1 ಜಿಲ್ಲೆ, 132 ಹಳ್ಳಿ, 3 ತಿಂಗಳಲ್ಲಿ ಒಂದೇ ಒಂದು ಹೆಣ್ಣು ಮಗು ಕೂಡ ಜನಿಸಿಲ್ಲ!

ಅಂಕಿ-ಅಂಶಗಳ ಪ್ರಕಾರ, ಕಳೆದ ಮೂರು ತಿಂಗಳಲ್ಲಿ ಜಿಲ್ಲೆಯ 132 ಹಳ್ಳಿಗಳಲ್ಲಿ 216 ಮಕ್ಕಳು ಜನಿಸಿದ್ದಾರೆ. ಆದರೆ, ನವಜಾತ ಶಿಶುಗಳಲ್ಲಿ ಒಬ್ಬ ಹೆಣ್ಣು ಮಗು ಸಹ ಇರಲಿಲ್ಲ, ಇದು ಜಿಲ್ಲಾಡಳಿತವನ್ನು ಅಸ್ತವ್ಯಸ್ತಗೊಳಿಸಿದೆ.

ಉತ್ತರಖಂಡ: ‘ಬೇಟಿ ಬಚ್ಚಾವೋ ಬೇಟಿ ಪಡಾವೋ’ ಎಂಬ ಘೋಷ ವಾಕ್ಯದೊಂದಿಗೆ ಸರ್ಕಾರ ಯೋಜನೆಗಳನ್ನು ಜಾರಿ ಮಾಡಿ  ಎಲ್ಲೆಡೆ ಪ್ರಚಾರ ಮಾಡುತ್ತಿದೆ. ಆದರೆ, ಉತ್ತರಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯ 132 ಹಳ್ಳಿಗಳಲ್ಲಿ ಲಿಂಗಾನುಪಾತ ಮಾತ್ರದಲ್ಲಿ ಮಾತ್ರ ಆಶ್ಚರ್ಯ ಪಡುವ ರೀತಿಯಲ್ಲಿ ವರದಿ ಬಂದ್ದು, ಈ ಜಿಲ್ಲೆಯಲ್ಲಿ ಒಂದೇ ಒಂದು ಹೆಣ್ಣು ಮಗು ಜನಿಸಿಲ್ಲ ಎಂದು ವರದಿಗಳು ತಿಳಿಸಿದೆ.

ಅಂಕಿ-ಅಂಶಗಳ ಪ್ರಕಾರ, 132 ಹಳ್ಳಿಗಳಿಂದ ಒಟ್ಟು 216 ಮಕ್ಕಳು ಮೂರು ತಿಂಗಳಲ್ಲಿ ಜನನ ಆಗಿವೆ. ಆದರೆ, ಒಂದೇ ಒಂದು ಹೆಣ್ಣು ಮಗು ಈ ಅವಧಿಯಲ್ಲಿ ಜನಿಸಿಲ್ಲ ಎಂದು ಜಿಲ್ಲಾಡಳಿತ ವರದಿ ಮಾಡಿದೆ.

ಹೆಣ್ಣು ಮಗುವಿನ ಹೆರಿಗೆಯ ಸಂಖ್ಯೆ ಶೂನ್ಯವಾಗಿರುವ ಎಂಬ ಪ್ರದೇಶಗಖನ್ನು ನಾವು ಗುರುತಿಸಿದ್ದೇವೆ. ಲಿಂಗಾನುಪಾತದ ಮೇಲೆ ಏನು ಪರಿಣಾಮ ಬೀರುತ್ತಿದೆ ಎಂಬುದನ್ನು ಕಂಡುಹಿಡಿಯಲು ನಾವು ಆ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಇದರ ಹಿಂದಿನ ಕಾರಣವನ್ನು ಗುರುತಿಸಲು ವಿವರವಾದ ಸಮೀಕ್ಷೆ ಮತ್ತು ಅಧ್ಯಯನವನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಆಶಿಶ್ ಚೌಹಾನ್ ಅವರು ಹೇಳಿದ್ದಾರೆ.

ಆಶಿಶ್ ಚೌಹಾನ್ ಆಶಾ ಕಾರ್ಯಕರ್ತರೊಂದಿಗೆ ತುರ್ತು ಸಭೆ ನಡೆಸಿ ಈ ಪ್ರದೇಶಗಳಲ್ಲಿ ಜಾಗರೂಕತೆಯನ್ನು ಹೆಚ್ಚಿಸಲು ಮತ್ತು ದತ್ತಾಂಶಗಳ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಹೇಳಿದ್ದಾರೆ. ಈ ವೇಳೆ ಗಂಗೋತ್ರಿ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲ್ ರಾವತ್ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.