‘ಅವರ ಅಪ್ಪನಿಗೆ, ಕುಮಾರಸ್ವಾಮಿಯವರಿಗೆ ವಯಸ್ಸು ಆಗಿಲ್ವಾ’ – ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ: ಸಿದ್ದರಾಮಯ್ಯ ಮೊದಲು ವಿರೋಧ ಪಕ್ಷದ ನಾಯಕರಾಗಲಿ, ಬಾದಾಮಿ ಕ್ಷೇತ್ರದ ಶಾಸಕರು ಮೊದಲು ಅವರ ಕ್ಷೇತ್ರಕ್ಕೆ ಹೋಗಲಿ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಅವರು ಸರ್ವಪಕ್ಷಗಳ ಸಭೆ ಕರೆಯಬೇಕೆಂಬ ಸಿದ್ಧರಾಮಯ್ಯ ಹೇಳಿಕೆಗೆ ಮಾಜಿ ಸಿಎಂ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿದರು.

ಶಿವಮೊಗ್ಗದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಅಗಿದ್ದಾಗ ಬರಗಾಲ ಪೀಡಿತಕ್ಕೆ ಪ್ರದೇಶಕ್ಕೆ ಹೋಗಿದ್ರಾ(?) ಎಐಸಿಸಿ ಸಭೆಗೆ ಹೋಗ್ತಾರೆ ಆದರೆ ಅವರ ಕ್ಷೇತ್ರಕ್ಕೆ ಅವರು ಹೋಗಲ್ಲ,ಇದು ರಾಜಕಾರಣ ಮಾಡುವ ಸಂದರ್ಭವಲ್ಲ ಎಂದು ಅವರು ತಿಳಿಸಿದರು.

ಇನ್ನು ಸಿದ್ದರಾಮಯ್ಯನ ಮೊದ್ಲು ಬಾದಾಮಿಗೆ ಹೋಗಲಿ, ಹಾಗೇ ರಾಜ್ಯ ಪ್ರವಾಸವನ್ನು ಮಾಡಲಿ, ವಿರೋಧ ಪಕ್ಷದ ನಾಯಕರಾಗಲು ಹೊರಟ್ಟಿದ್ದೀರಿ, ನಮ್ಮದ್ದೇನು ಅಭ್ಯಂತರವಿಲ್ಲ, ನಿಮ್ಮ ಪಕ್ಷದ ಹೆಚ್​.ಕೆ ಪಾಟೀಲರು ಸ್ವಲ್ಪ ಓಡಾಡಿದ್ದಾರೆ. ಇನ್ನೂಳಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಹುಡುಕಬೇಕಿದೆ ಎಂದು ಅವರು ನುಡಿದರು.

ಇನ್ನೂ ಮಾಜಿ ಸಿಎಂ ಕುಮಾರಸ್ವಾಮಿ ಯಡಿಯೂರಪ್ಪ ನವರಿಗೆ ವಯಸ್ಸಾಗಿದೆ ಎಂದಿದ್ದಾರೆ. ಹಾಗಾದರೆ ಅವರ ಅಪ್ಪನಿಗೆ, ಕುಮಾರಸ್ವಾಮಿ ಅವರಿಗೆ ವಯಸ್ಸು ಆಗಿಲ್ವಾ(?) ಕುಮಾರಸ್ವಾಮಿ ಅವರು ನೆರೆ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ, ಅದನ್ನ ಸ್ವಾಗತಿಸುತ್ತೇನೆ. ಜೊತೆಗೆ ಸರ್ಕಾರಕ್ಕೆ ಸಲಹೆ ಕೊಟ್ಟರೇ ಅದನ್ನು ಸ್ವೀಕಾರ ಮಾಡುತ್ತೇವೆ, ಅದನ್ನ ಬಿಟ್ಟು ವಯಸ್ಸಾಗಿದೆ ಎಂಬ ಚೀಪ್ ಮಾತನಾಡುವುದು ಮಾಜಿ ಸಿಎಂ ಗೆ ಶೋಭೆ ತರಲ್ಲ ಎಂದರು.

ರಾಜಕಾರಣ ಅವರು ಮಾಡಿದ್ರೇ ನಮಗೂ ರಾಜಕಾರಣ ಮಾಡೋಕೆ ಬರುತ್ತೇ, ರಾಜಕಾರಣ ಮಾಡೋ ಸಮಯವಲ್ಲ, ರಾಜ್ಯದ ಜನ ಒದ್ದಾಡ್ತಾ ಇದ್ದಾರೆ. ಎಲ್ಲಾ ಪಕ್ಷದವರು ಒಟ್ಟಿಗೆ ಇದಕ್ಕೆಲ್ಲಾ ಪರಿಹಾರ ಹುಡುಕೋಣ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಅವರು ಮಾತನಾಡಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *