ಇದು ದರ್ಶನ್ ಮಿಸ್ ಮಾಡ್ದೆ ನೋಡಲೇಬೇಕಾದ ಸ್ಟೋರಿ..!!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​, ಚಾಲೆಂಜಿಂಗ್ ಸ್ಟಾರ್ ದರ್ಶನ್. ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್​ಗಳು,  ಹೆಚ್ಚು ಕಡಿಮೆ ಏಕಕಾಲಕ್ಕೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಸ್ಟಾರ್​​​ ಪಟ್ಟ ಅಲಂಕರಿಸಿದವರು.

ಒಂದು ಕಾಲದಲ್ಲಿ ಕುಚುಕು ಗೆಳೆಯರಂತಿದ್ದ ಇವರಿಬ್ಬರೂ ಈಗ ಮುನಿಸಿಕೊಂಡಿದ್ದಾರೆ.. ಆದರೆ, ಇವರಿಬ್ಬರು ಒಂದಾಗ್ಬೇಕು ಅನ್ನೋದು ಅಭಿಮಾನಿಗಳ ಮಹದಾಸೆ. ದರ್ಶನ್​ ಮನಸ್ಸು ಮಾಡಿದರೆ, ಇದು ಕಷ್ಟವಾಗಲ್ಲ. ದಶಕಗಳ ಕಾಲ ಸ್ನೇಹಿತರಾಗಿದ್ದ ಸುದೀಪ್-ದರ್ಶನ್, ಸಣ್ಣ ಮನಸ್ತಾಪದಿಂದ ಮುನಿಸಿಕೊಂಡು ದೂರಾಗಿದ್ದರು. ಅದೂ, ದರ್ಶನ್ ಟ್ವಿಟರ್ ನಲ್ಲಿ ಸುದೀಪ್​​​, ನನ್ನ ಸ್ನೇಹಿತನಲ್ಲ ಎಂದು ಸಾರುವವರೆಗೆ ಅವರ ಸಂಬಂಧ ಬಂದು ತಲುಪಿತ್ತು. ಅಭಿಮಾನಿಗಳಿಗೂ ಈ ವಿಚಾರ ಬೇಸರ ತಂದಿತ್ತು. ಅಲ್ಲಿವರೆಗೂ ಚಿತ್ರರಂಗದ ಸಭೆ ಸಮಾರಂಭದಲ್ಲಿ ಹೆಗಲ ಮೇಲೆ ಕೈ ಹಾಕಿಕೊಂಡು ಕಾಣಿಸಿಕೊಳ್ತಿದ್ದ, ಗೆಳೆಯರು ಆ ನಂತರ ಜೊತೆಯಾಗಿ ಕಾಣಿಸಿಕೊಳ್ಳಲೇ ಇಲ್ಲ, ಇತ್ತ ಅಭಿಮಾನಿಗಳು ಇಬ್ಬರನ್ನು ಮತ್ತೆ ಒಟ್ಟಿಗೆ ನೋಡ್ಬೇಕು ಅಂತ ಕಾದಿದ್ದೇ ಬಂತು, ಪ್ರಯೋಜನ ಮಾತ್ರ ಶೂನ್ಯ.

ದರ್ಶನ್, ತಾವು ಯಾಕೆ ಆ ರೀತಿ ಟ್ವೀಟ್ ಮಾಡಿದ್ದು, ಅದಕ್ಕೆ ಕಾರಣ ಏನು ಅನ್ನದನ್ನೂ ಸ್ಪಷ್ಟವಾಗಿ ತಿಳಿಸಿದ್ರು.. ಆದ್ರೆ, ಈ ವಿಚಾರವಾಗಿ ಸುದೀಪ್ ಮಾತ್ರ ಮಾತನಾಡುವ ಗೋಜಿಗೇ ಹೋಗಿರಲಿಲ್ಲ.. ಇದೆಲ್ಲಾ ನಡೆದು ವರ್ಷ ಕಳೆದಿದೆ.. ಅಭಿಮಾನಿಗಳು, ಚಿತ್ರರಂಗದ ಗಣ್ಯರು ಇವರಿಬ್ಬರು ಮತ್ತೆ ಒಂದಾಗಬೇಕು, ಒಟ್ಟಿಗೆ ಸಿನಿಮಾಗಳಲ್ಲಿ ನಟಿಸ್ಬೇಕು ಅನ್ನೋ ಆಸೆ ವ್ಯಕ್ತಪಡಿಸ್ತಾ ಬರ್ತಿದ್ದಾರೆ.. ಸುದೀಪ್​​​​ ಗೆಳೆಯನ ಬಗ್ಗೆ ಹಲವು ಬಾರಿ ಮಾತನಾಡಿದ್ರು, ದರ್ಶನ್ ಕಡೆಯಿಂದ ಮಾತ್ರ ನೋ ರೆಸ್ಪಾನ್ಸ್..

