ರಾಣಾಗೆ ಕಿಡ್ನಿ ಕಸಿ ಶಸ್ತ್ರ ಚಿಕಿತ್ಸೆ ಯಶಸ್ವಿ ; ಕಿಡ್ನಿ ದಾನ ಮಾಡಿದ್ಯಾರು ಗೊತ್ತಾ..?

ಬಹುಭಾಷಾ ನಟ ರಾಣಾ ದಗ್ಗುಬಾಟಿ ಗೊತ್ತಲ್ವಾ..? ಬಾಹುಬಲಿ ಸಿನಿಮಾದಲ್ಲಿ ಬಲ್ಲಾಳದೇವನಾಗಿ ಅಬ್ಬರಿಸಿದ್ದ ಅದೇ ರಾಣಾದಗ್ಗುಬಾಟಿ, ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ.

ಕಳೆದೊಂದು ವಾರದಿಂದ ದಗ್ಗುಬಾಟಿ ಫ್ಯಾಮಿಲಿ ಅಮೇರಿಕಾದಲ್ಲಿ ಬೀಡು ಬಿಟ್ಟಿದ್ದು, ಚಿಕಾಗೋದ ಆಸ್ಪತ್ರೆಯಲ್ಲಿ ರಾಣಾಗೆ ದಾಖಲಾಗಿದ್ದಾರೆ. ಕಳೆದ ಕೆಲ ದಿನಗಳಿಂದ ರಾಣಾ ಆರೋಗ್ಯ ಸಮಸ್ಯೆ ಬಗ್ಗೆ ಸುದ್ದಿ ಕೇಳಿ ಬಂದಿತ್ತು. ಮೊನ್ನೆಯಷ್ಟೆ ರಾಣಾಗೆ ತಾಯಿಯ ಕಿಡ್ನಿಯನ್ನ ಯಶಸ್ವಿಯಾಗಿ ಕಸಿ ಮಾಡಿಲಾಗಿದೆಯಂತೆ. ಈ ಬಗ್ಗೆ ದಗ್ಗುಬಾಟಿ ಫ್ಯಾಮಿಲಿ ಅಧಿಕೃತವಾಗಿ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ.

ಕಳೆದ ಹಲವು ದಿನಗಳಿಂದ ರಾಣಾ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅನ್ನೋ ಸುದ್ದಿ ಕೇಳಿಬಂದಿತ್ತು. ಬಾಹುಬಲಿ ಸಿನಿಮಾಗಾಗಿ ಸಿಕ್ಕಾಪಟ್ಟೆ ದೇಹ ದಂಡಿಸಿ, ತೂಕ ಹೆಚ್ಚಿಸಿಕೊಂಡು ಮತ್ತೆ ಇಳಿಸಿಕೊಂಡು ಕಸರತ್ತು ಮಾಡಿದ್ದರು. ಅದೇ ಸಮಸ್ಯೆ ಉಲ್ಬಣಿಸೋಕ್ಕೆ ಕಾರಣ ಅಂತಲೂ ಹೇಳಲಾಗ್ತಿದೆ. ಸಮಸ್ಯೆ ಗೊತ್ತಾದ ಕೂಡಲೇ ರಾಣಾ ವೈದ್ಯರನ್ನು ಸಂಪರ್ಕಿಸಿದ್ದರು. ಆದರೆ ಶಸ್ತ್ರ ಚಿಕಿತ್ಸೆ ಬೇಡ. ಮಾಮೂಲಿ ಚಿಕಿತ್ಸೆ ಮೂಲಕ ಗುಣಪಡಿಸಲು ವೈದ್ಯರು ಮುಂದಾಗಿದ್ದರು. ವಿರಾಟ ಪರ್ವಂ ಸಿನಿಮಾದಲ್ಲಿ ನಟಿಸ್ತಿದ್ದು, ಆ ಸಿನಿಮಾ ಶೂಟಿಂಗ್​ ವೇಳೆ ನೋವು ಹೆಚ್ಚಾಗಿ ಆಸ್ಪತ್ರೆ ಸೇರಿದ್ದಾರೆ.

ಕಿಡ್ನಿ ಕಸಿ ಮಾಡಲೇಬೇಕು ಅಂತ ವೈದ್ಯರು ಹೇಳಿದ ಮೇಲೆ ರಾಣಾ ಶಸ್ತ್ರ ಚಿಕಿತ್ಸೆಗೆ ಒಪ್ಪಿದ್ರಂತೆ. ಸದ್ಯ ಕಿಡ್ನಿ ಕಸಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ರಾಣಾ ಮತ್ತು ಅವರ ತಾಯಿ ಲಕ್ಷ್ಮಿ ಚೇತರಿಸಿಕೊಳ್ತಿದ್ದಾರೆ. ರಾಣಾಗೆ ನಾಲ್ಕು ತಿಂಗಳ ವಿಶ್ರಾಂತಿ ಅವಶ್ಯಕತೆ ಇದ್ದು ಆ ನಂತರ ಸಿನಿಮಾ ಶೂಟಿಂಗ್​ನಲ್ಲಿ ಭಾಗವಹಿಸ್ತಾರೆ ಅನ್ನಲಾಗ್ತಿದೆ. ವಿರಾಟ ಪರ್ವ ಜೊತೆಗೆ ಹಿರಣ್ಯ ಕಶಿಪು ಅನ್ನೋ ಮತ್ತೊಂದು ಚಿತ್ರದಲ್ಲಿ ರಾಣ ನಟಿಸೋಸು ಪಕ್ಕಾ ಆಗಿದೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.