವರುಣರಾಯ

ಕೊಹ್ಲಿ ಔಟಾದ ಕಲವೇ ನಿಮಿಗಳಲ್ಲಿ ಧಾರಕಾರವಾಗಿ ಮಳೆ ಸುರಿಯಿತು ಇದರ ಪರಿಣಾಮ ಪಂದ್ಯ ಕೆಲವೊತ್ತು ಸ್ಥಗಿತಗೊಳಿಸಲಾಗುತ್ತೆ. ನಂತರ ಆರಂಭವಾದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್​ 71, ಕೇದಾರ್ ಜಾಧವ್​ 16, ರವೀಂದ್ ರಜಡೇಜಾ 16 ರನ್​ಗಳ ನೆರವಿನಿಂದ ಟೀಂ ಇಂಡಿಯಾ ನಿಗದಿತ ಓವರ್​ನಲ್ಲಿ 7 ವಿಕೆಟ್​ ನಷ್ಟಕ್ಕೆ 279 ರನ್ ಕಲೆ ಹಾಕಿತು. ವಿಂಡೀಸ್ ಪರ ಬ್ರಾಥ್ ವೇಟ್ 3 ವಿಕೆಟ್ ಪಡೆದರು.

ಡಕ್​ವರ್ಥ್ ಲೂಯಿಸ್ ನಿಯಮದಡಿಯಲ್ಲಿ 46 ಓವರ್​ಗೆ 270 ರನ್​ ಗುರಿ ಪಡೆದ ವೆಸ್ಟ್​ ಇಂಡೀಸ್ ತಂಡಕ್ಕೆ ಒಳ್ಳೆಯ ಆರಂಭ ಸಿಗಲಿಲ್ಲ, ಓಪನರ್ ಕ್ರಿಸ್​ ಗೇಲ್ 11 ರನ್​ ಗಳಿಸಿ ಪೆವಿಲಿಯನ್ ಸೇರಿದರು. ವಿಂಡೀಸ್ 55 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಮತ್ತೆ ಮಳೆ ಸುರಿದು ಪಂದ್ಯ ಮತ್ತೊಮ್ಮೆ ಸ್ಥಗಿತ ಗೊಂಡಿತು. ನಂತರ ಬಂದ ಶಾಯಿ ಹೋಪ್ 5, ಶಿಮ್ರಾನ್ ಹೇಟ್ಮರ್​ 18, ನಿಕೊಲೊಸ್ ಪೂರಾನ್ 42, ಎವಿನ್​ ಲಿವೀಸ್ 65, ರನ್ ಕಲೆ ಹಾಕಿದರು.

ರೊಸ್ಟನ್ ಚೇಸ್ 18, ಜಾಸನ್ ಹೋಲ್ಡರ್ 13, ಶೆಲ್ಡನ್ ಕಾಟ್ರೆಲ್ 17 ರನ ಗಳಿಸಿದರು. ವಿಂಡೀಸ್ 42 ರನ್​ಗಳಿಗೆ 210 ರನ್ ಗಳಿಸಿ ಆಲೌಟ್ ಆಯಿತು. ಟೀಮ್ ಇಂಡಿಯಾ 59ರನ್​ಗಳ ಗೆಲುವು ಪಡೆದು ಸರಣಿಯಲ್ಲಿ 1-0 ಅಂಕದೊಂದಿಗೆ ಮುನ್ನಡೆ ಪಡೆಯಿತು. ತಂಡದ ಪರ ಭುವನೇಶ್ವರ್ ಕುಮಾರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.