ಭ್ರಷ್ಟ ಸಮ್ಮಿಶ್ರ ಸರ್ಕಾರ ತೊಲಗಿದೆ ಇದರಿಂದ ನಾಡಿನ ಜನರಿಗೆ ಸಂತೋಷವಾಗಿದೆ- ರೇಣುಕಾಚಾರ್ಯ

ಬೆಂಗಳೂರು: ನಾಡಿನ ಜನರಿಗೆ ಇಂದು ತುಂಬಾ ಸಂತೋಷ ಆಗಿದೆ. ಭ್ರಷ್ಟ ಸಮ್ಮಿಶ್ರ ಸರ್ಕಾರ ತೊಲಗಿದೆ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

ನಿನ್ನೆ ಭ್ರಷ್ಟ ಸಮ್ಮಿಶ್ರ ಸರ್ಕಾರ ತೊಲಗಿದೆ

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಈ ಭ್ರಷ್ಟ ಸಮ್ಮಿಶ್ರ ಸರ್ಕಾರ ಯಾವಾಗ ತೊಲಗುತ್ತೆ ಅಂತಿದ್ದರು ಜನ,  ನಿನ್ನೆ ತೊಲಗಿದೆ ಸರ್ಕಾರ.  99 ಶಾಸಕರು ಅಲ್ಪ ಮತದ ಸರ್ಕಾರ ಪತನ ಆಗಿದೆ.  ಕುಮಾರಸ್ವಾಮಿ ವಿಶ್ವಾಸಮತಕ್ಕೆ ಕೈ ಹಾಕಬಾರದಿತ್ತು,  ಬಹುಮತ ಇಲ್ಲದಿದ್ರು ಬಂಡತನಕ್ಕೆ ಬಿದ್ದಿದ್ದರು,   ವಾಮಮಾರ್ಗ ವಾಮಾಚಾರದಿಂದ ಗೆಲ್ತೀವಿ ಅಂದುಕೊಂಡಿದ್ರು ಇದು ಸಾಧ್ಯವಿಲ್ಲ ಎಂದು ಹೀಗ ಅರ್ಥವಾಗಿದೆ ಎಂದು ರೇಣುಕಾಚಾರ್ಯ ಹೇಳಿದರು.

 15 ವರ್ಷಗಳ ನಂತರ ಕೇಂದ್ರದಲ್ಲಿ ರಾಜ್ಯದಲ್ಲಿ ಒಂದೇ ಸರ್ಕಾರ

ನಂತರ ಆರ್. ಅಶೋಕ್ ಮಾತನಾಡಿದ್ದು,  ಕಾನೂನಾತ್ಮಕ ಚರ್ಚೆ ಮಾಡಿದ್ದೇವೆ.  ರಾಷ್ಟ್ರ ನಾಯಕರು ನಿರಂತರ ಚರ್ಚೆ ಮಾಡುತ್ತ ಸಂಪರ್ಕದಲ್ಲಿದ್ದಾರೆ.  15-20 ವರ್ಷದ ನಂತರ ಕೇಂದ್ರದಲ್ಲಿ ರಾಜ್ಯದಲ್ಲಿ ಏಕಕಾಲಕ್ಕೆ ಸರ್ಕಾರ ಅಧಿಕಾರಕ್ಕೆ ಬಂದಿದೆ ಶಾಸಕಾಂಗ ಸಭೆ, ರಾಜ್ಯಪಾಲರ ಭೇಟಿ ಎಲ್ಲದರ ಬಗ್ಗೆ ಕೂಡ ಹೈಕಮಾಂಡ್ ಗೆ ಮಾಹಿತಿ ನೀಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.