ಸದನದಲ್ಲಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಕಣ್ಣೀರು!

ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ಅರವಿಂದ​ ಲಿಂಬಾವಳಿ ಹೆಸರು ಓಡಾಡುತ್ತಿದೆ ಎಂದು ಅರಸೀಕೆರೆ ಜೆಡಿಎಸ್​ ಶಾಸಕ ಶಿವಲಿಂಗೇಗೌಡ ಅವರು ಲಿಂಬಾವಳಿ ವಿಷಯ ಪ್ರಸ್ತಾಪ ಮಾಡಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಕಲಾಪದಲ್ಲಿ ಮಾತನಾಡಿದ ಅವರು, ನಮ್ಮ ಶಾಸಕರ ಗೌರವ ಬೀದಿಪಾಲಾಗುತ್ತಿದೆ. ಇವತ್ತು ಅವರದ್ದು,ನಾಳೆ ನಮ್ಮದು ಬರುತ್ತದೆ. ಸೋಶಿಯಲ್ ಮಿಡಿಯಾ ಮೇಲೆ ಕಂಟ್ರೋಲ್ ಆಗಬೇಕು ಎಂದು ಜೆಡಿಎಸ್​​ ಶಾಸಕ ಶಿವಲಿಂಗೇಗೌಡ ಸ್ಪೀಕರ್​ ಬಳಿ ಒತ್ತಾಯ ಮಾಡಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು, ಅರವಿಂದ ಲಿಂಬಾವಳಿ ಅಂತವರಲ್ಲ, ಅವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆದಿದೆ ಎಂದು ಬಿಎಸ್​ವೈ ಲಿಂಬಾವಳಿ ಪರ ಬ್ಯಾಟಿಂಗ್​ ಮಾಡಿದರು.

ನಂತರ ಮಾತನಾಡಿದ ಅರವಿಂದ ಲಿಂಬಾವಳಿ ಅವರು, ಶಿವಲಿಂಗೇಗೌಡರು ಹೇಳಿದ್ದು ಸರಿಯಾಗಿದೆ, ಇದರ ಬಗ್ಗೆ ತನಿಖೆಯಾಗಲೇ ಬೇಕು. ಈ ಘಟನೆಯಿಂದ ನನ್ನ ಮರ್ಯಾದೆ ಹೋಗಿದೆ. ಇವತ್ತು ನನಗೆ, ನಾಳೆ ಅವರಿಗೆ ಆಗಬಹುದು ನಮ್ಮ ಕುಟುಂಬದ ಗೌರವದ ಕಥೆ ಏನಾಗಬೇಡ ಎಂದು ಮಹದೇವಪುರ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸದನದಲ್ಲಿ ಕಣ್ಣೀರಾಕಿದ್ದಾರೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.