ಪ್ರಜಾಕೀಯ ಹೇಗೆ ಸಾಧ್ಯ ಎಂದು ಉಪೇಂದ್ರ ಹೇಳಿದ್ದೇಕೆ..?

ಎಲ್ಲಿಯವರೆಗೂ ನಾವು ಭಗವದ್ಗೀತೆ, ಬೈಬಲ್, ಕುರಾನ್ ಹೇಳಿರೋ ಶ್ರೇಷ್ಠ ವಿಚಾರ ಬಿಟ್ಟು ಕ್ರಿಷ್ಣ ,ಅಲ್ಲಾ , ಜೀಸಸ್ ನ ಮಾತ್ರ ಪೂಜಿಸೋ ಮನಸ್ಥಿತಿ ಇರೋವರ್ಗೂ.  ವ್ಯಕ್ತಿ ಪೂಜೆ ಮಾಡೋ ರಾಜಕೀಯ ಈ ದೇಶದಲ್ಲಿ ಇದ್ದೇ ಇರುತ್ತೆ. ವಿಚಾರ ತಿಳ್ದು ಪ್ರಚಾರ ಮಾಡೋ ಮನಸ್ಥಿತಿ ನಮಗೇ ಬರೋವರ್ಗೂ ಪ್ರಜಾಕೀಯ ಹೇಗೆ ಸಾಧ್ಯ  ಎಂದು ನಟ, ನಿರ್ದೇಶಕ ಉಪೇಂದ್ರ ಟ್ವೀಟ್ ಮಾಡಿದ್ದಾರೆ.

ಇನ್ನೂ ನಿನ್ನೆ ಟ್ವೀಟ್​​ ಮಾಡಿದ ಉಪೇಂದ್ರ ಬೇರೆ ಪಕ್ಷಗಳ ಬಗ್ಗೆ ಕಾಮೆಂಟ್ ಮಾಡೋದು ರಾಜಕೀಯ, ತಮ್ಮ ಪಕ್ಷದ ಕಂಟೆಂಟ್ ಬಗ್ಗೆ ಮಾತ್ರ ಮಾತಾಡೋದು ಪ್ರಜಾಕೀಯ ಎನ್ನುವ ಸಂದೇಶವನ್ನು ಕೂಡ ತಮ್ಮ ಟ್ವೀಟರ್​ನಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಕೂಡ ಟ್ವೀಟ್ ಮಾಡಿದ ಉಪೇಂದ್ರ  ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಮತ ಚಲಾಯಿಸುವ ಒಂದು ದಿನ ಮಾತ್ರ ನಮಗೆ ಬೆಲೆ ಇರುತ್ತದೆ , ಆನಂತರ ನಾವು ಮೂಕ ಪ್ರೇಕ್ಷಕರು, ನಾಯಕರಿಂದ ಪ್ರಜೆಗಳಿಗೆ ಸಂಪೂರ್ಣ ಅಧಿಕಾರ ಹಸ್ತಾಂತರ ಮಾಡಲು ಬಹುಮತ ಬೇಕು ಅದಕ್ಕೆ ಪ್ರಜೆಗಳೇ ಪ್ರಜಾಕೀಯ ಪಕ್ಷಕ್ಕೆ ಸ್ಪರ್ದಿ ಹಾಗೂ ಕಾರ್ಯಕರ್ತರಾಗಬೇಕು, ಮತ್ತೊಬ್ಬ ನಾಯಕ ಮಾಡಲಿ ಎಂದು ನಾವು ಕಾಯಬಾರದು ಎಂದು ತಿಳಿಸಿದ್ದರು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.