ಕಿಚ್ಚ ಸುದೀಪ್​ ಇಂದಿಗೂ ತಮ್ಮ ಗೆಳೆಯನತ್ತ ಎರಡು ಬಾಹುಗಳನ್ನು ಚಾಚಿ ನಿಂತಿದ್ದಾರೆ. ಸಣ್ಣ ಮನಸ್ತಾಪದಿಂದ ಯಾವುದೋ ವಿಷಗಳಿಗೆಯಲ್ಲಿ ನಡೆದದ್ದನೆಲ್ಲಾ ಮರೆತು ಮುನ್ನಡೆಯೋಕ್ಕೆ ಸಿದ್ಧರಿದ್ದಾರೆ. ಯಾಕಂದ್ರೆ ತಮ್ಮ ಸ್ನೇಹಿತನನ್ನ ಅಷ್ಟು ಎತ್ತರದ ಸ್ಥಾನದಲ್ಲಿ ಕೂರಿಸಿದ್ದಾರೆ ಕಿಚ್ಚ. ಸ್ನೇಹಿತರಾಗಿದ್ದಾಗ ನನ್ನ ಸ್ನೇಹಿತ ನಂಬರ್​ ವನ್​ ಅಂತ ಹೇಳಿದವರು, ಇಂದಿಗೂ ಅದನ್ನು ಮರೆತಿಲ್ಲ.

ನಿಜ, ದರ್ಶನ್​ ಟ್ವೀಟ್​ ಮಾಡಿ ನಾವಿಬ್ಬರು ಸ್ನೇಹಿತರಲ್ಲ ಅಂತೇಳಿ, ಇಬ್ಬರು ಉತ್ತರ ಧ್ರುವ ದಕ್ಷಿಣ ಧ್ರುವದಂತೆ ದೂರ ದೂರ ಇದರ, ಸ್ನೇಹಿತನ ಬಗ್ಗೆ ಕೇಳಿದಾಗಲೆಲ್ಲಾ ಸುದೀಪ್​ ಮಾತನಾಡಿದ್ದಾರೆ. ಆದರೆ ಅತ್ತ ಕಡೆಯಿಂದ ಮಾತ್ರ ಉತ್ತರವೇ ಇಲ್ಲ, ಸರಿಯಾಗಿ ಗಮನಿಸಿದಾರೆ, ಅಂದಿನಿಂದ ಇಂದಿನವರೆಗೆ ಒಂದಲ್ಲ ಎರಡಲ್ಲ ಮೂರು ಬಾರಿ ತಾವಾಗಿಯೇ ದರ್ಶನ್​ ಹೆಸರು ತೆಗೆದುಕೊಂಡು ಮಾತನಾಡಿದ್ದಾರೆ ಅಭಿನಯ ಚಕ್ರವರ್ತಿ,  ಸ್ನೇಹಿತನ ಕ್ಷೇಮ ಮತ್ತು ಸಾಧನೆಗಾಗಿ ಹಾರೈಸುತ್ತಾ ಬರ್ತಿದ್ದಾರೆ.

ಕುಚಿಕು ಸ್ನೇಹಿತರ​ ಅಭಿಮಾನಿಗಳ ಪಾಲಿಗೆ ಆ ಕರಾಳ ದಿನ ಬಂದೋದ ನಂತರ, ಸುದೀಪ್​​​​​​​​ ಸ್ನೇಹಿತನ ಬಗ್ಗೆ ಮೊದ್ಲು ಮಾತನಾಡಿದ್ದು, ಕುರುಕ್ಷೇತ್ರ ಸಿನಿಮಾ ಸೆಟ್ಟೇರಿದಾಗ. ‘ದುರ್ಯೋಧನ ಪಾತ್ರಕ್ಕೆ ಜೀವ ತುಂಬಿ ನಟಿಸುವುದು ದರ್ಶನ್‌ಗೆ ಮಾತ್ರ ಸಾಧ್ಯ. ಆ ಪಾತ್ರಕ್ಕೆ ದರ್ಶನ್‌ ಅವರೇ ಸೂಕ್ತ. ಈ ಚಿತ್ರದ ಮೂಲಕ ದರ್ಶನ್‌ ಸಾಧನೆಯ ಮುಕುಟಕ್ಕೆ ಮತ್ತೊಂದು ಗರಿ ಬರಲಿದೆ’ ಅಂತ ಕಿಚ್ಚ ಟ್ವೀಟ್‌ ಮಾಡಿದ್ದರು.

ಮೈಸೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ದರ್ಶನ್ ಪೆಟ್ಟು ಮಾಡಿಕೊಂಡು ಆಸ್ಪತ್ರೆ ಸೇರಿದಾಗ, ಸುದೀಪ್​​​​ ಎರಡನೇ ಸಲ, ಸ್ನೇಹಿತನನ್ನ ನೆನಪಿಸಿಕೊಂಡಿದ್ದಾರೆ. “ನೀನು ಆರೋಗ್ಯವಾಗಿದ್ದೀಯಾ ಎಂದು ಕೇಳಿ ತುಂಬಾ ಸಂತೋಷವಾಯಿತು. ಆದಷ್ಟು ಬೇಗ ಚೇತರಿಸಿಕೋ ಅಂತ ಹಾರೈಸುತ್ತೇನೆ  ಅಂತ ದರ್ಶನ್​​ ಅವರನ್ನ ಟ್ಯಾಗ್​ ಮಾಡಿ ಕಿಚ್ಚ ಟ್ವೀಟ್ ಮಾಡಿದರು.

ಇದಿಷ್ಟೆ ಅಲ್ಲ, ಇತ್ತೀಚಿಗೆ ಸುಮಲತಾ ಅಂಬರೀಶ್​ ಪರ ನೀವು ಪ್ರಚಾರಕ್ಕೆ ಹೋಗಲ್ವಾ ಸರ್ ಅಂತ ಮಾಧ್ಯಮದವರು ಕೇಳಿದಾಗ, ದರ್ಶನ್​​ ಮತ್ತು ಯಶ್​ ಇದ್ದಾರೆ ನಾನ್ಯಾಕೆ..? ಅಂತ ಸುದೀಪ್ ಹೇಳಿದ್ದು ಎಲ್ಲರಿಗೂ ಗೊತ್ತೇಯಿದೆ. ನಿಮಗೆ ಗೊತ್ತಿರಲಿ ಸುದೀಪ್​​ ನನ್ನ ಸ್ನೇಹಿತನಲ್ಲ ಅಂತ ದರ್ಶನ್​ ಟ್ವೀಟ್ ಮಾಡೋಕು ಮೊದ್ಲೇ ಟ್ವಿಟ್ಟರ್​ನಲ್ಲಿ ಸ್ನೇಹಿತನನ್ನ ಅನ್​ಫಾಲೋ ಮಾಡಿದರು.. ಬಟ್​​ ಸುದೀಪ್​ ಇಂದಿಗೂ ತಮ್ಮ ಮನೆಯಲ್ಲಿ ಸ್ನೇಹಿತನ ಫೋಟೋ ಇಟ್ಟುಕೊಂಡಿದ್ದಾರೆ. ಟ್ವಿಟ್ಟರ್​​ನಲ್ಲಿ ಇಂದಿಗೂ ಸ್ನೇಹಿತನನ್ನ ಫಾಲೋ ಮಾಡ್ತಿದ್ದಾರೆ.

ದರ್ಶನ್​- ಸುದೀಪ್​ ಇಬ್ಬರು ದೂರಾದ ಮೇಲೆ ಅಭಿಮಾನಿಗಳು ಸಾಕಷ್ಟು ಬಾರಿ ನೀವಿಬ್ಬರು ಒಟ್ಟಿಗೆ ನಟಸ್ಬೇಕು ಅಂತ ಕೇಳಿಕೊಂಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಇಂತಹ ಪ್ರಶ್ನೆಗಳಿಗೆ ಸುದೀಪ್​​ ಪಾಸಿಟೀವ್​​​​ ಉತ್ತರ ಕೊಡ್ತಾ ಬಂದಿದ್ದಾರೆ. ದರ್ಶನ್​ ಯಾವಾಗಲೂ ನನ್ನ ಒಳ್ಳೆಯ ಸ್ನೇಹಿತ, ಒಳ್ಳೆ ಕಥೆ ಸಿಕ್ಕರೇ ಖಂಡಿತ ​ನಾವು ಜೊತೆಯಾಗಿ ಸಿನಿಮಾ ಮಾಡ್ತೀವಿ ಅಂತ ಹೇಳಿದ್ದಾರೆ.

