ನಾನಾ ರಣತಂತ್ರ- ದೋಸ್ತಿ ಉಳಿಯುತ್ತಾ..? ಉರುಳುತ್ತಾ..?

ಕಳೆದೊಂದು ವಾರದಿಂದ ಸರ್ಕಾರದ ಅಳಿವು ಮತ್ತು ಉಳಿವಿನ ವಿಚಾರದಲ್ಲಿ ನಾನಾ ಕಸರತ್ತು ನಡೆದಿವೆ. ರಾಜೀನಾಮೆ ನೀಡಿದವರಲ್ಲಿ ಐವರು ಬೆಂಗಳೂರಲ್ಲೇ ಇದ್ದರೆ, ಉಳಿದವರು ಮುಂಬೈನಲ್ಲಿ ಠಿಕಾಣಿ ಹೂಡಿದ್ದಾರೆ. ಬಿಜೆಪಿ ನಾಯಕರ ಪ್ರಯತ್ನ ಉಲ್ಟಾ ಮಾಡೋಕೆ ದೋಸ್ತಿಗಳು ಚಾಣಾಕ್ಷ ತಂತ್ರವನ್ನೇ ಅನುಸರಿಸುತ್ತಿದ್ದಾರೆ. ಬೆಂಗಳೂರಿನಲ್ಲಿರುವ ಮೂವರು ಅತೃಪ್ತರನ್ನು ಮನವೊಲಿಸುವಲ್ಲಿ ಬಹುತೇಖ ಸಕ್ಸಸ್ ಆಗುವ ಅವಕಾಶವಿದೆ.

ಬಿಜೆಪಿ ನಾಯಕರು ನಾವು ಆಪರೇಷನ್ ಮಾಡ್ತಿಲ್ಲ ಅಂತಲೇ ಶಾಸಕರನ್ನು ಸೆಳೆದು, ರಿಸೈನ್ ಮಾಡಿಸಿ ಮುಂಬೈನಲ್ಲಿ ಇಟ್ಟಿದ್ದಾರೆ. ಶಾಸಕರಿಂದಲೇ ಸುಪ್ರೀಂಗೂ ಅರ್ಜಿ ಹಾಕಿಸಿ, ರಾಜೀನಾಮೆ ಅಂಗೀಕರಿಸುವಂತೆ ಸ್ಪೀಕರ್ ಮೇಲೆ ಒತ್ತಡವನ್ನೂ ತರ್ತಿದ್ದಾರೆ.

ಬಿಜೆಪಿ ನಾಯಕರ ಈ ತಂತ್ರಗಾರಿಕೆ ನಡುವೆಯೇ ಕಾಂಗ್ರೆಸ್ ನಾಯಕರು ಅತೃಪ್ತರ ಮನವೊಲಿಸೋಕೆ ಪೂರ್ಣ ಪ್ರಮಾಣದ ರಣತಂತ್ರಕ್ಕೆ ಮೊರೆಹೋಗಿದ್ದಾರೆ. ಎಂಟಿಬಿ ನಾಗರಾಜ್ ಮನವೊಲಿಸುವಲ್ಲಿ ಕೈ ನಾಯಕರು ಯಶಸ್ವಿಯಾಗಿದ್ದಾರೆ. ಅತ್ತ, ರಾಮಲಿಂಗಾರೆಡ್ಡಿ ಹಿಡಿದಿಡುವ ಪ್ರಯತ್ನದಲ್ಲಿ ಸಿಎಂ ಕುಮಾರಸ್ವಾಮಿ ಇದ್ದಾರೆ. ಜೊತೆಗೆ ಸುಧಾಕರ್ ಮನವೊಲಿಕೆಗೂ ತೀರ್ವ ಪ್ರಯತ್ನ ನಡೆಸಿದ್ದಾರೆ. ಬಹುತೇಕ ಈ ಮೂವರು ಕಾಂಗ್ರೆಸ್‌ನಲ್ಲಿಯೇ ಉಳಿಯುವ ಸಾಧ್ಯತೆ ಹೆಚ್ಚಿದೆ.

