‘ಅತೃಪ್ತರು ಆರಾಮಾಗಿಲ್ಲ, ಇಲ್ಲೇ ಇದ್ದಿದ್ರೆ ಅವರಿಗೇನು ಮುಳ್ಳು ಚುಚ್ಚಿತ್ತಾ’- ಸಿದ್ದರಾಮಯ್ಯ

ಬೆಂಗಳೂರು: ವಿಶ್ವಾಸ ಮತಯಾಚನೆ ಮಾಡುತ್ತೇವೆ ಅನ್ನೋದನ್ನ ಸದನದಲ್ಲಿ ನಾವು ಹೇಳಿದ್ದೇವೆ ಹಾಗೆಯೇ ನಾವು ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ವಿಧಾನಸೌಧದಲ್ಲಿ ಸೋಮವಾರ ಮಾತನಾಡಿದ ಅವರು, ಸ್ಪೀಕರ್ ರಮೇಶ್​ ಕುಮಾರ್​ ತೀರ್ಮಾನ ಮಾಡುತ್ತಾರೆ. ಆದರೆ, ಸುಪ್ರಿಂಕೋರ್ಟ್​​ನಲ್ಲಿ ಬೆಳವಣಿಗೆ ನಡೆಯಲಿದೆ. ವಿಪ್ ಬಗ್ಗೆ ನಾವು ದಾವೇ ಹೂಡಿದ್ದೇವೆ. ನಾಳೆ ಚರ್ಚೆಗೆ ಬರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

ಇನ್ನು ಅತೃಪ್ತರು ಬಂದರೆ ನಮ್ಮ ಪರವಾಗೆ ಇರ್ತಾರೆ, ಅತೃಪ್ತರು ಹೇಳಿದಂತೆ ಅವರು ಆರಾಮವಾಗಿಲ್ಲ, ಆರಾಮಾಗಿ ಇದ್ದರೆ ಇಲ್ಲೇ ಇರಬಹುದಿತ್ತು. ಇಲ್ಲಿ ಮುಳ್ಳು ಚುಚ್ಚುತ್ತಿತ್ತೆ(?) ಅತೃಪ್ತರು ಪೊಲೀಸರ ಸರ್ಪಗಾವಲಿನಲ್ಲಿದ್ದಾರೆ ಎಂದು ಕಾಂಗ್ರೆಸ್​ ಮುಖಂಡ ಸಿದ್ದರಾಮಯ್ಯ ಅವರು ನುಡಿದರು.

ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿದ್ದವನು ನಾನು, ಮೊದಲು ಕನ್ನಡ, ಆಮೇಲೆ ಇಂಗ್ಲೀಷ್. ಚರ್ಚೆ ನಡೀತಿದೆ, ಸ್ಪೀಕರ್ ಹೇಗೆ ಹೇಳ್ತಾರೊ ಹಾಗೇ ನಡೆದುಕೊಳ್ಳುತ್ತೇವೆ. ನಾನು, ಸಿಎಂ ಇಬ್ಬರೂ ಸೋಮವಾರ ವಿಶ್ವಾಸಮತ ನಡೆಸೋದಾಗಿ ಹೇಳಿದ್ವಿ. ಈ ನಡುವೆ ಸುಪ್ರೀಂಕೋರ್ಟ್ ನಲ್ಲಿ ಏನೆಲ್ಲ ಬೆಳವಣಿಗೆಯಾಗಿದೆ ನೋಡ್ಬೇಕಲ್ಲ ಎಂದು ಅವರು ತಿಳಿಸಿದರು.

ಇನ್ನು ಶಂಕರ್ ಮತ್ತು ನಾಗೇಶ್ ಸುಪ್ರೀಕೋರ್ಟ್​ಗೆ ಹೋಗಿದ್ದಾರೆ. ನಾಳೆ ವಿಚಾರಣೆಗೆ ಬರಬಹುದು, ವಿಪ್ ವಿಚಾರವಾಗಿ ಗೊಂದಲವಿದ್ದು ಅದೂ ಕೂಡ ನಾಳೆ ವಿಚಾರಣೆಗೆ ಬರಲಿದೆ ಎಂದು ಸಿದ್ದರಾಮಯ್ಯ ಪರೋಕ್ಷವಾಗಿ ಇವತ್ತು ವಿಶ್ವಾಸಮತ ಸಾಧ್ಯವಿಲ್ಲ ಎಂಬ ರೀತಿ ಮಾತನಾಡಿದ್ದಾರೆ.

ಅಷ್ಟೇ ಅಲ್ಲದೇ ನಮ್ಮ ಶಾಸಕರು ಬಂದ್ರೆ ನಮಗೆ ವಿಸ್ವಾಸ ಮತದಲ್ಲಿ ವೋಟ್ ಹಾಕ್ತಾರೆ. ಯಾಕಂದ್ರೆ ಅವರೆಲ್ಲಾ ಗನ್ ಪಾಯಿಂಟ್​ನಲ್ಲಿದ್ದಾರೆ. ಐನೂರು ಜನ ಪೊಲೀಸರು ಅವರನ್ನ ಕಾಯ್ತಿದ್ದಾರೆ. ಗನ್​ ಪಾಯಿಂಟ್​ನಲ್ಲಿ ಇಲ್ಲ ಅನ್ನೋದಾದ್ರೆ, ಬಾಂಬೆಗೆ ಏಕೆ ಹೋಗ್ಬೇಕಿತ್ತು. ಇಲ್ಲೇ ಇದ್ದಿದ್ರೆ ಅವರಿಗೇನು ಮುಳ್ಳು ಚುಚ್ತಿತ್ತಾ(?) ಎಂದು ಮಾಜಿ ಮುಖ್ಯ ಸಿದ್ದರಾಮಯ್ಯ ತಿಳಿಸಿದರು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.