ಭಲೇ ಭಲೇ ಬಾಹುಬಲಿ: ಚಂದ್ರಯಾನ-2 ಉಡಾವಣೆ ಸಕ್ಸಸ್

ಶ್ರೀಹರಿಕೋಟಾ: ಚಂದ್ರನೂರು ತಲುಪುವಲ್ಲಿ ಇಸ್ರೋ ಯಶಸ್ಸು ಕಂಡಿದ್ದು, ಶ್ರೀಹರಿಕೋಟಾದಿಂದ GSLV-3 ರಾಕೇಟ್ ಉಡಾವಣೆ ಮಾಡುವ ಮೂಲಕ ‘ಬಾಹುಬಲಿ’ ನಭಕ್ಕೆ ಚಿಮ್ಮಿದೆ. ಚಂದ್ರಯಾನ- 2 ಸಕ್ಸಸ್ ಕಂಡಿದೆ.

ಚಂದ್ರಯಾನ – 2 ಭಾರತದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು, ಚಂದ್ರಯಾನ – 2 ಸಂಪೂರ್ಣ ಸ್ವದೇಶಿ ನಿರ್ಮಿತ ಯೋಜನೆಯಾಗಿದೆ. ಆಂಧ್ರದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ರಾಕೇಟ್ ಉಡಾವಣೆಗೊಂಡಿದ್ದು, ₹.987 ರೂ.ಕೋಟಿ ವೆಚ್ಚದಲ್ಲಿ ಈ ಪ್ರಾಜೆಕ್ಟ್ ನಿರ್ಮಾಣವಾಗಿದೆ.

ಇನ್ನು ಈ ಯೋಜನೆಯಲ್ಲಿ ಶೇ.30ರಷ್ಟು ಮಹಿಳಾ ವಿಜ್ಞಾನಿಗಳು ಭಾಗಿಯಾಗಿದ್ದು, ಸೆ.6ರಂದು ಈ ನೌಕೆ ಚಂದ್ರನ ಅಂಗಳಕ್ಕೆ ಕಾಲಿಡಲಿದೆ. ಈ ನೌಕೆ ಬಹುಶಕ್ತಿಶಾಲಿಯಾದ ಕಾರಣ ಇದಕ್ಕೆ ಬಾಹುಬಲಿ ಎಂದು ನಾಮಕರಣ ಮಾಡಲಾಗಿದೆ.

ಇನ್ನು ಉಡಾವಣೆ ಯಶಸ್ವಿ ಬಳಿಕ ಮಾತನಾಡಿದ ಇಸ್ರೋ ಅಧ್ಯಕ್ಷ ಕೆ.ಶಿವನ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಚಂದ್ರಯಾನ -2 ವೈಜ್ಞಾನಿಕ ಸಂಶೋಧನೆಗೆ ಸಹಾಯಕಾರಿ . ಭಾರತ ಬಾಹ್ಯಾಕಾಶದ ಹೆಜ್ಜೆಯನ್ನ ವಿಸ್ತರಿಸುವುದು . ಈ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸಿದ್ದಾರೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.