ಎಂಟಿಬಿ, ಸುಧಾಕರ್, ರಾಮಲಿಂಗಾರೆಡ್ಡಿ ಮನವೊಲಿಕೆ ಜೊತೆಗೆ ತಮ್ಮ ಶಾಸಕರನ್ನ ಮೊದಲು ರಕ್ಷಿಸಿಕೊಳ್ಳೋಣ ಎಂದು ೩೦ ಶಾಸಕರನ್ನ ಯಶವಂತಪುರದ ತಾಜ್ ವೀವಂತ ಹೋಟೆಲ್‌ನಲ್ಲಿ ಕೈ ನಾಯಕರು ಹಿಡಿದಿಟ್ಟಿದ್ದಾರೆ. ಮುಂಬೈನಲ್ಲಿ ಬಿಜೆಪಿ ನಾಯಕರ ಸಂಪರ್ಕದಲ್ಲಿರುವ ಸೋಮಶೇಖರ್, ಭೈರತಿ ಬಸವರಾಜು ಮನವೊಲಿಕೆಗೂ ಪ್ರಯತ್ನ ನಡೆಸಿದ್ದಾರೆ. ಅತೃಪ್ತ ಶಾಸಕ ಮುನಿರತ್ನ ಮುಂದೆ ಬಿಟ್ಟು ಇಬ್ಬರನ್ನೂ ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ಮಂಗಳವಾರ ಇಲ್ಲವೇ ಬುಧವಾರ ವಿಶ್ವಾಸಮತ ಯಾಚನೆಗೆ ಸ್ಪೀಕರ್ ಅವಕಾಶ ನೀಡಲಿದ್ದು, ಬಹುಮತ ಸಾಬೀತು ವೇಳೆ ಅತೃಪ್ತರನ್ನ ಸರ್ಕಾರದ ಪರವಾಗಿ ಮತ ಹಾಕುವಂತೆ ಮಾಡಲು ದೋಸ್ತಿಗಳು ಹಗಲು,ರಾತ್ರಿ ವರ್ಕೌಟ್ ಮಾಡ್ತಿದ್ದಾರೆ.

ಕಾಂಗ್ರೆಸ್ ಶಾಸಕರು ಬೆಂಗಳೂರಲ್ಲೇ ವಾಸ್ತವ್ಯ ಹೂಡಿದರೆ, ಜೆಡಿಎಸ್‌ ದಂಡು ದೇವನಹಳ್ಳಿ ಸಮೀಪದ ಪ್ರೆಸ್ಟಿಜ್ ಗಾಲ್ಪ್ ಶೈರ್ ರೆಸಾರ್ಟ್‌ನಲ್ಲಿ ಬೀಡುಬಿಟ್ಟಿದೆ. ಯಾವುದೇ ಆಕಂಕವಿಲ್ಲದೆ, ಕೆಲ ಶಾಸಕರು ಪರ್ಮಿಶನ್ ತೆಗೆದುಕೊಂಡು ಆಸ್ಪತ್ರೆ ಮತ್ತು ಇತರೆ ಕೆಲಸಗಳಿಗೆ ಹೋಗಿ ಬಂದಿದ್ದಾರೆ.

ಇದೇ ವೇಳೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‌.ಕೆ.ಕುಮಾರಸ್ವಾಮಿ ಸೋಮವಾರ ಅಧಿವೇಶನ ಇದೆ. ಎರಡು ದಿನ ಇಲ್ಲೇ ಇರ್ತೇವಿ. ವಿಶ್ವಾಸಮತ ಯಾಚನೆ ಮಾಡುವುದು ಮುಖ್ಯಮಂತ್ರಿಗಳ ಧೈರ್ಯ ತೋರುತ್ತದೆ. ಈಗಾಗಲೇ ಎರಡು ಪಕ್ಷಗಳಿಂದ ಆರು ಜನ ಹೋಗಿದ್ದಾರೆ. ಅವರು ವಾಪಸ್ ಬರುತ್ತಾರೆ ಅನ್ನೋ ವಿಶ್ವಾಸ ಇದೆ ಎಂದರು.

ಒಟ್ಟಿನಲ್ಲಿ ಸರ್ಕಾರ ಬೀಳಿಸಿ ಸರ್ಕಾರ ರಚಿಸುವ ಬಿಜೆಪಿ ಪ್ರಯತ್ನವನ್ನ ಅಷ್ಟು ಸುಲಭವಾಗಿ ಬಿಡೋಕೆ ದೋಸ್ತಿಗಳು ಅಡ್ಡಗಾಲಾಕಿದ್ದಾರೆ. ಕೊನೆಯ ಕ್ಷಣದಲ್ಲೂ ಸರ್ಕಾರ ಸೇಫ್ ಮಾಡಿಕೊಳ್ಳೋಕೆ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಬಿಜೆಪಿಯವರ ಅವಿಶ್ವಾಸ ನಿರ್ಣಯಕ್ಕೂ ಅವಕಾಶ ಸಿಗದಂತೆ ಮಾಡಲು ಮೊದಲೇ ನಾವೇ ವಿಶ್ವಾಸಮತಯಾಚನೆ ಮಾಡ್ತೇವೆ ಅಂತ ಹೇಳಿದ್ದಾರೆ. ಹೀಗಾಗಿ ವಿಶ್ವಾಸಮತಯಾಚನೆ ವೇಳೆ ದೋಸ್ತಿಗಳ ಕೈ ಮೇಲಾಗುತ್ತಾ ಅಥವಾ ಬಿಜೆಪಿ ನಾಯಕರ ಕೈ ಮೇಲಾಗುತ್ತಾ ಅನ್ನೋದನ್ನ ಕಾದು ನೋಡ್ಬೇಕಿದೆ.

Recommended For You

About the Author: Dayakar

Leave a Reply

Your email address will not be published. Required fields are marked *