ಪ್ರವಾಹಪೀಡಿತರ ನೆರವಿಗೆ ಧಾವಿಸಿದ ಇನ್‌ಫೋಸಿಸ್

ಬೆಂಗಳೂರು: ಇನ್‌ಫೋಸಿಸ್ ಫೌಂಡೇಶನ್‌ನವರು ನೆರೆಪೀಡಿತ ಪ್ರದೇಶಗಳಿಗೆ ನೆರವಿನ ಹಸ್ತ ಚಾಚಿದ್ದಾರೆ. ತುರ್ತಾಗಿ ಒಂದು ಕುಟುಂಬಕ್ಕೆ ಜೀವನ ನಡೆಸಲು ಬೇಕಾಗುವ ಅಗತ್ಯ ವಸ್ತುಗಳನ್ನು ಫೌಂಡೇಶನ್ ವತಿಯಿಂದ ರವಾನಿಸಲಾಗಿದೆ.

ಬಾಗಲಕೋಟ, ಬೆಳಗಾವಿ, ರಾಯಚೂರು, ಉತ್ತರಕನ್ನಡ, ಧಾರವಾಡ, ಸೇರಿದಂತೆ ಪ್ರವಾಹ ಜಿಲ್ಲೆಗಳಿಗೆ ನೆರವು ನೀಡಲು ಇನ್‌ಫೋಸಿಸ್ ಮುಂದಾಗಿದೆ.

ಅಕ್ಕಿ, ಬೆಳೆ, ಮ್ಯಾಗಿ, ಸಕ್ಕರೆ, ಬ್ಲೀಚಿಂಗ್ ಪೌಡರ್, ಸಾಬೂನು, ಟೂತ್ಪೇಸ್ಟ್, ಬಕೆಟ್, ಬೆಡ್ಶೀಟ್, ಸೀರೆ, ಲುಂಗಿ, ಚಿಕ್ಕ ಮಕ್ಕಳ ಬಟ್ಟೆ, ಬೆಡ್ಶೀಟ್ಗಳನ್ನ ಸೇರಿದಂತೆ ಅವಶ್ಯಕ ಸಾಮಗ್ರಿಗಳ ರವಾನೆ ಮಾಡಲಾಗುತ್ತಿದೆ.

ಸೊಳ್ಳೆ ಬತ್ತಿ, ಮೊಂಬತ್ತಿ, ಪಾತ್ರೆಗಳು, ಒಂದು ಕುಟುಂಬಕ್ಕೆ ಬೇಕಾದ ವಸ್ತುಗಳನ್ನು ಕಳುಹಿಸಲಾಗುತ್ತಿದೆ. ಖುದ್ದಾಗಿ ಸುಧಾ ಮೂರ್ತಿ ಅವರೇ ವಸ್ತುಗಳ ಕ್ವಾಲಿಟಿ ಚೆಕ್ ಮಾಡಿ ಖರೀದಿ ಮಾಡಿ, ಸಂಸ್ತ್ರಸ್ತರಿಗೆ ಕಳುಹಿಸುತ್ತಿದ್ದಾರೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.