ಕ್ರಿಕೆಟಿಗ ಸುರೇಶ್ ರೈನಾ ಮೊಣಕಾಲು ಶಸ್ತ್ರಚಿಕಿತ್ಸೆ ಯಶಸ್ವಿ

ನವದೆಹಲಿ: ಸುರೇಶ್ ರೈನಾ ಅವರು ಶುಕ್ರವಾರ ಮೊಣಕಾಲು ನೋವಿನಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮುಂಬರುವ ದೇಶೀಯ ಕ್ರಿಕೆಟ್​ (ಐಪಿಎಲ್​) ಆವೃತ್ತಿಯಲ್ಲಿ ಆರಂಭಿಕ ಹಂತದಿಂದ ಅವರ ಅಲಭ್ಯವಾಗುವ ಸಾಧ್ಯತೆ ಇದೆ. ಏಕೆಂದರೆ ಮುಂದಿನ ನಾಲ್ಕರಿಂದ ಆರು ವಾರಗಳ ವರೆಗೆ ಅವರ ಬಗ್ಗೆ ಯಾವುದೇ ರೀತಿ ಕ್ರಮ ಕೈಗೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಅವರು ಬಿಸಿಸಿಐನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಸುದ್ದಿ ಪೋಸ್ಟ್ ಮಾಡಿದ್ದಾರೆ.

32 ವರ್ಷದ ಎಡಗೈ ಬ್ಯಾಟ್ಸ್​ಮೆನ್ ಸುರೇಶ್​ ರೈನಾ ಅವರು​​ ಕೊನೆಯ ಬಾರಿಗೆ 2018ರಲ್ಲಿ ನಡೆಸಿದ್ದ ಇಂಗ್ಲೆಂಡ್ ವಿರುದ್ಧದ ಏಕದಿನ ಅಂತರರಾಷ್ಟ್ರೀಯ ಸರಣಿಯಲ್ಲಿ ಭಾರತದ ಪರ ಆಡಿದ್ದರು.

ಸುರೇಶ್ ರೈನಾ ಅವರು ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ಅವರು ಕಳೆದ ಕೆಲವು ತಿಂಗಳುಗಳಿಂದ ಅಸ್ವಸ್ಥತೆಯನ್ನು ಎದುರಿಸುತ್ತಿದ್ದರು. ಸದ್ಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಚೇತರಿಸಿಕೊಳ್ಳಲು ಅವರಿಗೆ 4-6 ವಾರಗಳ ವಿಶ್ರಾಂತಿಯ ಅಗತ್ಯವಿದೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ “ಎಂದು ಬಿಸಿಸಿಐ ಟ್ವೀಟ್  ಮಾಡಿದೆ.

https://platform.twitter.com/widgets.js

ರೈನಾ 18 ಟೆಸ್ಟ್, 226 ಏಕದಿನ ಪಂದ್ಯಗಳನ್ನು ಕ್ರಮವಾಗಿ 768 ಮತ್ತು 5,615 ರನ್ ಗಳಿಸಿದ್ದಾರೆ. 78 ಟಿ-20 ಪಂದ್ಯಗಳಲ್ಲಿ ಅವರು 1605 ರನ್ ಗಳಿಸಿದ್ದಾರೆ.

2019ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಮಯದಲ್ಲಿ ರೈನಾ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಅಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಪರ 17 ಪಂದ್ಯಗಳಲ್ಲಿ 383 ರನ್ ಗಳಿಸಿದರು.  ಆವೃತ್ತಿಯಲ್ಲಿ ಸುರೇಶ್ ರೈನಾ ಅವರು ಮೂರು ಅರ್ಧ ಶತಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದರು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.