ಕಿಚ್ಚ ಸುದೀಪ್​ ನೇತೃತ್ವದ ಕೆಸಿಸಿ ಕ್ರಿಕೆಟ್​ ಟೂರ್ನಮೆಂಟ್​​ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅನುಪಸ್ಥಿತಿ ಎದ್ದು ಕಾಣ್ತಿತ್ತು. ದಿನಕರ್​ ತೂಗುದೀಪ್​​​ ಬಂದರು, ದರ್ಶನ್​​ ಮಾತ್ರ ಬರಲೇಯಿಲ್ಲ. ಹಾಗಂತ ದರ್ಶನ್​​ಗೆ ಆಹ್ವಾನಕ್ಕೆ ಇರಲಿಲ್ಲ ಅಂತ ಅಲ್ಲ.

ಕಿಚ್ಚ ಸುದೀಪ್​ ಹೇಳಿದಂತೆ ಸ್ನೇಹ ಅನ್ನೋದು ಒನ್​ವೇ ಖಂಡಿತ ಅಲ್ಲ. ಎರಡು ಕೈ ಸೇರಿದರೆ ಚಪ್ಪಾಳೆ ಆಗುವಂತೆ, ಎರಡೂ ಕಡೆಯಿಂದ ಸ್ನೇಹ ಹಸ್ತ ಚಾಚಿದರೆ, ಇದಕ್ಕೊಂದು ಪರಿಹಾರ ಸಿಗುತ್ತೆ. ಸುದೀಪ್‌ ತನ್ನೆಲ್ಲಾ‌ ಅಹಂ ಬಿಟ್ಟು ಪದೇ ಪದೇ ಸ್ನೇಹದ ಹಸ್ತ ಚಾಚುತ್ತಲೇ ಇದ್ದಾರೆ. TV5 ಜೊತೆಗಿನ ಸಂದರ್ಶದನದಲ್ಲೂ ಅದು ಎದ್ದು ಕಾಣ್ತಿತ್ತು.. ದಚ್ಚು ಹೇಗೆ ಪ್ರತಿಕ್ರಿಯಿಸ್ತಾರೆ ಅನ್ನೋದಾದರೆ ಮೇಲೆ‌ ಇವರಿಬ್ಬರ ಗೆಳೆತನದ ಭವಿಷ್ಯ ನಿಂತಿದೆ.

ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಆ ವಿಷಗಳಿಗೆ ಮರೆತು ಮತ್ತೆ ಸುದೀಪ್​​ ಸ್ನೇಹ ಬೆಳೆಸಬೇಕು ಅನ್ನೋದು ಅಸಂಖ್ಯಾತ ಅಭಿಮಾನಿಗಳ ಕನಸು. ಇಬ್ಬರು ಒಟ್ಟಿಗೆ ಸಿನಿಮಾ ಮಾಡ್ಬೇಕು, ಫಸ್ಟ್​ ಡೇ ಫಸ್ಟ್​ ಶೋ ಅಂತಾದೊಂದು ರೇರ್​​ ಮಲ್ಟಿಸ್ಟಾರರ್ ಕಾಂಬಿನೇಷನ್​​​ ಸಿನಿಮಾ ನೋಡ್ಬೇಕು ಅಂತ ಕಾಯ್ತಿದ್ದಾರೆ.. TV5 ಆಶಯ ಕೂಡ ಅದೇ ಆಗಿದೆ. ದರ್ಶನ್​ ಮನಸ್ಸು ಮಾಡಿದರೆ, ಖಂಡಿತ ಅಭಿಮಾನಿಗಳ ಕನಸು ನನಸಾಗುತ್ತೆ. ದಿಗ್ಗಜರಿಬ್ಬರು ಒಂದಾದರೆ, ಕನ್ನಡ ಚಿತ್ರರಂಗದ ಕಳೆ ಹೆಚ್ಚಾಗುತ್ತೆ.

Recommended For You

About the Author: Dayakar

Leave a Reply

Your email address will not be published. Required fields are marked *