ರಾಜೀನಾಮೆ ನೀಡಿದ ರಮೇಶ್ ಕುಮಾರ್: ಸ್ಪೀಕರ್ ಆಗಿ ಕೊನೆಯ ಮಾತು..

ಬೆಂಗಳೂರು: ವಿಧಾನಸಭಾಧ್ಯಕ್ಷರ ಸ್ಥಾನಕ್ಕೆ ರಮೇಶ್ ಕುಮಾರ್ ಇಂದು ರಾಜೀನಾಮೆ ನೀಡಿದರು. ಈ ವೇಳೆ ಮಾತನಾಡಿದ ರಮೇಶ್ ಕುಮಾರ್, ಸಿಟ್ಟಲ್ಲಿ ಆಡಿದ ಮಾತನ್ನ ಮನಸ್ಸಿಗೆ ತೆಗೆದುಕೊಳ್ಳಬೇಡಿ, ಅದರಲ್ಲಿ ದ್ವೇಷವಿರಲಿಲ್ಲ ಎಂದು ಹೇಳಿದರು.

ಅಲ್ಲದೇ, ನಾನು ಶಕ್ತಿಮೀರಿ ಕೆಲಸ ಮಾಡಿದ್ದೇನೆ. ರಾಜಕಾರಣದಲ್ಲಿ ವಿವೇಚನೆಯಿಂದ ನಡೆದುಕೊಳ್ಳಬೇಕು. ಸಾಂದರ್ಭಿಕವಾಗಿ ಈ ಹುದ್ದೆ ಅಲಂಕರಿಸಿರುತ್ತೇವೆ. ನಾನು ನನ್ನ ಶಕ್ತಿ ಮೀರಿ ಘನತೆಯನ್ನ ಎತ್ತಿಹಿಡಿದಿದ್ದೇನೆ. ಸೋನಿಯಾ, ರಾಹುಲ್ ನನ್ನನ್ನ ಆಯ್ಕೆಮಾಡಿದ್ದರು. ಮೈತ್ರಿಯಲ್ಲೂ ನನ್ನ ಹೆಸರು ಆಯ್ಕೆ ಮಾಡಿದ್ದರು. ಬಿಜೆಪಿಯಲ್ಲೂ ನನ್ನನ್ನ ಒಪ್ಪಿಕೊಂಡಿದ್ದರು. ನಾನು ಕೊಟ್ಟ ಸ್ಥಾನವನ್ನ ಸಮರ್ಪಕವಾಗಿ ನಿಭಾಯಿಸಿದ್ದೇನೆ. ಹೀಗಾಗಿ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿ, ರಮೇಶ್ ಕುಮಾರ್ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

ಇದೇ ವೇಳೆ ಮೈತ್ರಿ ಸರ್ಕಾರದ ನಾಯಕರಿಗೆ, ಕಾಂಗ್ರೆಸ್ ಹೈಕಮಾಂಡ್‌ಗೆ ರಮೇಶ್ ಕುಮಾರ್ ಧನ್ಯವಾದ ಸಲ್ಲಿಸಿದರು. ಅಲ್ಲದೇ, ನಾನು ಸ್ವಲ್ಪ ಆವೇಶದ ಮನುಷ್ಯ, ನಮ್ಮ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಆಗಾಗ ರೇಗಾಡ್ತಿದ್ದೆ. ಆದರೆ ಆ ಮಾತಲ್ಲಿ ದ್ವೇಷವಿರಲಿಲ್ಲ. ಸಿಟ್ಟಾದಾಗ ಸ್ವಲ್ಪ ಕಸಿವಿಸಿಯಾಗ್ತೇನೆ. ಕೆಲ ಸುಧಾರಣೆಗಳನ್ನ ತರುವಲ್ಲಿ ನನಗೆ ಸಹಕರಿಸಿದ್ದೀರಿ. ತಮಗೆಲ್ಲರಿಗೂ ಕೂಡ ಹೃತ್ಪೂರ್ವಕ ಧನ್ಯವಾದಗಳು ಎಂದಿದ್ದಾರೆ.

Recommended For You

About the Author: Dayakar

Leave a Reply

Your email address will not be published. Required fields are marked *